ಮುಳ್ಳೇರಿಯ: ಸ್ಕೂಟರ್‌ನ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಿನ್ನಿಂ ಗಾರು ನಿವಾಸಿ ಕೊರಗಪ್ಪ ಪೂಜಾರಿ (51) ಎಂಬವರು ಗಾಯಗೊಂಡಿದ್ದಾರೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶನಿವಾರ ಮಧ್ಯಾಹ್ನ 12 ಗಂಟೆಗೆ ಸೀತಾಂಗೋಳಿ ಅಪ್ಸರ ಮಿಲ್ ಬಳಿ ಅಪಘಾತವುಂಟಾಗಿದೆ. ಕೊರಗಪ್ಪ ಪೂಜಾರಿ ಪೇರಾಲ್ ಕಣ್ಣೂರಿನ ತರವಾಡು ಮನೆಯಿಂದ ಸ್ವಂತ ಮನೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಇವರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಬಂದ ಬೈಕ್ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ.