ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ಯುವತಿ ಸಾವು: ಇಬ್ಬರಿಗೆ ಗಾಯ

ಕಾಸರಗೋಡು: ಹಳಿ ದಾಟು ತ್ತಿದ್ದ ವೇಳೆ ರೈಲು ಗಾಡಿ ಢಿಕ್ಕಿ ಹೊಡೆದು ಹೊಸದುರ್ಗ ನಿವಾಸಿಯಾ ಗಿರುವ ಯುವತಿ ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ತೃಶೂರಿನಲ್ಲ್ಲಿ ನಡೆದಿದೆ.

ಆದರೆ ಸಾವನ್ನಪ್ಪಿದ ಯುವತಿ ಮತ್ತು ಗಾಯಗೊಂಡವರ ಕುರಿತಾಗಿ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಗಾಯ ಗೊಂಡವರಲ್ಲಿ ಓವೆ ಪರವೂರು ನಿವಾಸಿ ಉಷಾ ಎಂದು ತಿಳಿಯಲಾ ಗಿದೆ. ಇಂದು ಬೆಳಿಗ್ಗೆ ತೃಶೂರು ಡಿವೈನ್ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಹೊಸದುರ್ಗ ನಿವಾಸಿ ಯಾದ ಯುವತಿ ಮತ್ತು ಇತರ ಇಬ್ಬರು ಧ್ಯಾನ ಕೇಂದ್ರಕ್ಕೆ ಹೋಗುವ ದಾರಿ ಮಧ್ಯೆ ರೈಲು ಹಳಿ ದಾಟುತ್ತಿದ್ದ ವೇಳೆ  ಎರ್ನಾಕುಳಂ ಭಾಗದಿಂದ ಬರುತ್ತಿದ್ದ ರೈಲು ಅವರಿಗೆ ಢಿಕ್ಕಿ ಹೊಡೆದಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page