ಹಲವು ವರ್ಷಗಳಿಂದ ಚಿಕಿತ್ಸೆಯಲ್ಲಿದ್ದ ಎಂಡೋಸಲ್ಫಾನ್ ಸಂತ್ರಸ್ತ ಯುವಕ ನಿಧನ
ಮುಳ್ಳೇರಿಯ: ಹಲವು ವರ್ಷಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಎಂ ಡೋಸಲ್ಫಾನ್ ಸಂತ್ರಸ್ತರಾದ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಪಂಜರಿಕೆ ನಿವಾಸಿ ಸುಧಾಮ ಮಣಿಯಾಣಿ ಎಂಬವರ ಪುತ್ರ ಉದಯ (34) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜನ್ಮತಃ ಇವರಿಗೆ ಅಸೌಖ್ಯ ಬಾಧಿಸಿತ್ತೆನ್ನ ಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ತನಾದ ಉದಯರಿಗೆ ಹಲವು ವರ್ಷಗಳಿಂದ ಭಾರೀ ಮೊತ್ತ ವ್ಯಯಿಸಿ ಚಿಕಿತ್ಸೆ ನೀಡಲಾಗಿತ್ತು.
ಕಳೆದ ಒಂದು ತಿಂಗಳಿಂದ ಅಸೌಖ್ಯ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಅನಂತರ ಕಾಞಂಗಾಡ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ಮೃತಪಟ್ಟರು. ಮೃತದೇಹ ನಿನ್ನೆ ಸ್ವ-ಗೃಹಕ್ಕೆ ತಲುಪಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.
ಮೃತರು ತಂದೆ, ತಾಯಿ ಸರಸ್ವತಿ, ಸಹೋದರ ಸುರೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.