ಹಿರಿಯ ಕಾಂಗ್ರೆಸ್ ನೇತಾರ ಕುಮರಿ ಆನಂದನ್ ನಿಧನ

ಚೆನ್ನೈ: ತಮಿಳುನಾಡಿನ ಹಿರಿಯ ಕಾಂಗ್ರೆಸ್ ನೇತಾರ ಕುಮರಿ ಆನಂದನ್ (92) ಎಂಬವರು ನಿಧನಹೊಂದಿದರು.
ಕನ್ಯಾಕುಮಾರಿ ಜಿಲ್ಲೆಯ ಕುಮರಿಮಂಗಲದಲ್ಲಿ ಜನಿಸಿದ ಆನಂದನ್ ಅವರು ಕಾಮರಾಜ್ರ ನೀತಿಯಿಂದ ಆಕರ್ಷಿತರಾಗಿ ಕಾಂಗ್ರೆಸ್ ಸೇರಿದ್ದರು. 1977ರಲ್ಲಿ ನಾಗರಕೋವಿಲ್ ಮಂಡಲ ದಿಂದ ಗೆಲುವು ಸಾಧಿಸಿ ಸಂಸತ್ಗೆ ತಲುಪಿದ್ದರು. ಮೊಟ್ಟಮೊದಲ ಬಾರಿಗೆ ಲೋಕಸಭೆಯಲ್ಲಿ ತಮಿಳಿನಲ್ಲಿ ಭಾಷಣ ಮಾಡಿದ ಸಂಸದ ಇವರಾಗಿದ್ದರು. 1980ರಲ್ಲಿ ಗಾಂಧಿ ಕಾಮರಾಜ್ ರಾಷ್ಟ್ರೀ ಯ ಕಾಂಗ್ರೆಸ್ ಪಾರ್ಟಿ ರೂಪೀಕರಿಸಿ ದರು.1980, 1984ರ ಚುನಾವಣೆಯಲ್ಲಿ ಈ ಪಕ್ಷದಿಂದ ಗೆಲುವುಸಾಧಿಸಿ ವಿಧಾನ ಸಭೆಗೆ ತಲುಪಿದ್ದರು. ಅನಂತರ ಕಾಂಗ್ರೆಸ್ಗೆ ಮರು ಸೇರ್ಪಡೆಗೊಂಡ ಆನಂದನ್ 1989, 2001ರ ಚುನಾವ ಣೆUಳಲ್ಲೂ ಗೆಲುವು ಸಾಧಿಸಿ ಶಾಸಕನಾದರು. 2001 ಮಾರ್ಚನಲ್ಲಿ ತೊಂಡಾರ್ ಕಾಂಗ್ರೆಸ್ ಎಂಬ ಪಕ್ಷ ರೂಪೀ ಕರಿಸಿದರು.ಆದರೆ ಶೀಘ್ರದಲ್ಲೇ ಅವರು ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಗೊಂ ಡರು. 2021ರಲ್ಲಿ ಕಾಮ ರಾಜ್ ಪುರಸ್ಕಾರ ನೀಡಿ ರಾಜ್ಯ ಸರಕಾರ ಅವರನ್ನು ಗೌರವಿಸಿತ್ತು. ತೆಲಂಗಾನದ ಮಾಜಿ ರಾಜ್ಯಪಾಲರೂ, ಹಿರಿಯ ಬಿಜೆಪಿ ನೇತಾರೆಯಾದ ತಮಿಳಿಸೈ ಆನಂದನ್ರ ಪುತ್ರಿಯಾಗಿದ್ದಾರೆ.

You cannot copy contents of this page