ಭಾಸ್ಕರನಗರದಲ್ಲಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳ ಅಪಘಾತ: 7 ಮಂದಿ ಆಸ್ಪತ್ರೆಯಲ್ಲಿ

ಕುಂಬಳೆ: ಕುಂಬಳೆ ಸಮೀಪದ ಭಾಸ್ಕರನಗರ ಕೆಎಸ್‌ಟಿಪಿ ರಸ್ತೆಯಲ್ಲಿ ನಿನ್ನೆ ರಾತ್ರಿ ಗಂಟೆಗಳ ವ್ಯತ್ಯಾಸದಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾ ಗಿವೆ. ಈ ಪೈಕಿ ಒಂದು ಕಾರಿನಲ್ಲಿದ್ದ ಏಳು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮೊದಲ ಅಪಘಾತ ರಾತ್ರಿ ೧೦ ಗಂಟೆಗೆ ಸಂಭವಿಸಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಬರುತ್ತಿದ್ದ ಕಳತ್ತೂರು ನಿವಾಸಿಗಳು ಸಂಚರಿಸಿದ ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಮಗುಚಿ ಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸಣ್ಣಪುಟ್ಟ …

ಮುಳ್ಳೇರಿಯ 110 ಕೆವಿ ಸಬ್‌ಸ್ಟೇಷನ್‌ನಲ್ಲಿ ಬೆಂಕಿ ಆಕಸ್ಮಿಕ: ಪೊಟೆನ್ಶಿಯಲ್ ಟ್ರಾನ್ಸ್‌ಫಾರ್ಮರ್ ಭಸ್ಮ

ಮುಳ್ಳೇರಿಯ: ಇಲ್ಲಿನ 110 ಕೆವಿ ಸಬ್ ಸ್ಟೇಷನ್‌ನಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದೆ. ನೌಕರರು ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದೆ. ಇಂದು ಮುಂಜಾನೆ ಮೂರೂವರೆ ಗಂಟೆಗೆ ಘಟನೆ ನಡೆದಿದೆ. ಸಬ್ ಸ್ಟೇಷನ್ ಯಾರ್ಡ್‌ನ ಪೊಟೆನ್ಶಿಯಲ್ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಉಂಟಾಗಿತ್ತು. ಕರ್ತವ್ಯದಲ್ಲಿದ್ದ ನೌಕರರು ಯಾರ್ಡ್‌ನಲ್ಲಿ ಇದ್ದ ಎಸ್ಟಿಂಗ್ಯೂಶರ್ ಉಪಯೋಗಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲ ಉಂ ಟಾಗದ ಹಿನ್ನೆಲೆಯಲ್ಲಿ ಕಾಸರಗೋಡು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಅಲ್ಲಿನ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ …

ಕೇಂದ್ರ ಸರಕಾರದ ಪರ ನಿರಂತರ ಹೇಳಿಕೆ: ಶಶಿ ತರೂರ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ನೇತಾರರಿಂದ ಆಗ್ರಹ

ನವದೆಹಲಿ: ಕೇಂದ್ರ ಸರಕಾರದ ಪರ ನಿರಂತರ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ನ ಹಿರಿಯ ನೇತಾರ ಹಾಗೂ ತಿರುವನಂತಪುರ ಸಂಸ ದರೂ ಆಗಿರುವ ಶಶಿ ತರೂರ್  ವಿರುದ್ಧ    ಹಲವು ಕಾಂಗ್ರೆಸ್ ಮುಖಂಡರು ಕೆಂಡಾಮಂಡಲರಾಗಿ ದ್ದಾರೆ. ಅಲ್ಲದೆ  ಶಶಿ ತರೂರ್ ವಿರುದ್ಧ  ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು  ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರತೊಡಗಿದ್ದಾರೆ. ಇನ್ನು ಕೆಲವು ಕಾಂಗ್ರೆಸ್  ನೇತಾ ರರು  ಕ್ರಮ ಕೈಗೊಳ್ಳುವ ಮೊದಲು  ಶಶಿ ತರೂರ್‌ರಿಂದ ಸ್ಪಷ್ಟೀಕರಣ ಕೇಳಬೇಕೆಂದು ಆಗ್ರಹಿಸಿದ್ದಾರೆ. ಶಶಿ ತರೂರ್ ಬಿಜೆಪಿಯ ಸೂಪರ್ ವಕ್ತಾರನಂತೆ ಹೇಳಿಕೆ …

ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಫೋಟೋಗ್ರಾಫರ್ ಮೃತ್ಯು: ಶೋಕತಪ್ತ ಬಜೆ ಪ್ರದೇಶ

ಉಪ್ಪಳ: ಮಂಗಳೂರು ಬಳಿಯ ಕೋಡಿಕಲ್‌ನಲ್ಲಿ ಕಾರು ಹೊಂಡಕ್ಕೆ ಮಗುಚಿ ಮೃತಪm್ಟ ಬಂದ್ಯೋಡು ಸಮೀಪದ ಹೇರೂರು ಬಜೆ ನಿವಾಸಿ ದಿ| ನಾರಾಯಣ ಮಯ್ಯರ ಪುತ್ರ ಪೊಟೋಗ್ರಾಫರ್ ಸೂರ್ಯನಾರಾಯಣ ಮಯ್ಯ (47) ರ ಅಂತ್ಯಕ್ರಿಯೆ ನಿನ್ನೆ ಸಂಜೆ ಮನೆ ಪರಿಸರದಲ್ಲಿ ನಡೆದಿದ್ದು ಸ್ಥಳೀಯರು ಕಣ್ಣೀರ ಕೋಡಿ ಹರಿಸಿದ್ದಾರೆ. ಮಂಗಳೂರು ಪಣಂಬೂರು ಸಮೀಪದ ಶ್ರೀ ನಂದನೇಶ್ವರ ಕ್ಷೇತ್ರದ ಸಭಾಂಗಣದಲ್ಲಿ ಸೀಮಂತ ಕಾರ್ಯಕ್ರಮದ ಪೊಟೋ ತೆಗೆಯಲು ನಿನ್ನೆ ಮುಂಜಾನೆ 5ಗಂಟೆಗೆ ಮನೆಯಿಂದ ತಮ್ಮ ಆಲ್ಟೋಕಾರಿನಲ್ಲಿ ಹೊರಟಿದ್ದರು. ಸುಮಾರು 6ಗಂಟೆ ವೇಳೆ ಕೋಡಿಕಲ್ ನಲ್ಲಿ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬೂತ್ ನಿರ್ಮಾಣಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ

ಕುಂಬಳೆ: ಕುಂಬಳೆ  ಆರಿಕ್ಕಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೂಲ್ ಬೂತ್ ನಿರ್ಮಾಣಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಟೋಲ್ ಬೂತ್ ನಿರ್ಮಾಣ ವನ್ನು ವಿರೋಧಿಸಿ ರೂಪು ನೀಡಲಾದ ಕ್ರಿಯಾ ಸಮಿತಿಗಾಗಿ ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಹೈಕೋರ್ಟ್ ಈ ತಡೆಯಾಜ್ಞೆ ಹೊರಡಿಸಿದೆ. ಅರ್ಜಿಯನ್ನು ಹೈಕೋರ್ಟ್ ಜೂನ್ ೨೬ರಂದು ಮತ್ತೆ ಪರಿಶೀಲಿ ಸಲಿದೆ. ಕುಂಬಳೆಯಿಂದ 20 ಕಿಲೋ ಮೀಟರ್‌ನಷ್ಟು ದೂರವಿರುವ ತಲಪ್ಪಾಡಿ ಯಲ್ಲಿ ಟೋಲ್  ವಸೂಲಿ …

