೧೯ರ ಯುವತಿ ಆತ್ಮಹತ್ಯೆ ಫೋನ್ ಪೊಲೀಸ್ ಕಸ್ಟಡಿಯಲ್ಲಿ

ಕುಂಬಳೆ: ೧೯ರ ಹರೆಯದ ಯುವತಿ ಮಲಗುವ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಂದ್ಯೋಡು ಅಡ್ಕದ ಫ್ಲಾಟ್‌ನಲ್ಲಿ  ವಾಸವಾಗಿರುವ ಬದ್ರುದ್ದೀನ್-ಮರಿಯಮ್ಮ ದಂಪತಿ ಪುತ್ರಿ  ರನ ಫಾತಿಮಾ (೧೯) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ೧೦ ಗಂಟೆಗೆ ತಾಯಿ ಬಾಗಿಲು ತೆರೆದು ನೋಡಿದಾಗ ಪುತ್ರಿ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿ ದ್ದಾಳೆ.  ಮಾಹಿತಿ ತಿಳಿದು  ತಲುಪಿದ ಪೊಲೀಸರು ಮಹಜರು ನಡೆಸಿದ ಬಳಿಕ ಜನರಲ್ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಘಟನೆಯಲ್ಲಿ ಕುಂಬಳೆ ಪೊಲೀಸರು ಅಸಹಜ  ಸಾವಿಗೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಂಗವಾಗಿ ರನ  ಫಾತಿಮಳ ಮೊಬೈಲ್ ಫೋನ್ ಕಸ್ಟಡಿಗೆ ತೆಗೆಯಲಾಗಿದೆ.  ಇದನ್ನು ಫೋರೆನ್ಸಿಕ್ ತಪಾಸಣೆಗೆ ಕಳುಹಿಸಲಾ ಗುವುದೆಂದು ಎಸ್‌ಐ ಇ. ಅನೂಪ್ ತಿಳಿಸಿದ್ದಾರೆ. ತಂದೆ ಬದ್ರುದ್ದೀನ್ ಕೊಲ್ಲಿಯಲ್ಲಿದ್ದು, ಸಹೋದರಿಯರಾದ ಬುಶ್ರಾ, ಮನ್ಸೂರ, ರಹೀಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಈ ಆತ್ಮಹತ್ಯೆ ಪ್ರಕರಣದಲ್ಲಿ ನಿಗೂಢತೆಯಿದೆ ಎಂದು ಹೇಳಲಾಗುತ್ತಿದೆ.

RELATED NEWS

You cannot copy contents of this page