ಜೋಡುಕಲ್ಲು ರಸ್ತೆ ಬದಿ ಒಣಗಿದ ಮರ ದುರಂತ ತಪ್ಪಿಸಲು ಸ್ಥಳೀಯರ ಆಗ್ರಹ

ಉಪ್ಪಳ: ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು ಎಂಬಲ್ಲಿ ಒಣಗಿದ ಮರಗಳು ಯಾವುದೇ ಕ್ಷಣದಲ್ಲಿ ಧರಾಶಾಯಿಗೊಳ್ಳುವ ಆತಂಕ ಕಾಡುತ್ತಿದೆ. ರಸ್ತೆ ಅಭಿವೃದ್ದಿಗೊಳಿಸುವ ವೇಳೆ ಗುತ್ತಿಗೆದಾರ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರೆವುಗೊಳಿಸಿದ್ದರು. ಅದರೆ ಒಣಗಿದ ಮರವನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಪಾಯ ಭೀತಿ ಉಂಟಾಗಿದೆ. ಇದೇ ಪರಿಸರದಲ್ಲಿ ಪ್ರಮುಖ ವಿದ್ಯುತ್ ತಂತಿಹೊAದಿರುವ ಕಂಬಗಳಿದ್ದು, ಮರ ಮುರಿದು ತಂತಿ ಮೇಲೆ ಬಿದ್ದಲ್ಲಿ ಹಲವಾರು ಕಂಬಗಳು ರಸ್ತೆಗೆ ಮುರಿದು ಬೀಳಬಹುದಾಗಿದೆ.ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಅಲ್ಲದೆ ಈ ಪರಿಸರದಲ್ಲಿ ವ್ಯಾಪಾರ ಸಂಸ್ಥೆಗಳಿದ್ದು, ಜನನಿಬಿಡ ಪ್ರದೇಶವಾಗಿದೆ. ಅಪಾಯದ …

ಎಸ್‌ಐಆರ್ ಸೂಚನೆ ಸಹಿತ ಕನ್ನಡದಲ್ಲಿ ಲಭ್ಯಗೊಳಿಸಲು ಎಂ.ಎಲ್. ಅಶ್ವಿನಿ ಆಗ್ರಹ

ಕಾಸರಗೋಡು: ಎಸ್‌ಐಆರ್ ನೋಟಿಫಿಕೇಶನ್ ಸಹಿತ ಚುನಾವಣೆ ಕ್ರಮಗಳಿಂ ದ ಕನ್ನಡವನ್ನು ಹೊರತುಪಡಿಸಿರುವುದು ಪ್ರತಿಭಟನಾರ್ಹವೆಂದು ಇದು ಕಾಸರಗೋಡು, ಮಂಜೇಶ್ವರ ತಾಲೂಕುಗಳ ಬಹುಪಾಲು ಕನ್ನಡ ಮತದಾರರಿಗೆ ಸಮಸ್ಯೆ ಸೃಷ್ಟಿಸುತ್ತಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂಎಲ್. ಅಶ್ವಿನಿ ಅಭಿಪ್ರಾ ಯಪಟ್ಟರು. ಎಸ್‌ಐಆರ್ ಚಟುವಟಿಕೆ ಆರಂಭಿಸಲಿರುವಂತೆ ನೋಟಿಫಿಕೇಶನ್ ಮಲಯಾಳ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿಯ ಔದ್ಯೋಗಿಕ ಪುಟದಲ್ಲಿ ಸಹಿತ ಸೂಚನೆಗಳು ಹಾಗೂ ನಿರ್ದೇಶಗಳು ಮಲ ಯಾಳದಲ್ಲಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಕಡ್ಡಾಯವಾಗಿ ಲಭ್ಯಗೊಳಿಸುವಂತೆ ಖಚಿತಪಡಿಸಬೇಕೆಂದು ಅಶ್ವಿನಿ ಆಗ್ರಹಿಸಿದ್ದಾರೆ.

ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ಉದ್ಘಾಟನೆ

ಕಾಸರಗೋಡು: ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ಕಾಸರಗೋಡು ಜಿಎಚ್‌ಎಸ್‌ಎಸ್‌ನಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ಕೇರಳ ಫೋಕ್ಲೋರ್ ಅಕಾಡೆಮಿ ಪ್ರಶಸ್ತಿ ವಿಜೇತ ಸುರೇಶ್ ಪಳ್ಳಿಪ್ಪಾರ ಮುಖ್ಯ ಅತಿಥಿಯಾಗಿದ್ದರು. ನಗರಸಭಾ ಉಪಾಧ್ಯಕ್ಷೆ ಶಂಸೀದಾ ಫಿರೋಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಹಿರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ಕೆ. ರಜನಿ, ಕೌನ್ಸಿಲರ್ ರಂಜಿತ, ವಿ.ಎಸ್. ಬಿಜುರಾಜ್, ರೋಜಿ ಜೋಸೆಫ್, ಪಿ. ಪ್ರಕಾಶನ್, ಉಪಜಿಲ್ಲಾ ಶಿಕ್ಷಣ ಅಧಿಕಾರಿ ಅಗಸ್ಟಿನ್ ಬರ್ನಾಡ್ ಮೊಂತೇರೊ, ಪಿಟಿಎ ಅಧ್ಯಕ್ಷ …

