ಸ್ವಾತಂತ್ರ್ಯೋತ್ಸವ ನಾಡಿನಾದ್ಯಂತ ಸಂಭ್ರಮದ ಆಚರಣೆ
ಹೊಸದಿಲ್ಲಿ: ದೇಶದ ೭೭ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಾಂತ ಸಂಭ್ರಮದಿಂದ ಆಚರಿಸಲಾಯಿತು. ಹೊಸದಿಲ್ಲಿಯಲ್ಲಿ ಪ್ರಧಾನಮಮಂತ್ರಿ ನರೇಂದ್ರ ಮೋದಿ, ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ರಾಷ್ಟ್ರ ಧ್ವಜಾರೋಹಣ ನಡೆಸಿದರು. ಬಳಿಕ ನಡೆದ ಪಥ ಸಂಚಲನದ ವಂದನೆ ಸ್ವೀಕರಿಸಿದರು. ಸಶಸ್ತ್ರ ಸೇನೆಗಳು, ಅರೆ ಸೈನಿಕ ವಿಭಾಗಗಳು, ಪೊಲೀಸ್ ವಿಭಾಗಗಳು, ಎನ್ಸಿಸಿ-ಸ್ಕೌಟ್ಸ್, ಸ್ಟುಡೆಂಟ್ ಪೊಲೀಸ್ ವಿಭಾU ಗಳು ಎಂಬಿವುಗಳ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಿಂದ ಜರಗಿತು. ಕಲಾ-ಕ್ರೀಡಾ-ಸಾಂಸ್ಕೃತಿಕ ಸಂಘಟನೆಗಳ ನೇತೃತ್ವದಲ್ಲಿ ನಾಡಿನಾದ್ಯಂತ ಸ್ವಾತಂತ್ರೋತ್ಸವ ಆಚರಿಸಲಾಯಿತು. ಶುಚೀಕರಣ, ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಆಚರಣೆಗೆ ಹೆಚ್ಚಿನ ಮೆರುಗು ನೀಡಿತು. ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಸರಗೋಡಿನಲ್ಲಿ ಸಚಿವ ಎಂ.ಬಿ. ರಾಜೇಶ್ ರಾಷ್ಟ್ರ ಧ್ವಜ ಆರೋಹಣ ನಡೆಸಿ ಪಥ ಸಂಚಲನದ ವಂದನೆ ಸ್ವೀಕರಿಸಿದರು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕರಾದ ಇ. ಚಂದ್ರಶೇಖರನ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಞಂಬು, ಎ.ಕೆ.ಎಂ. ಅಶ್ರಫ್, ಎಂ. ರಾಜಗೋಪಾಲನ್, ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕೆ. ನಂಬ್ಯಾರ್, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪೊಲೀಸ್ ಅಧಿಕಾರಿಗಳು ವಾಚಿಸಿದ ರಾಷ್ಟ್ರ ಭಕ್ತಿಗೀತೆ ಆಲಾಪನೆ ಸ್ವಾತಂತ್ರ್ಯ ದಿನಚಾರಣೆಗೆ ಹೆಚ್ಚಿನ ಮೆರುಗು ನೀಡಿತು. ಗಾಯಕ ಕ್ಷೇಮ ಸಂಘ ಪರವನಡ್ಕ ಮೋಡಲ್ ರೆಸಿಡೆನ್ಶಿಯಲ್ ಸ್ಕೂಲ್, ನವೋದಯ ಸ್ಕೂಲ್, ಚಿನ್ಮಯ ವಿದ್ಯಾಲಯ ಎಂಬಿವುಗಳು ದೇಶಭಕ್ತಿ ಗೀತೆಗಳನ್ನು ಹಮ್ಮಿಕೊಂಡಿದ್ದರು.
ನವೋದಯ ನಗರ ಸೇವ ಕ್ಲಬ್ನಿಂದ ಕೈಕೊಟ್ಟಿಕ್ಕಳಿ, ಲಿಟಲ್ ಲಿಲ್ಲಿ ಸ್ಕೂಲ್, ಚಿನ್ಮಯ ವಿದ್ಯಾಲಯದವರಿಂದ ಜಾನಪದ ನೃತ್ಯ, ಪರವನಡ್ಕ ಮೋಡಲ್ ರೆಸಿಡೆನ್ಶಿಯಲ್ ಸ್ಕೂಲ್ನಿಂದ ಜಾನಪದ ಹಾಡು ನಡೆಯಿತು.