ಹೊಸ ಇತಿಹಾಸ ಸೃಷ್ಟಿ: ತೆರೆ ಕಂಡ ಎರಡೇ ದಿನದಲ್ಲಿ ಗಳಿಕೆಯಲ್ಲಿ ಶತಕ ಬಾರಿಸಿದ ‘ಎಂಬುರಾನ್’
ತಿರುವನಂತಪುರ: ತೆರೆಕಂಡ ಎರಡೇ ದಿನದಲ್ಲಿ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಗಳಿಸುವ ಮೂಲಕ ಯೂನಿವರ್ಸಲ್ ಸ್ಟಾರ್ ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ‘ಎಂಬುರಾನ್’ ಎಂಬ ಮಲೆಯಾಳಂ ಸಿನಿಮಾ ಕೇರಳದ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
ನಟ ಹಾಗೂ ನಿರ್ದೇಶಕರೂ ಆಗಿರುವ ಪೃಥ್ವೀರಾಜ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಇವರೇ ಈ ಹಿಂದೆ ನಿರ್ದೇಶಿಸಿ 200 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ಮೂಲಕ ಸೂಪರ್ ಹಿಟ್ ಆಗಿದ್ದ ಮೋಹನ್‌ಲಾಲ್ ನಟಿಸಿದ ಲೂಸಿಫರ್ ಚಿತ್ರದ ಎರಡನೇ ಭಾಗವಾಗಿದೆ ಎಂಬುರಾನ್.