ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ: ಜಿಲ್ಲೆಯಲ್ಲಿ ಪಂಚಾಯತ್, ನಗರಸಭೆಗಳಲ್ಲಿ 68 ವಾರ್ಡ್‌ಗಳ ಹೆಚ್ಚಳ

ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆಯ ಕರಡು ಯಾದಿಯನ್ನು ಸೀಮಾ ನಿರ್ಣಯ (ಡಿಲಿಮಿಟೇಶನ್) ಆಯೋಗ ಪ್ರಕಟಿಸಿರುವಂತೆಯೇ ಅದರಲ್ಲಿ ಕಾಸರಗೋಡು ಜಿಲ್ಲೆಯ ನಗರಸಬೆಗಳ ಹಾಗೂ ಗ್ರಾಮ ಪಂಚಾಯತ್ಗಳಲ್ಲಾಗಿ ವಾರ್ಡ್ಗಳ ಸಂಖ್ಯೆಯಲ್ಲಿ 68ರಷ್ಟು ಹೆಚ್ಚಳ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು 38 ಗ್ರಾಮ ಪಂಚಾಯತ್ಗಳು ಹಾಗೂ ಮೂರು ನಗರಸಭೆಗಳಿವೆ.
ನಗರಸಭೆಗಳ ಪೈಕಿ ಕಾಸರಗೋಡು ನಗರಸಭೆಯಲ್ಲಿ ಒಂದು ವಾರ್ಡ್ ಹೆಚ್ಚಿದೆ. ಒಂದು ವಾರ್ಡ್ ನಷ್ಟಗೊಂಡಿದೆ. ಇದರಂತೆ ವಿದ್ಯಾನಗರ ವಾರ್ಡನ್ನು ಎgಡಾಗಿ ವಿಭಜಿಸಿ, ಅದನ್ನು ವಿದ್ಯಾನಗರ ನೋರ್ತ್ ಮತ್ತು ವಿದ್ಯಾನಗರ ಸೌತ್ ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಇದು ಮಾತ್ರವಲ್ಲದೆ ಕೋಟೆಕಣಿ ಎಂಬ ಹೆಸರಲ್ಲಿ ಹೊಸ ವಾರ್ಡ್ಗೂ ರೂಪು ನೀಡಲಾಗಿದೆ. ಇದೇ ವೇಳ ತಳಂಗರೆ ಜದೀದ್ರೋಡ್ ವಾರ್ಡನ್ನು ರದ್ದುಪಡಿಸಲಾಗಿದೆ.
ಹೊಸದಾಗಿ ರೂಪೀಕರಿಸಲಾದ ಕೋಟೆಕಣಿ ಮತ್ತು ವಿದ್ಯಾನಗರ ವಾರ್ಡ್ಗಳನ್ನು ಎರಡಾಗಿ ವಿಭಜಿಸಿರುವುದು ಬಿಜೆಪಿಗೆ ಅನುಕೂಲಕರವಾಗಲಿದೆ. ಜದೀದ್ ರೋಡ್ ವಾರ್ಡನ್ನು ರದ್ದುಪಡಿಸಿದ್ದು, ಅದು ಮುಸ್ಲಿಂ ಲೀಗ್ಗೆ ಹೊಡೆತ ನೀಡಿದಂತಾಗಿದೆ.
ಕಾಸರಗೋಡು ನಗರಸಭೆಯಲ್ಲಿ ಈಗ ಒಟ್ಟು 38 ವಾರ್ಡ್ಗಳಿದ್ದು, ಅದು ಇನ್ನು 39ಕ್ಕೇರಲಿದೆ. ಸದ್ಯ ನಗರಸಭೆಯ 38 ವಾರ್ಡ್ಗಳಲ್ಲಿ ಮುಸ್ಲಿಂ ಲೀಗ್ (ಆಡಳಿತಪಕ್ಷ)-21, ಬಿಜೆಪಿ-14, ಸಿಪಿಎಂ-1 ಮತ್ತು ಇಬ್ಬರು ಪಕ್ಷೇತರ ಕೌನ್ಸಿಲರ್ಗಳಿದ್ದಾರೆ. ಇದೇ ವೇಳೆ ಈ ವಾರ್ಡ್ ವಿಭಜನೆ ಬಗ್ಗೆ ಮುಸ್ಲಿಂ ಲೀಗ್ ಆಕ್ಷೇಪ ವ್ಯಕ್ತಪಡಿಸಿದ್ದು, ಆ ಬಗ್ಗೆ ದೂರು ನೀಡಲಾಗುವುದೆಂದು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದಾರೆ.
