ಹಲವು ಅಬಕಾರಿ ಪ್ರಕರಣಗಳ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಕಾಸರಗೋಡು: ಹಲವು ಅಬಕಾರಿ ಪ್ರಕರಣಗಳ ಆರೋಪಿಯನ್ನು ಕಾಸರಗೋಡು ಎಕ್ಸೈಸ್ ರೇಂಜ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದ ಅಬಕಾರಿ ತಂಡ ಬಂಧಿಸಿದೆ. ಚೆರ್ಕಳ ನಿವಾಸಿ ಶಾಜಹಾನ್ ಎಸ್. (43) ಬಂಧಿತ ಆರೋಪಿ. ಈತ ಹಲವು ಅಬಕಾರಿ ಪ್ರಕ ರಣಗಳಲ್ಲಿ ಆರೋಪಿಯಾಗಿದ್ದು, ಈ ತನಕ ತಲೆಮರೆಸಿಕೊಂಡಿ ದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸಜಿತ್ ಕುಮಾರ್ ಮತ್ತು ಅಬ್ದುಲ್ ಅಸೀಸ್ ಎಂಬವರು ಒಳಗೊಂಡಿದ್ದಾರೆ.