ಹೊಗೆಸೊಪ್ಪು ಉತ್ಪನ್ನ: ವ್ಯಾಪಾರ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ

ಕಾಸರಗೋಡು: ಹೊಗೆಸೊಪ್ಪು ಉತ್ಪನ್ನಗಳ ನಿಯಂತ್ರಣದಂಗವಾಗಿ ಜಿಲ್ಲೆಯ ವ್ಯಾಪಾರ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸಿತು. ಅನಧಿಕೃತ ಹೊಗೆಸೊಪ್ಪು ಉತ್ಪನ್ನಗಳನ್ನು ನಾಶಪಡಿಸಲಾಯಿತು. ಏಳು ಅಂಗಡಿಗಳಿಗೆ ನೋಟೀಸ್ ನೀಡಲಾಯಿತು. ಕಾಞಂಗಾಡ್‌ನ ಒಂದು ಚಿತ್ರಮಂದಿರ ಸಹಿತ ೧೦೦ರಷ್ಟು ಸಂಸ್ಥೆಗಳಿಗೆ ದಂಡ ವಿಧಿಸಲಾಯಿತು. ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕೈಗೊಂಡ ತೀರ್ಮಾನದನುಸಾರ ತಪಾಸಣೆಗಳನ್ನು ಇನ್ನೂ ತೀವ್ರಗೊಳಿಸಲಾಗುವುದೆಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಡಾ| ಪಿ. ರಂಜಿತ್‌ರ ನೇತೃತ್ವದಲ್ಲಿ 600ರಷ್ಟು ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು.

RELATED NEWS

You cannot copy contents of this page