ಜನಸಂಖ್ಯಾ ಆಧಾರದಲ್ಲಿ ಈ ವಾರ್ಡ್ ವಿಭಜನೆ ನಡೆಸಲಾಗಿಲ್ಲ. ಹಾಗೆ ನಡೆಸುತ್ತಿದ್ದಲ್ಲಿ ಕಾಸರಗೋಡು ನಗರಸಭೆಯಲ್ಲಿ ವಾರ್ಡ್ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕಾಗಿತ್ತು. ಆದರೆ ಈಗ ಕೇವಲ ಒಂದು ವಾರ್ಡ್ ಮಾತ್ರವೇ ಹೆಚ್ಚಿಸಲಾಗಿದೆ. ಈ ಬಗ್ಗೆ ದೂರು ನೀಡಲಾಗುವುದೆಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ ಹೊಸದುರ್ಗ ನಗರಸಭೆಯಲ್ಲಿ ಹೊಸದಾಗಿ ನಾಲ್ಕು ವಾರ್ಡ್ಗಳಿಗೆ ರೂಪು ನೀಡಲಾಗಿದೆ. ನೀಲೇಶ್ವರ ನಗರಸಭೆಯಲ್ಲಿ ವಾರ್ಡ್ಗಳ ಸಂಖ್ಯೆ 32ರಿಂದ ಈಗ 34ಕ್ಕೇರಿದೆ.
ಗ್ರಾಮ ಪಂಚಾಯತ್ಗಳಲ್ಲಿ ಮಧೂರು ಮುಂದೆ
ಜಿಲ್ಲೆಯಲ್ಲಿ 38 ಗ್ರಾಮ ಪಂಚಾಯತ್ಗಳಿದ್ದು, ಅವುಗಳಲ್ಲಿ ಒಟ್ಟಾರೆಯಾಗಿ ಈಗ 664 ವಾರ್ಡ್ಗಳಿದ್ದು, ವಾರ್ಡ್ ವಿಭಜನೆ ಬಳಿ ಆ ಸಂಖ್ಯೆ 725ಕ್ಕೇರಿದೆ. ಇದರಲ್ಲಿ ಅತೀ ಹೆಚ್ಚು ಎಂಬAತೆ ಮಧೂರು ಗ್ರಾಮ ಪಂಚಾಯತ್ಗಳಲ್ಲಿ ವಾರ್ಡ್ಗಳ ಸಂಖ್ಯೆ 20ರಿಂದ ಈಗ 24ಕ್ಕೇರಿದೆ. ಅಂದರೆ ಹೊಸದಾಗಿ 4 ವಾರ್ಡ್ ಗಳು ಹೆಚ್ಚಿವೆ. ಇನ್ನು ಮಂಜೇಶ್ವರ, ಮುಳಿಯಾರು, ತೃಕರಿಪುರ ಗ್ರಾಮ ಪಂಚಾಯತ್ಗಳಲ್ಲಿ ತಲಾ 3ರಂತೆಯೂ, ವರ್ಕಾಡಿ, ಪುತ್ತಿಗೆ, ಮೀಂಜ, ಪೈವಳಿಕೆ, ಬದಿಯಡ್ಕ, ಮೊಗ್ರಾಲ್ಪುತ್ತೂರು, ಬೇಡಡ್ಕ, ಉದುಮ, ಕೋಡೋಂಬೇಳೂರು, ಪಳ್ಳಿಕ್ಕರೆ, ಪನತ್ತಡಿ, ಪುಲ್ಲೂರು-ಪೆರಿಯಾ, ಕಿನಾನೂರು ಕರಿಂದಳA ಮತ್ತು ತೃಕರಿಪುರ ಪಂಚಾಯತ್ಗಳಲ್ಲಿ ತಲಾ ಎರಡರಂತೆ ಹಾಗೂ ಇತರ ಪಂಚಾಯತ್ಗಳಲ್ಲಿ ವಾರ್ಡ್ ಗಳ ಸಂಖ್ಯೆಯಲ್ಲಿ ತಲಾ ಒಂದರAತೆ ಹೆಚ್ಚಳ ಉಂಟಾಗಿದೆ.
ಜಿಲ್ಲೆಯಲ್ಲಿ ಒಟ್ಟು 6 ಬ್ಲೋಕ್ ಪಂಚಾಯತ್ಗಳಿದ್ದು, ಅವುಗಳಲ್ಲಿ ಇರುವ 83 ವಾರ್ಡ್ (ಡಿವಿಶನ)ಗಳ ಸಂಖ್ಯೆ ಈಗ 92ಕ್ಕೇರಿದೆ. ಇದೇ ರೀತಿ ಜಿಲ್ಲಾ ಪಂಚಾಯತ್ನಲ್ಲಿ ವಾರ್ಡ್ಗಳ ಸಂಖ್ಯೆ17ರಿAದ ಈಗ 18ಕ್ಕೇರಿದೆ.

Leave a Reply

Your email address will not be published. Required fields are marked *

You cannot copy content of this page