೧೫ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ: ಪಿತ ಸೆರೆ

ಕಾಸರಗೋಡು: ಹದಿನೈದು ವರ್ಷದ ಪುತ್ರಿಗೆ  ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಆಕೆಯ ತಂದೆಯನ್ನು ಮೇಲ್ಪರಂಬ ಪೊಲೀಸರುಬಂಧಿಸಿದ್ದಾರೆ.

ಬಂಧಿತ ಆರೋಪಿಗೆ ೪೨ ವರ್ಷ ಪ್ರಾಯವಿದೆ. ಪೋಕ್ಸೋ ಕಾನೂನು ಪ್ರಕಾರ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಬಾಲಕಿ ೧೧ ವರ್ಷ ಪ್ರಾಯವಾದಾಗಲೇ ಆರೋಪಿ ಆಕೆಗೆ ನಿರಂತರ ಲೈಂಗಿಕ ಕಿರುಕುಳ ನೀಡಲಾರಂಭಿಸಿದ್ದನೆಂದು ಬಾಲಕಿ ಪೊಲೀಸರಲ್ಲಿ  ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾಳೆ. ಈ ಬಾಲಕಿಯನ್ನು ಆಕೆ ಕಲಿಯುತ್ತಿರುವ ಶಾಲೆಯಲ್ಲಿ ಕೌನ್ಸಿಲಿಂಗ್‌ಗೊಳಪಡಿಸಲಾಗಿತ್ತು. ಅದರಲ್ಲಿ ಆಕೆ ನಡೆದ ವಿಷಯ ತಿಳಿಸಿದ್ದಳು.  ಬಾಲಕಿಯನ್ನು ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದ್ದರು. ಆರೋಪಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಮಾತ್ರವಲ್ಲ ಐಪಿಸಿ ಸೆಕ್ಷನ್‌ನ ೩೭೬, ೩೭೬(೨), ೩೭೬(೩), ೩೭೬(ಎ), ೩೫೪(ಬಿ) ಮತ್ತು ೭೭ ಜೆಜೆಆರ್‌ಐ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page