ಅಂಗಳದಲ್ಲಿ ಪುತ್ರನಿಗೆ ಆಹಾರ ನೀಡುತ್ತಿದ್ದ ತಾಯಿಗೆ ಹಾವು ಕಚ್ಚಿ ಸಾವು

ತೃಶೂರು: ಮನೆಯಂಗಳದಲ್ಲಿ ನಿಂತಿದ್ದ ಯುವ ತಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ನಡೆದಿದೆ. ಮಾಪ್ರಾಣಂ ಮಾಡಾಯಿಕೋ ಣಂ ನಿವಾಸಿ ಶರೊನ್‌ರ ಪತ್ನಿ ಹೆನ್ನ (28) ಮೃತಪಟ್ಟ ಯುವತಿ. ಮನೆಯ ಅಂಗಳದಲ್ಲಿ ನಿಂತು ತನ್ನ ಪುತ್ರನಿಗೆ ಆಹಾರ ನೀಡುತ್ತಿದ್ದ ಮಧ್ಯೆ ಹೆನ್ನರ ಕಾಲಿಗೆ ಹಾವು ಕಚ್ಚಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ನಿನ್ನೆ ಸಾವು ಸಂಭವಿಸಿದೆ. ಇಂದು ಮಧ್ಯಾಹ್ನ ಇರಿಂಙಾಲಕುಡ ಸೈಂಟ್ ಥೋಮಸ್ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

You cannot copy contents of this page