ಹೈಯರ್ ಸೆಕೆಂಡರಿ ಫಲಿತಾಂಶ: ರಾಜ್ಯದಲ್ಲಿ 78.69 ಶೇ. ಮಂದಿ ಉತ್ತೀರ್ಣ: ಜಿಲ್ಲೆಗೆ 73.27 ಶೇ.
ಕಾಸರಗೋಡು: ರಾಜ್ಯದಲ್ಲಿ ಈ ಬಾರಿ ಹೈಯರ್ ಸೆಕೆಂಡರಿಯಲ್ಲಿ 78.69 ಶೇ. ವಿದ್ಯಾರ್ಥಿಗಳು, ಅದೇ ರೀತಿ ವಿಎಚ್ಎಸ್ಇ ಯಲ್ಲಿ 71.42 ಶೇ. ವಿದ್ಯಾರ್ಥಿಗಳು ಉತ್ತೀ ರ್ಣರಾಗಿ ದ್ದಾರೆ. ಹೈಯರ್ ಸೆಕೆಂಡರಿಯಲ್ಲಿ ಕಳೆದ ವರ್ಷಕ್ಕಿಂತ 4.26 ಶೇ., ವಿಎಚ್ ಎಸ್ಇಯಲ್ಲಿ 6.97 ಶೇ. ಕಡಿಮೆಯಾಗಿದೆ.
ಹೈಯರ್ ಸೆಕೆಂಡರಿಯಲ್ಲಿ 39,242 ಮಂದಿಗೆ ಎಲ್ಲಾ ವಿಷಯಗಳಲ್ಲೂ ಎಪ್ಲಸ್ ಲಭಿಸಿದೆ. 105 ಮಕ್ಕಳಿಗೆ ಪೂರ್ಣ ಅಂಕ (1200) ಲಭಿಸಿದೆ.
ವೊಕೇಶನಲ್ ಹೈಯರ್ ಸೆಕೆಂಡರಿಯಲ್ಲಿ 251 ಮಂದಿಗೆ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಲಭಿಸಿದೆ. ಇದೇ ವೇಳೆ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾದ ಹೈಯರ್ ಸೆಕೆಂಡರಿ ಶಾಲೆಗಳಸಂಖ್ಯೆ 63. ಕಳೆದ ವರ್ಷ 77 ಶಾಲೆಗಳಾ ಗಿತ್ತು. ಈ ಬಾರಿ 7 ಸರಕಾರಿ ಶಾಲೆಗ ಳಲ್ಲಿ ಮಾತ್ರ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದೇ ವೇಳೆ ಸರಕಾರಿ ಶಾಲೆಗ ಳಲ್ಲಿ ಫಲಿತಾಂಶ ಕಡಿಮೆಯಾಗಲು ಕಾರಣವೇನೆಂದು ಪರಿಶೀಲಿಸಿ ಎರಡು ವಾರದೊಳಗೆ ವರದಿ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.
ಇದೇ ವೇಳೆ ಹೈಯರ್ ಸೆಕೆಂಡರಿ ಫಲಿತಾಂಶದಲ್ಲಿ ಕಾಸರಗೋಡು ಜಿಲ್ಲೆ ಈ ಬಾರಿಯೂ ಹಿಂದಿದೆ. ಈ ಬಾರಿ 73.27 ಶೇ. ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕಿಂತಲೂ 5.55 ಶೇ. ಕಡಿಮೆಯಾಗಿದೆ. ಕಳೆದ ವರ್ಷ 78.82 ಶೇ. ಮಂದಿ ಉತ್ತೀರ್ಣರಾಗಿದ್ದರು. ಜಿಲ್ಲೆಯಲ್ಲಿ ಚೆರ್ಕಳ ಮಾರ್ತೋಮ ಮೂಕರ ಶಾಲೆಗೆ ಮಾತ್ರ 100 ಶೇ. ಫಲಿತಾಂಶ ಲಭಿಸಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ 100 ಶೇ. ಫಲಿತಾಂಶ ಗಳಿಸಲು ಸಾಧ್ಯವಾಗಿಲ್ಲ.
