ಹಿರಿಯ ವ್ಯಾಪಾರಿ ನಿಧನ

ಕಾಸರಗೋಡು: ಕೂಡ್ಲು ನಿವಾಸಿ ಹಿರಿಯ ವ್ಯಾಪಾರಿಯಾದ ಗಣೇಶ್ ಎನ್. (77) ನಿನ್ನೆ ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಗಣೇಶ್ ಸ್ಟಾಲ್‌ನ ಮಾಲಕನೂ ‘ಕಾರವಲ್’ ಏಜೆಂಟರೂ ಆಗಿದ್ದರು. ಅಲ್ಪ ಕಾಲದಿಂದ ವಯೋ ಸಹಜ ಅಸೌಖ್ಯ ದಿಂದಿದ್ದರು. ಮೃತರು ಪತ್ನಿ ನಿರ್ಮಲ, ಮಕ್ಕಳಾದ ಪ್ರೇಮ್‌ಜಿತ್ (ವ್ಯಾಪಾರಿ, ಕಾರವಲ್ ಏಜೆಂಟ್), ಶ್ರೀಜಾ ಸುರೇಶ್, ಅಳಿಯ ಸುರೇಶ್ ಕಾಶಿ (ಗಲ್ಫ್), ಸೊಸೆ ಸೋನಿ, ಸಹೋದರ ಬಾಲಕೃಷ್ಣ, ಸಹೋದರಿ ಯರಾದ ರೇವತಿ, ಚಿತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಮತ್ತಿಬ್ಬರು ಸಹೋದರರಾದ ಆನಂದ, ಅಶೋಕ್ ಈ ಹಿಂದೆ ನಿಧನ ರಾಗಿದ್ದಾರೆ.

You cannot copy contents of this page