ಮನೆಗೆ ನುಗ್ಗಿ ಯುವತಿ, ತಂದೆಗೆ ಇರಿತ: ಯುವಕನ ವಿರುದ್ದ ಕೊಲೆಯತ್ನ  ಪ್ರಕರಣ

ಬದಿಯಡ್ಕ: ಮನೆಗೆ ಅತಿಕ್ರಮಿಸಿ ನುಗ್ಗಿ ಯುವತಿ ಹಾಗೂ ಆಕೆಯ ತಂದೆಯನ್ನು ಇರಿದು ಕೊಲೆಗೈಯ್ಯಲು ಯತ್ನಿಸಿದ ಆರೋಪದಂತೆ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಹತ್ಯೆಯತ್ನ ಕೇಸು ದಾಖಲಿಸಿಕೊಂ ಡಿದ್ದಾರೆ. ಬೇಳ ನಿವಾಸಿ ರೋಯ್ಸನ್ ಎಂಬಾತನ ವಿರುದ್ಧ ಕೇಸು ದಾಖಲಿಸ ಲಾಗಿದೆ. ಬೇಳ ಪೆರಿಯಡ್ಕದ ರೈಮಂಡ್ ಡಿ’ಸೋಜಾ (65),  ಪುತ್ರಿ ರೇಂಜಲ್ ರನಿಟ್ ಡಿ’ಸೋಜಾ (24) ಎಂಬಿವರಿಗೆ ಇರಿದು ಗಾಯಗೊಳಿಸಲಾಗಿದೆ. ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ಶನಿವಾರ ರಾತ್ರಿ 7.30ರ ವೇಳೆ ಆರೋಪಿ ರೋಯ್ಸನ್ ಚಾಕು …

ಕೀಯೂರಿನಲ್ಲಿ ಬಿರುಸಿನ ಗಾಳಿಗೆ ಅಪಾರ ನಾಶನಷ್ಟ

ಕಾಸರಗೋಡು: ನಿನ್ನೆ ರಾತ್ರಿ 11 ಗಂಟೆಗೆ ಬೀಸಿದ ಬಿರುಸಿನ ಗಾಳಿಗೆ ಕೀಯೂರಿನಲ್ಲಿ ಅಪಾರ ನಾಶನಷ್ಟ ಸಂಭವಿಸಿದೆ. ೮ರಷ್ಟು ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಅದರಲ್ಲಿ ಒಂದು ಕಂಬ ಕಾರಿನ ಮೇಲೆ ಬಿದ್ದು ಕಾರು ಹಾನಿಯಾಗಿದೆ. ಕವಿ ಕರುಣನ್ ಎಂಬವರ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಆದರೆ ಯಾರಿಗೂ ಅಪಾಯ ಉಂಟಾಗಿಲ್ಲ. ಇದೇ ವೇಳೆ 11 ಗಂಟೆಗೆ ಕೀಯೂರು ಹಾಗೂ ಪರಿಸರದಲ್ಲಿ ಕತ್ತಲೆ ಆವರಿಸಿರುವುದು ಸ್ಥಳೀಯರಲ್ಲಿ ಭೀತಿಗೆ ಕಾರಣವಾಯಿತು.

ಅಂಗಳದಲ್ಲಿ ಪುತ್ರನಿಗೆ ಆಹಾರ ನೀಡುತ್ತಿದ್ದ ತಾಯಿಗೆ ಹಾವು ಕಚ್ಚಿ ಸಾವು

ತೃಶೂರು: ಮನೆಯಂಗಳದಲ್ಲಿ ನಿಂತಿದ್ದ ಯುವ ತಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ನಡೆದಿದೆ. ಮಾಪ್ರಾಣಂ ಮಾಡಾಯಿಕೋ ಣಂ ನಿವಾಸಿ ಶರೊನ್‌ರ ಪತ್ನಿ ಹೆನ್ನ (28) ಮೃತಪಟ್ಟ ಯುವತಿ. ಮನೆಯ ಅಂಗಳದಲ್ಲಿ ನಿಂತು ತನ್ನ ಪುತ್ರನಿಗೆ ಆಹಾರ ನೀಡುತ್ತಿದ್ದ ಮಧ್ಯೆ ಹೆನ್ನರ ಕಾಲಿಗೆ ಹಾವು ಕಚ್ಚಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ನಿನ್ನೆ ಸಾವು ಸಂಭವಿಸಿದೆ. ಇಂದು ಮಧ್ಯಾಹ್ನ ಇರಿಂಙಾಲಕುಡ ಸೈಂಟ್ ಥೋಮಸ್ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಕಣ್ವತೀರ್ಥ, ಹನುಮಾನ್‌ನಗರ ಸಹಿತ ವಿವಿಧೆಡೆ ವ್ಯಾಪಕ ಕಡಲ್ಕೊರೆತ: ರಸ್ತೆ ನೀರು ಪಾಲು ಭೀತಿ

