ಬಂಟರ ಸಂಘ ಆಶ್ರಯದಲ್ಲಿ ಗ್ರಾಮೋತ್ಸವ
ಕುಂಬ್ಡಾಜೆ: ಬಂಟರ ಸಂಘ ಕುಂಬ್ಡಾಜೆ ಇದರ ಆಶ್ರಯದಲ್ಲಿ ಗ್ರಾಮೋತ್ಸವ ನಿನ್ನೆ ಜರಗಿತು. ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಬಂಟರ ಸಂಘದ ಕುಂಬ್ಡಾಜೆ ಘಟಕ ಅಧ್ಯಕ್ಷ ಸಂತೋಷ್ ರೈ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ರವೀಶ ತಂತ್ರಿ ಕುಂಟಾರು, ರವೀಶ ಪಡುಮಲೆ, ಸಂಜೀವ ಶೆಟ್ಟಿ ಮೊಟ್ಟೆಕುಂಜ ಭಾಗವಹಿಸಿದರು. ಬಿ. ಸುಬ್ಬಯ್ಯ ರೈ, ಪದ್ಮನಾಭ ಶೆಟ್ಟಿ ವಳಮಲೆ, ಮಹಾಬಲ ಶೆಟ್ಟಿ ಉಪ್ಪಳ, ರಾಕುಲ್ ಅಡ್ಯಂತಾಯ, ರೋಶಿನಿ ಜನಾರ್ದನನ್, ಮುಖೇಶ್, ಆನಂದ ಕೆ. ಮವ್ವಾರ್, ಸುಧಾಮ ಗೋಸಾಡ, ಗಿರೀಶ ಗೋಸಾಡ, ರವೀಂದ್ರ ರೈ ಗೋಸಾಡ, ಜಯಪ್ರಕಾಶ್ ಶೆಟ್ಟಿ, ನಮೃತ್‌ರಾಜ್, ಅರ್ಷ ಕುಮಾರ್ ರೈ ಬೆಳಿಂಜ, ಸೀತಾರಾಮ ರೈ ಮುಂಡ್ರಕೊಂಜೆ ಉಪಸ್ಥಿತರಿದ್ದರು.