ಸ್ನೇಹಿತ-ಪೊಲೀಸ್ ಸ್ಟೇಷನ್ ಎಕ್ಸ್‌ಟೆನ್ಶನ್ ಕೇಂದ್ರ ಉದ್ಘಾಟನೆ
ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್, ಸ್ನೇಹಿತ ಜೆಂಡರ್ ಹೆಲ್ಪ್ ಡೆಸ್ಕ್, ಕಾಸರಗೋಡು ಜಿಲ್ಲಾ ಪೊಲೀಸ್ ಇಲಾಖೆ ಜಂಟಿ ಆಶ್ರಯದಲ್ಲಿ ಸ್ನೇಹಿತ- ಪೊಲೀಸ್ ಸ್ಟೇಷನ್ ಎಕ್ಸ್‌ಟೆನ್ಶನ್ ಸೆಂಟರ್‌ನ್ನು ಕಾಸರಗೋಡು ಡಿವೈಎಸ್‌ಪಿ ಕಚೇರಿಯಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಮುಖ್ಯ ಅತಿಥಿಯಾಗಿದ್ದರು. ಕುಟುಂಬಶ್ರೀ ಎಡಿಎಂಸಿ ಕಿಶೋರ್ ಕುಮಾರ್ ಸ್ವಾಗತಿಸಿದರು. ಸ್ಮಿಜಾ, ಸುನಿಲ್ ಕುಮಾರ್ ಸಿ.ಕೆ, ಅಜಿತಾ ಕೆ, ಸುನಿತ, ಆಯಿಷಾ ಇಬ್ರಾಹಿಂ ಶುಭ ಕೋರಿದರು. ಸುಮ ವಂದಿಸಿದರು.