120ರಷ್ಟು ಮಹಿಳೆಯರನ್ನು ಮಾನಭಂಗಪಡಿಸಿದ ಸ್ವ-ಘೋಷಿತ ದೇವಮಾನವ ಜಿಲೇಬಿ ಬಾಬ ಜೈಲಿನಲ್ಲಿ ಸಾವು
ಚಂಢೀಗಡ್: 120ರಷ್ಟು ಮಹಿಳೆಯರನ್ನು ಮಾನಭಂಗಗೈದು ಅದರ ವೀಡಿಯೋ ದಾಖಲಿಸಿ ಬೆದರಿಸಿದ ಪ್ರಕರಣದಲ್ಲಿ ಸೆರೆಯಾಗಿ ಜೈಲಿನಲ್ಲಿದ್ದ ಹರಿಯಾಣದ ವಿವಾದ ದೇವಮಾನವ ಜಿಲೇಬಿ ಬಾಬ ಅಲಿಯಾಸ್ ಬಿಲ್ಲು ರಾಂ ಹಿಸಾರ್ ಸೆಂಟ್ರಲ್ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ದೈಹಿಕ ಅಸ್ವಸ್ಥತೆಯ ಹಿನ್ನೆಲೆಯಲ್ಲಿ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ ವೆಂದು ಸಬ್ ಇನ್ಸ್‌ಪೆಕ್ಟರ್ ಬೂಪ್‌ಸಿಂಗ್ ತಿಳಿಸಿದ್ದಾರೆ. ಫತೇಬಾಬಾದ್ ಜಿಲ್ಲೆಯ ತೋಹಾನ ನಿವಾಸಿಯಾದ ಬಿಲ್ಲುರಾಂ 2023 ಜನವರಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದನು. ತಳ್ಳುಗಾಡಿಯಲ್ಲಿ ಜಿಲೇಬಿ ಮಾರಾಟ ಮಾಡುವುದು ಈತನ ಉದ್ಯೋಗವಾ ಗಿತ್ತು. ಬಳಿಕ ಸ್ವ-ಘೋಷಿತ ದೇವ ಮಾನವನಾಗಿ ಈತ ಕರೆಸಿಕೊಂಡಿ ದ್ದನು. ಜಿಲೇಬಿ ಬಾಬ ಎಂಬ ಹೆಸರಲ್ಲಿ ಬಳಿಕ ಪ್ರಸಿದ್ಧನಾಗಿದ್ದು, ತನ್ನ ಬಳಿ ಸಹಾಯಕ್ಕಾಗಿ ಬರುವ ಮಹಿಳೆಯರಿಗೆ ಮಾದಕ ಪದಾರ್ಥ ನೀಡಿ ಮಾನಭಂಗ ಪಡಿಸುವುದು ಈತನ ರೀತಿಯಾಗಿತ್ತು. ಇದರ ದೃಶಗಳನ್ನು ಸೆರೆಹಿಡಿದು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ಲಪಟಾಯಿಸುವುದು ಇವನ ಕಸುಬಾಗಿತ್ತು. ಪ್ರಾಯ ಪೂರ್ತಿಯಾಗದ ಹೆಣ್ಣುಮಕ್ಕಳನ್ನು ಎರಡು ಬಾರಿ ದೌರ್ಜನ್ಯಗೈದ ಪ್ರಕರಣದಲ್ಲಿ ಪೋಕ್ಸೋ ಪ್ರಕಾರವೂ ಈತನ ವಿರುದ್ಧ ಕೇಸು ದಾಖಲಿಸಲಾಗಿತ್ತು. ಪತೆಹಬಾದ್ ಪ್ರಥಮದರ್ಜೆ ನ್ಯಾಯಾಲಯ ಈತನಿಗೆ 14 ವರ್ಷ ಶಿಕ್ಷೆ ವಿಧಿಸಿತ್ತು.