ಸೈಬರ್ ವಂಚನೆ : ನಷ್ಟಗೊಂಡ 9 ಲಕ್ಷ ರೂ. ವಾರಿಸುದಾರನಿಗೆ ಹಿಂತಿರುಗಿಸಿದ ಪೊಲೀಸ್
ಕಾಸರಗೋಡು: ಸೈಬರ್ ವಂಚನೆ ಮೂಲಕ ನಷ್ಟಗೊಂಡ ಹಣವನ್ನು ಕಾಸರಗೋಡು ಸೈಬರ್ ಪೊಲೀಸರು ಹಿಂಪಡೆದು ಅದನ್ನು ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಸ್ತುತ್ಯರ್ಹ ಸೇವೆ ನಿರ್ವಹಿಸಿದ್ದಾರೆ. ಜೆ.ಎಂ. ಸ್ಟೋಕ್ ಮಾರ್ಕೆಟ್ ಕಂಪೆನಿಯ ಪ್ರತಿನಿಧಿಗಳೆಂ ದು ತಪ್ಪು ತಿಳುವಳಿಕೆ ನೀಡಿ ಎಚ್.ಸಿ.ಎನ್. ಟೆಕ್ ಎಂಬ ಹೆಸರಿನ ಕಂಪೆನಿಯ ಶೇರ್ ನೀಡಿರುವುದಾಗಿ ನಂಬಿಸಿದ ವಂಚನೆಗಾರರು 2024 ಮಾರ್ಚ್ ತಿಂಗಳಲ್ಲಿ ಪಡನ್ನ ನಿವಾಸಿಯೋ ರ್ವರ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಎರಡು ಹಂತಗಳಲ್ಲಾಗಿ ಲಕ್ಷಾಂತರ ರೂ. ಲಪಟಾಯಿಸಿ ವಂಚಿಸಿದ್ದರು. ಹೀಗೆ ವಂಚನೆಗೊಳಗಾದ ಪಡನ್ನ ನಿವಾಸಿ ಬಳಿಕ ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ಸೈಬರ್ ಕ್ರೈಮ್ ಪೊಲೀಸ್ ಎಸ್‌ಐ ಎಂ.ವಿ. ಶ್ರೀದಾಸ್, ಎಎಸ್‌ಐ ಎ.ವಿ. ಪ್ರೇಮ ರಾಜನ್, ಎಂ. ಸುಧೀಶ್ ಮತ್ತು ಕೆ.ವಿ. ಹರಿದಾಸ್ ಎಂಬಿವರನ್ನೊಳ ಗೊಂಡ ಸೈಬರ್ ಪೊಲೀಸರ ತಂಡ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ನಷ್ಟಗೊಂಡ ಪಡನ್ನ ನಿವಾಸಿಯ ಹಣವನ್ನು ಹಿಂಪಡೆಯುವಲ್ಲಿ ಸಫಲರಾಗಿದ್ದಾರೆ.ಈ ರೀತಿ ವಂಚಕರು ಲಪಟಾ ಯಿಸಿದ ಹಣವನ್ನು ಅವರ ರತ್ನಿಕರ್ ಬ್ಯಾಂಕ್‌ನ ಮುಂಬೈ ಶಾಖೆ, ಕೆನರಾ ಬ್ಯಾಂಕ್‌ನ ಉತ್ತರ ಪ್ರದೇಶ ಶಾಖೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಿಹಾರ್ ಸಹರ್ಸಾ ಬಜಾರ್ ಶಾಖೆ ಗಳಿಂ ದಾಗಿ ಪೊಲೀಸರು ಪತ್ತೆಹಚ್ಚಿ ಮರು ವಶಪಡಿ ಸಿದ್ದರು. ನಂತರ ಈ ಹಣವನ್ನು ಅದರ ವಾರಿಸು ದಾರ ಪಡನ್ನ ನಿವಾಸಿಗೆ ಹಸ್ತಾಂತರಿಸಿದ್ದಾರೆ.