ಅದೇ ರೀತಿ ಜಿಲ್ಲೆಯಲ್ಲಿ ಒಬ್ಬರಿಗೆ ಮಾತ್ರವೇ ಎಲ್ಲಾ ವಿಷಯಗಳಲ್ಲೂ ಪೂರ್ಣ ಅಂಕ ಗಳಿಸಲು ಸಾಧ್ಯವಾಗಿದೆ. ಮುಟ್ಟತ್ತೋಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಫ ಅಶ್ರಫ್ ಸಯನ್ಸ್ ವಿಭಾಗದಲ್ಲಿ 1200ರಲ್ಲಿ 1200 ಅಂಕ ಗಳಿಸಿದ್ದಾರೆ. 1192 ಮಂದಿಗೆ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಲಭಿಸಿದೆ. ವಿಎಚ್ಎಸ್ ವಿಭಾಗದಲ್ಲಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಕುಂಜತ್ತೂರು, ಜಿವಿಎಚ್ಎಸ್ಎಸ್ ಮುಳ್ಳೇರಿಯ ಶಾಲೆಗೆ 100 ಶೇ. ಫಲಿತಾಂಶ ಲಭಿಸಿದೆ. ಆದರೂ ಜಿಲ್ಲೆಯಲ್ಲಿ ಒಟ್ಟು 61.31 ಶೇ. ಮಾತ್ರವೇ ಫಲಿತಾಂಶ ದಾಖಲಾಗಿದೆ. ಈ ವಿಭಾಗದಲ್ಲಿ ರಾಜ್ಯದಲ್ಲೇ ಅತೀ ಕಡಿಮೆ ಫಲಿತಾಂಶ ಲಭಿಸಿರುವುದು ಕಾಸರಗೋಡು ಜಿಲ್ಲೆಗಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 105 ಹೈಯರ್ ಸೆಕೆಂಡರಿ ಶಾಲೆಗಳಿವೆ. ಈ ಶಾಲೆಗಳಲ್ಲಿ 15,674 ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 15,523 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ಬರೆದವರಲ್ಲಿ 11,374 ಮಂದಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಗಳಿಸಿದ್ದಾರೆ. ಈ ಮೂಲಕ ಜಿಲ್ಲೆಗೆ 78.87 ಶೇ. ಫಲಿತಾಂಶ ಬಂದಿದೆ. 1192 ಮಂದಿ ಎಲ್ಲಾ ವಿಷಯಗಳಲ್ಲೂ ಎಪ್ಲಸ್ ಗಳಿಸಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಹೈಯರ್ ಸೆಕೆಂಡರಿ ಓಪನ್ ಸ್ಕೂಲ್ನಲ್ಲಿ 1992 ಮಂದಿ ಪರೀಕ್ಷೆಗೆ ಹೆಸರು ನೋಂದಾಯಿಸಿದರು. ಈ ಪೈಕಿ 1912 ಮಂದಿ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ 737 ಮಂದಿ (38 ಶೇ.) ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. 4 ಮಂದಿಗೆ ಮಾತ್ರ ಎಲ್ಲಾ ವಿಷಯಗಳಲ್ಲೂ ಎ ಪ್ಲಸ್ ಲಭಿಸಿದೆ. ವಿಎಚ್ಎಸ್ಇ ವಿಭಾಗದಲ್ಲಿ 1225 ಮಂದಿ ಪರೀಕ್ಷೆ ಬರೆದಿದ್ದು, ಈ ಪೈಕಿ 61.31 ಶೇ. ಮಂದಿ ಉತ್ತೀರ್ಣರಾಗಿದ್ದಾರೆ.
ಇದೇ ವೇಳೆ ಹೈಯರ್ ಸೆಕೆಂಡರಿಯಲ್ಲಿ 42 ಶಾಲೆಗಳಿಗೆ ಮಾತ್ರವೇ 80 ಶೇಕಡಾಕ್ಕಿಂತ ಹೆಚ್ಚು ಫಲಿತಾಂಶ ಲಭಿಸಿದೆ. ಚೆರ್ಕಳ ಮಾರ್ತೋಮಾ ಶಾಲೆಯಲ್ಲಿ ಪರೀಕ್ಷೆ ಬರೆದ 12 ಮಕ್ಕಳು ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ.
80 ಶೇಕಡಾಕ್ಕಿಂತ ಹೆಚ್ಚು ಫಲಿತಾಂಶ ಗಳಿಸಿದ ಶಾಲೆಗಳಲ್ಲಿ ಕುಂಬಳೆ ಜಿಎಚ್ಎಸ್ಎಸ್ (84.93 ಶೇ.), ಎಡನೀರು ಸ್ವಾಮೀಜೀಸ್ ಎಚ್ಎಸ್ಎಸ್ (87.45), ಪುತ್ತಿಗೆ ಮುಹಿಮ್ಮಾತ್ ಎಚ್ಎಸ್ಎಸ್ (80), ನಾಯ ಮ್ಮಾರಮೂಲೆ ಟಿಐಎಚ್ಎಸ್ಎಸ್ (87.45), ಬಿಎಆರ್ಎಚ್ಎಸ್ಎಸ್ ಬೋವಿಕ್ಕಾನ (84.75), ಕಾಸರಗೋಡು ಗರ್ಲ್ಸ್ ಜಿವಿಎಚ್ಎಸ್ಎಸ್ (80.77), ನವಜೀವನ ಎಚ್ಎಸ್ಎಸ್ ಪೆರಡಾಲ (83.80), ನೀರ್ಚಾಲು ಎಂಎಸ್ಸಿ ಎಚ್ಎಸ್ (81.74), ಎಸ್ಎಸ್ ಎಚ್ಎಸ್ಎಸ್ ಶೇಣಿ (86.29), ಜಿವಿಎಚ್ಎಸ್ಎಸ್ ಮುಳ್ಳೇರಿಯ (85.27), ಎಸ್ಎಪಿಎಚ್ಎಸ್ಎಸ್ ಅಗಲ್ಪಾಡಿ (82.22) ಶಾಲೆಗಳು ಒಳಗೊಂಡಿವೆ.