ಹೆಚ್ಚಿದ ಉಷ್ಣತೆ: ಕ್ರೀಡಾ ಸ್ಪರ್ಧೆಗಳಿಗೆ ನಿಯಂತ್ರಣ

ತಿರುವನಂತಪುರ: ರಾಜ್ಯದಾದ್ಯಂತ ಭಾರೀ ಉಷ್ಣತೆ ಮುಂದುವರಿಯುವು ದರಿಂದ ಬೆಳಿಗ್ಗೆ ೧೦ರಿಂದ ಸಂಜೆ ೪ ಗಂಟೆವರೆಗೆ ಔಟ್‌ಡೋರ್ ಕ್ರೀಡಾ ಸ್ಪರ್ಧೆಗಳನ್ನು ನಡೆಸಕೂಡದೆಂದು ಕ್ರೀಡಾ ಇಲಾಖೆ ತಿಳಿಸಿದೆ. ಕ್ರೀಡಾ ತರಬೇತಿ, ವಿವಿಧ ಸೆಲೆಕ್ಷನ್ ಟ್ರಯಲ್ ಎಂಬಿವುಗಳಿಗೂ ಈ ನಿಯಂತ್ರಣ ಅನ್ವಯಗೊಳ್ಳಲಿದೆ. ಭಾರೀ ಉಷ್ಣತೆ ಮುಂದುವರಿಯುವವರೆಗೆ ಈ ನಿಯಂತ್ರಣ ಜ್ಯಾರಿಯಲ್ಲಿರುವುದು.

ಉಷ್ಣತೆಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಕ್ರೀಡಾತಾರೆಗಳು ಜಾಗ್ರತೆ ಪಾಲಿಸ ಬೇಕೆಂದೂ ಕ್ರೀಡಾ ಸಚಿವ ವಿ. ಅಬ್ದುಲ್ ರಹಿಮಾನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page