20 ಗೋಣಿ ಅಡಿಕೆ ಕಳವು

ಬಂದಡ್ಕ: ಬೇಡಗಂ ಅಂಬಿಲಾಡಿಯಲ್ಲಿ ಕೊಠಡಿಯಲ್ಲಿರಿಸಿದ್ದ 20 ಗೋಣಿ ಒಣಗಿದ ಅಡಿಕೆ ಕಳವಿಗೀಡಾಗಿರುವುದಾಗಿ ದೂರಲಾಗಿದೆ. ನೇರ ಎಂಬಲ್ಲಿನ ಕಣ್ಣನ್ ಎಂಬ ಕೃಷಿಕನ ಅಡಿಕೆ ಗುರುವಾರ ರಾತ್ರಿ ಕಳವಿಗೀಡಾಗಿದೆ. ಕಣ್ಣನ್‌ರ ಮಾಲಕತ್ವದಲ್ಲಿರುವ ಕಟ್ಟಡದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಡಿಕೆ ಕಳವು ನಡೆಸಿದ್ದಾರೆ. ಕೊಠಡಿಯಲ್ಲಿ 40 ಗೋಣಿ ಚೀಲಗಳಲ್ಲಿ ಅಡಿಕೆ ಸಂಗ್ರಹಿಸಿಡಲಾಗಿತ್ತು. ಇದರಿಂದ 20 ಗೋಣಿ ಚೀಲ ಅಡಿಕೆಯನ್ನು ದೋಚಲಾಗಿದೆ. ನಿನ್ನೆ ಬೆಳಿಗ್ಗೆ ಈ ವಿಷಯ ಅರಿವಿಗೆ ಬಂದಿದೆ.  ಸುಮಾರು ಒಂದೂವರೆ ಲಕ್ಷ ರೂಪಾಯಿಯ ಅಡಿಕೆ ಕಳವಿಗೀಡಾಗಿರುವುದಾಗಿ ಅಂದಾಜಿಸಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬೇಡಗಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page