16ರ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ದೌರ್ಜನ್ಯ: ಮೂರು ಮಂದಿ ಆರೋಪಿಗಳು ಸೆರೆ; ಓರ್ವನಿಗಾಗಿ ಶೋಧ
ಕಾಸರಗೋಡು: ಹದಿನಾರರ ಹರೆಯದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಆರೋಪದಂತೆ ವಿದ್ಯಾನಗರ ಪೊಲೀಸರು ೪ ಮಂದಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯ ಆರೋಪಿ ಸಹಿತ ಮೂರು ಮಂದಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಯುವಕನಿಗಾಗಿ ತನಿಖೆ ಆರಂಭಿಸಲಾಗಿದೆ.
ನೀರ್ಚಾಲು ಕಡಂಬಳದ ಮುಹಮ್ಮದ್ ರಿಫಾಯಿ (25), ನೆಕ್ರಾಜೆಯ ರಮೇಶನ್ (25), ಚೆಂಗಳದ ಮನೋಜ್ (26) ಎಂಬಿವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಎಂಬಾತನಿಗಾಗಿ ಶೋಧ ನಡೆಯುತ್ತಿದೆ. ಮುಹಮ್ಮದ್ ರಿಫಾಯಿ ವಿರುದ್ಧ ದೌರ್ಜನ್ಯ ಆರೋಪದಂತೆ ಪೋಕ್ಸೋ ಪ್ರಕಾರ ಕೇಸು ದಾಖಲಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯನ್ನು ಈತ ಪುಸಲಾಯಿಸಿ ಕರೆದೊಯ್ದು ದೌರ್ಜನ್ಯಗೈದ ಆರೋಪದಂತೆ ಕೇಸು ದಾಖಲಿಸಲಾಗಿದೆ. ಇತರ ಮೂರು ಮಂದಿ ಆರೋಪಿಗಳು ಬಾಲಕಿಗೆ ಶಾರೀರಿಕವಾಗಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇವರ ವಿರುದ್ಧವೂ ಪೋಕ್ಸೋ ಪ್ರಕಾರಕೇಸು ದಾಖಲಿಸಲಾಗಿದೆ.