ಹೈಯರ್ ಸೆಕೆಂಡರಿ ಫಲಿತಾಂಶ: ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ

ಕಾಸರಗೋಡು: ರಾಜ್ಯ ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಅತ್ಯುತ್ತಮ ಸಾಧನೆಗೈದಿದೆ. ಜಿಲ್ಲೆಯಲ್ಲಿ ಜನರಲ್ ಸ್ಕೂಲ್ ವಿಭಾಗದಲ್ಲಿ 96 ಶೇ. ಫಲಿತಾಂಶ ಗಳಿಸಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಸ್ಥಾನಕ್ಕೆ ತಲುಪಿದೆ.

ಜನರಲ್ ಸ್ಪೆಶಲ್ ಶಾಲೆಗಳ ಸಂಯುಕ್ತ ಫಲಿತಾಂಶದಲ್ಲಿ ಚೆರ್ಕಳ ಮಾರ್ತೋಮಾ ಹೈಯರ್ ಸೆಕೆಂಡರಿ ಸ್ಪೆಷಲ್ ಸ್ಕೂಲ್ ಪ್ರಥಮ ಸ್ಥಾನ ಗಳಿಸಿದೆ.  ಶ್ರವಣಶಕ್ತಿ, ಮಾತನಾಡಲು ಸಾಧ್ಯವಿಲ್ಲದ ಮಕ್ಕಳು ಮಾರ್ತೋಮಾ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಶೇಣಿ ಶಾಲೆಯಲ್ಲಿ ಪರೀಕ್ಷೆ ಬರೆದ  121 ಮಕ್ಕಳು ಸಯನ್ಸ್, ಕಾಮರ್ಸ್ ವಿಭಾಗಗಳ ಲ್ಲಾಗಿ ಪ್ಲಸ್‌ಟು ಪರೀಕ್ಷೆ ಬರೆದ್ದಾರೆ. ಇದರಲ್ಲಿ 116 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಗಳಿಸಿದ್ದಾರೆ.  2014ರಲ್ಲಿ ಶೇಣಿ ಶಾಲೆಯಲ್ಲಿ ಪ್ಲಸ್‌ಟು ಆರಂಭಿಸಲಾಗಿತ್ತು. ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಐದು ಮಂದಿಗೆ ಎ ಪ್ಲಸ್ ಲಭಿಸಿದೆ. ಹತ್ತರಷ್ಟು ಮಕ್ಕಳಿಗೆ 5 ವಿಷಯಗಳಲ್ಲಿ ಎ ಪ್ಲಸ್, 1 ವಿಷಯದಲ್ಲಿ ಎ ಗ್ರೇಡ್ ಲಭಿಸಿದೆ.

ಅಧ್ಯಾಪಕರ, ರಕ್ಷಕರ, ವಿದ್ಯಾರ್ಥಿಗಳ, ಮೆನೇಜ್‌ಮೆಂಟ್, ಪಿಟಿಎಯ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಈ ಸಾಧನೆಗೈಯ್ಯಲು ಸಾಧ್ಯವಾಗಿದೆಯೆಂದು ಪ್ರಾಂಶುಪಾಲ  ಶಾಸ್ತಾ ತಿಳಿಸಿದ್ದಾರೆ. ಉತ್ತೀ ರ್ಣರಾದ ವಿದ್ಯಾರ್ಥಿಗಳನ್ನು, ಅಧ್ಯಾಪಕರನ್ನು, ರಕ್ಷಕರನ್ನು, ಪಿಟಿಎ  ಎಂಬಿವರನ್ನು ಶಾಲಾ ಮೆನೇಜರ್, ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾದ ಸೋಮಶೇಖರ ಜೆ.ಎಸ್ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page