14ರ ಹರೆಯದ ಬಾಲಕಿಗೆ ಕಿರುಕುಳ : ತಂದೆ ವಿರುದ್ಧ ಪೋಕ್ಸೋ ಕೇಸು
ಕಾಸರಗೋಡು: ಹದಿನಾಲ್ಕರ ಹರೆಯದ ಮಗಳಿಗೆ ಕಿರುಕುಳ ನೀಡಿದ ಆರೋಪದಂತೆ ತಂದೆ ವಿರುದ್ಧ ಬೇಕಲ ಪೊಲೀಸರು ಪೋ ಕ್ಸೋ ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದಾರೆ. ಕಿರುಕುಳ ಕ್ಕೊಳಗಾದ ಬಾಲಕಿ ಹಾಗೂ ತಂದೆ ಮಲಪ್ಪುರಂ ಜಿಲ್ಲೆಯವರಾಗಿದ್ದಾರೆ. ಊರಿನಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಬಾಲಕಿ ಇತ್ತೀಚೆಗೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಆಕೆ ದೌರ್ಜನ್ಯಕ್ಕೊಳಗಾದ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಸಂಬಂಧಿ ಕರು ಈ ವಿಷಯವನ್ನು ಬೇಕಲ ಪೊಲೀ ಸರಿಗೆ ತಿಳಿಸಿದ್ದಾರೆ. ಘಟನೆ ನಡೆದಿರು ವುದು ಮಲಪ್ಪುರಂ ಜಿಲ್ಲೆಯಲ್ಲಾಗಿರು ವುದರಿಂದ ಪ್ರಕರಣವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.