ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ: ಓರ್ವ ಸೆರೆ

ಮುಳ್ಳೇರಿಯ: ಆದೂರು ತಪಾಸಣಾ ಕೇಂದ್ರದಲ್ಲಿ  ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಜೋಸೆಫ್ ಜೆಯವರ ನೇತೃತ್ವದ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆ ವೇಳೆ ಆ ದಾರಿಯಾಗಿ ಬಂದ ಸ್ಕೂಟರ್‌ನಿಂದ 6 ಗ್ರಾಂ ಗಾಂಜಾ ಪತ್ತೆಹಚ್ಚಿದೆ.

ಇದಕ್ಕೆ ಸಂಬಂಧಿಸಿ ನೆಕ್ರಾಜೆ ಚರ್ಲಡ್ಕದ ಶಾಹೀದ್  ಅಫ್ರಿದಿ ಸಿ.ಎಚ್ (25)ನನ್ನು ಅಬಕಾರಿ ತಂಡ ವಶಕ್ಕೆ ತೆಗೆದು ಕೇಸು ದಾಖಲಿಸಿದೆ. ಅಬಕಾರಿ ಕಾರ್ಯಾಚರಣೆಯಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಗೋಪಿ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಗಣೇಶ್ ಕೆ, ಅಜೇಶ್ ವಿ. ಮೋಹನ್, ಸ್ವರೂಪ್ ಕೆ. ಮತ್ತು ಚಾಲಕ ರಾಧಾಕೃಷ್ಣನ್ ಎಂಬಿವರು ಒಳಗೊಂಡಿದ್ದರು.

You cannot copy contents of this page