ಉಪ್ಪಳ: ಮಂಜೇಶ್ವರ ಹಾಗೂ ಉಪ್ಪಳದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಸ್ಥಳೀಯರಲ್ಲಿ ಭೀತಿ ಉಂಟಾಗಿದೆ. ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ಕಣ್ವತೀರ್ಥ ಹಾಗೂ ಪರಿಸರ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಡಲ್ಕೊರೆತ ಮುಂದುವರಿಯುತ್ತಿದ್ದು, ಕಣ್ವತೀರ್ಥ ಪ್ರದೇಶದಲ್ಲಿ ಈಗಾಗಲೇ ಹಲವಾರು ಗಾಳಿ, ತೆಂಗಿನ ಮರಗಳು, ಜಸಿಂತ ಎಂಬವರ ಮನೆಯ ಆವರಣಗೋಡೆ ಸಮುದ್ರ ಪಾಲಾಗಿದೆ. ಕುಟುಂಬ ಸ್ಥಳಾಂತರಗೊAಡಿದೆ.ಅಲ್ಲದೆ ಪರಿಸರದ ರಸ್ತೆ ಹಾಗೂ ಖಾಸಗಿ ಗೆಸ್ಟ್ ಹೌಸ್, ಇತರ ಮನೆಗಳೂ ಅಪಾಯದಂಚಿನಲ್ಲಿದೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹನುಮಾನ್ ನಗರ, ಮಣಿಮುಂಡ, ಶಾರದಾ ನಗರ, …

ಕಳವಿಗೆಂದು ಮನೆಗೆ ನುಗ್ಗಿದ ಕಳ್ಳ: ಮನೆಮಂದಿಗೆ ಎಚ್ಚರವಾದಾಗ ಬದಲಿ ಫೋನ್ ತೆಗೆದು ಪರಾರಿ

ತೃಶೂರು: ಕಳವಿಗೆಂದು ಮನೆಗೆ ನುಗ್ಗಿದ ಕಳ್ಳ ಸ್ವಂತ ಮೊಬೈಲ್ ಫೋನ್ ಅಲ್ಲಿಟ್ಟು ಬದಲಿಯಾಗಿ ಮನೆ ಮಂದಿಯ ಇನ್ನೊಂದು ಫೋನ್ ತೆಗೆದುಕೊಂಡು ಪರಾರಿಯಾದ ಘಟನೆ ನಡೆದಿದ್ದು, ಫೋನ್‌ನ ಜಾಡು ಹಿಡಿದು ಕಳ್ಳನನ್ನು ಬೆನ್ನಟ್ಟಿ ಸೆರೆ ಹಿಡಿಯಲಾಗಿದೆ. ಮಾಳ ತಾನಿಶ್ಶೇರಿ ಕೊಡಿಯನ್ ವೀಟಿಲ್ ಜೋಮೋನ್ (37)ನನ್ನು ಚಾಲಕ್ಕುಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಜೋಮೋನ್ ಅವಾಂತರ ನಡೆಸಿದ್ದಾನೆ. ಮನೆಗೆ ಕಳವಿಗೆಂದು ನುಗ್ಗಿದಾಗ ಅವಸರದಲ್ಲಿ ತನ್ನ ಫೋನ್ ತೆಗೆದುಕೊಳ್ಳುವುದಕ್ಕೆ ಬದಲಾಗಿ ಮನೆಯವರ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ತೃಶೂರು ನೋರ್ತ್ ಚಾಲಕ್ಕುಡಿ ಚೆಂಗಿನಿಮಟ್ಟಂ …