ಸ್ನಾನಕ್ಕೆಂದು ಹೊಳೆಗೆ ಇಳಿದ ವ್ಯಕ್ತಿ ನಾಪತ್ತೆ: ವ್ಯಾಪಕ ಶೋಧ
ಕಾಸರಗೋಡು: ಹೊಳೆಗೆ ಸ್ನಾನಕ್ಕೆಂದು ಇಳಿದ ವ್ಯಕ್ತಿ ಸೆಳೆತಕ್ಕೆ ನೀರಿನ ಸಿಲುಕಿ ನಾಪತ್ತೆಯಾದ ಘಟನೆ ಚೆಂಗಳ ಬಳಿ ನಡೆದಿದೆ. ಚೆಂಗಳ ಪಾಣಳಂ ನಿವಾಸಿ ಮಜೀದ್ (೫೪) ನಾಪತ್ತೆಯಾದ ವ್ಯಕ್ತಿ. ಅವರು ನಿನ್ನೆ ಸಂಜೆ ಸ್ನಾನಕ್ಕೆಂದು ಮನೆ ಪಕ್ಕದ ಹೊಳೆಗೆ ಇಳಿದಿದ್ದು ಆಗ ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದಾರೆ. ಆ ಬಗ್ಗೆ ಮಾಹಿತಿ ಲಭಿಸಿದ ಕಾಸರಗೋಡು ಅಗ್ನಿಶಾಮಕದಳ ಮತ್ತು ವಿದ್ಯಾನಗರ ಪೊಲೀಸರು ತಕ್ಷಣ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಊರವರ ಸಹಾಯದಿಂದ ವ್ಯಾಪಕ ಶೋಧ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.