ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಕರಡು ಯಾದಿ ಪ್ರಕಟ: ರಾಜ್ಯದಲ್ಲಿ 1,510 ಹೊಸ ವಾರ್ಡ್‌ಗಳು
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮುಂದಿನ ವರ್ಷ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿರುವಂತೆಯೇ ವಾರ್ಡ್ ವಿಭಜನೆಗಳ ಕರಡು ಯಾದಿಯನ್ನು ಡಿಲಿ ಮಿಟೇಷನ್(ಸೀಮಾ ನಿರ್ಣಯ) ಆಯೋಗ ಪ್ರಕಟಿಸಿದೆ. ಇದರಂತೆ ರಾಜ್ಯದಲ್ಲಿ ಸ್ಥಳೀಯಾ ಡಳಿತ ಸಂಸ್ಥೆಗಳ ವಾರ್ಡ್ಗಳ ಸಂಖ್ಯೆಯಲ್ಲಿ 1,510ರಷ್ಟು ಏರಿಕೆ ಉಂಟಾಗಿದೆ. ಪಂಚಾ ಯತ್ಗಳಲ್ಲಿ 1,375 ವಾರ್ಡ್ಗಳು ಹೊಸ ದಾಗಿ ರೂಪೀಕರಿಸಲ್ಪಟ್ಟಿದ್ದು, ಆ ಮೂಲಕ ಪಂಚಾಯತ್ಗಳಲ್ಲಿ ಈಗ ಇರುವ ವಾರ್ಡ್ ಗಳ ಸಂಖ್ಯೆ 15,962ರಿಂದ 17,337ಕ್ಕೇರಿದೆ.
ನಗರಸಭೆಗಳಲ್ಲಿ 128 ವಾರ್ಡಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಲಾಗಿದ್ದು, ಆ ಮೂಲಕ ಈಗಿನ ವಾರ್ಡ್ಗಳ ಸಂಖ್ಯೆ 3113ರಿಂದ 3241ಕ್ಕೇರಿದೆ. ನಗರಪಾಲಿಕೆ (ಕಾರ್ಪ ರೇಶನ್)ಗಳ ವಾರ್ಡ್ಗಳಲ್ಲಿ 7 ವಾರ್ಡ್ ಗಳನ್ನು ಹೊಸದಾಗಿ ರೂಪೀಕರಿಸಲಾಗಿದ್ದು, ಆ ಮೂಲಕ ಇವುಗಳ ಒಟ್ಟು ವಾರ್ಡ್ಗಳ ಸಂಖ್ಯೆ ಈಗ 414ರಿಂದ 421ಕ್ಕೇರಿದೆ. ಅಂದರೆ ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಈಗಿರುವ ಒಟ್ಟು ವಾರ್ಡ್ಗಳ ಸಂಖ್ಯೆ 19489ರಿಂದ 20,999ಕ್ಕೇರಿದೆ. ಅಂದರೆ 1510 ಹೊಸ ವಾರ್ಡ್ಗಳನ್ನು ಸೃಷ್ಟಿಸಲಿದೆ.
ಈ ಕರಡು ಯಾದಿ ಬಗ್ಗೆ ದೂರುಗಳು ಅಥವಾ ಅಭಿಪ್ರಾಯಗಳಿದ್ದಲ್ಲಿ ಅದನ್ನು ಡಿಸೆಂಬರ್ 3ರೊಳಗಾಗಿ ಡಿಲಿಮಿಟೇಷನ್ ಕಮಿಷನರ್ ಅಥವಾ ಕಾರ್ಯದರ್ಶಿಗಳು ಯಾ ಜಿಲ್ಲಾಧಿಕಾರಿಗಳಿಗೆ ನೇರವಾಗಿ ಅಥವಾ ರಿಜಿಸ್ಟರ್ಡ್ ಅಂಚೆ ಮೂಲಕವೂ ಸಲ್ಲಿಸಬಹುದಾಗಿದೆ. ಹೀಗೆ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಶೀಲಿಸಿ, ತಿದ್ದುಪಡಿ ಅಗತ್ಯವಿದ್ದಲ್ಲಿ ಅದರ ಆಧಾರದಲ್ಲಿ ಅಗತ್ಯದ ಬದಲಾವಣೆ ತಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು.
2011ರ ಜನಗಣತಿಯ ಆಧಾರದಲ್ಲಿ ಈ ವಾರ್ಡ್ ವಿಭಜನೆ ನಡೆಸಲಾಗಿದೆ. ಇದೇ ಮೊದಲಾಗಿ ಡಿಜಿಟಲ್ ತಂತ್ರಜ್ಞಾನ ಬಳಸಿ ವಾರ್ಡ್ ವಿಭಜನೆ ನಡೆಸಲಾಗಿದೆ.