120 ಪ್ಯಾಕೆಟ್ ಕರ್ನಾಟಕ ಮದ್ಯ ವಶ ಆರೋಪಿ ಪರಾರಿ
ಕಾಸರಗೋಡು: ನೆಲ್ಲಿಕುಂಜೆ ಸಾಕ್ಷರತಾ ಮಿಷನ್ ಕಚೇರಿಯ ಹಿಂದುಗಡೆ ಅಬಕಾರಿ ತಂಡ ನಿನ್ನೆ ನಡೆಸಿದ ಶೋಧ ಕಾರ್ಯಾಚರಣೆ ಯಲ್ಲಿ ೧೮೦ ಎಂ.ಎಲ್‌ನ 120 ಟೆಟ್ರಾ ಪ್ಯಾಕೆಟ್ (21.9 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಅದನ್ನು ಅಲ್ಲಿ ಬಚ್ಚಿಟ್ಟಿದ್ದ ವ್ಯಕ್ತಿ ಪರಾರಿಯಾಗಿರುವು ದಾಗಿಯೂ, ಆತ ಈ ಹಿಂದೆ ಬೇರೊಂದು ಅಬಕಾರಿ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಸಿ.ಕೆ.ವಿ ಸುರೇಶ್‌ರ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್‌ಗಳಾದ ನೌಶಾದ್ ಕೆ, ಅಜೀಶ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್ ಸಜೀಶ್ ಪಿ (ಚಾಲಕ) ಎಂಬವರನ್ನೊಳಗೊಂಡ ತಂಡ ಈ ಅಬಕಾರಿ ಕಾರ್ಯಾಚರಣೆ ನಡೆಸಿದೆ.