ಯುವತಿ ಬಾವಿಗೆ ಹಾರಿ ಆತ್ಮಹತ್ಯೆ: ರಕ್ಷಿಸಲು ಹಾರಿದ ಸಹೋದರ ಗಂಭೀರ

ತಿರುವನಂತಪುರ: ವಿಳಿಂಞದಲ್ಲಿ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಗೈದಿದ್ದಾರೆ. ಪಾರುಮಾಡಲು ಹಾರಿದ ಸಹೋದರ ಬಾವಿಯೊಳಗೆ ಸಿಲುಕಿಕೊಂಡರು. ಅರ್ಚನಚಂದ್ರ (27) ಮೃತಪಟ್ಟರೆ, ರಕ್ಷಿಸಲೆಂದು ಬಾವಿಗೆ ಹಾರಿದ ಸಹೋದರ  ಭವನಚಂದ್ರನನ್ನು ಮೇಲೆತ್ತಿ   ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ೬ ಗಂಟೆಗೆ ವಿಳಿಞಂ ಕರಿಚ್ಚಲ್ ಕೊಚ್ಚುಪಳ್ಳಿಯಿಲ್‌ನಲ್ಲಿ ಘಟನೆ ನಡೆದಿದೆ. ಕುಟುಂಬ ಕಲಹ ಮಧ್ಯೆ ಯುವತಿ ಬಾವಿಗೆ ಹಾರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಸಹೋದರ ಕೂಡಾ ಹಾರಿದ್ದಾನೆ. ಭಾರೀ ಆಳದ ಬಾವಿಗೆ ಇವರಿಬ್ಬರು ಹಾರಿದ್ದು, ಸ್ಥಳೀಯರು ನೀಡಿದ ಮಾಹಿತಿಯಂತೆ …

ಸ್ಥಳೀಯಾಡಳಿತ ಚುನಾವಣೆ: ಇಂದು, ನಾಳೆ ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಅವಕಾಶ

ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಚುನಾವಣೆಗಿರುವ ಸಾರ್ವತ್ರಿಕ ಮತದಾರ ಪಟ್ಟಿಯಲ್ಲಿ ಇಂದು ಹಾಗೂ ನಾಳೆ ಹೆಸರು ಸೇರಿಸಲು ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಎ. ಶಾಜಹಾನ್ ತಿಳಿಸಿ ದ್ದಾರೆ. ಮಟ್ಟನ್ನೂರ್ ಪಂಚಾಯತ್ ಹೊರತುಪಡಿಸಿದ ರಾಜ್ಯದ ಇತರ ಪಂಚಾಯತ್‌ಗಳಲ್ಲಿ ಅಕ್ಟೋಬರ್ ೨೫ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಒಳಗೊ ಳ್ಳದ ಅರ್ಹರಾದವರಿಗೆ ಯಾದಿ ಯಲ್ಲಿ ಹೆಸರು ಸೇರಿಸಲು ಈ ಅವಕಾಶ ನೀಡಲಾಗಿದೆ. ಅನರ್ಹ ರನ್ನು ಹೊರತು ಪಡಿಸುವು ದಕ್ಕೂ, ಸ್ಥಳ ಬದಲಾವಣೆ ಮಾಡಲು ೪, ೫ರಂದು  ಅರ್ಜಿ …

ರಾಜ್ಯ ಚಲನಚಿತ್ರ ಪುರಸ್ಕಾರ ಘೋಷಣೆ: ಮಮ್ಮುಟ್ಟಿ, ಶಮ್ಲಾ ಹಂಸ ಅತ್ಯುತ್ತಮ ನಟ, ನಟಿ: ಚಿದಂಬರಂ ಶ್ರೇಷ್ಠ ನಿರ್ದೇಶಕ

ತೃಶೂರು: ೨೦೨೪ನೇ ಸಾಲಿನ ರಾಜ್ಯ ಚಲನಚಿತ್ರ ಪುರಸ್ಕಾರವನ್ನು ರಾಜ್ಯ ಸಾಂಸ್ಕೃತಿಕ ಖಾತೆ ಸಚಿವ ಸಜಿ ಚೆರಿಯನ್ ನಿನ್ನೆ ಘೋಷಿಸಿದ್ದಾರೆ. ‘ಭ್ರಮಯುಗಂ’ ಚಿತ್ರದ ಅಭಿನಯಕ್ಕಾಗಿ ಮಮ್ಮುಟ್ಟಿ ಅತ್ಯುತ್ತಮ ನಟ ಹಾಗೂ ‘ಫೆಮಿನಿಚ್ಚಿ ಫಾತಿಮಾ’ ಎಂಬ ಚಿತ್ರದ ಅಭಿನಯಕ್ಕಾಗಿ ಶಮ್ಲಾ ಹಂಸ  ಅತ್ಯುತ್ತಮ ನಟಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ.  ಮಮ್ಮುಟ್ಟಿಗೆ ರಾಜ್ಯ ಚಲನಚಿತ್ರ ಪುರಸ್ಕಾರ ಲಭಿಸಿರುವುದು ಇದು ಎಂಟನೇ ಬಾರಿಯಾಗಿದೆ. ‘ಮಂಞ್ಞಮ್ಮಲ್ ಬೋಸ್ಸ್’ ಚಿತ್ರದ ನಿರ್ದೇಶಕ ಚಿದಂಬರಂರನ್ನು ಅತ್ಯುತ್ತಮ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಚಿತ್ರ ಸೇರಿದಂತೆ ಈ ಚಿತ್ರ ಒಟ್ಟು …

ರೇಶನ್ ವ್ಯಾಪಾರಿಗಳಿಂದ ಸಪ್ಲೈ ಕಚೇರಿಗೆ ಮಾರ್ಚ್, ಧರಣಿ

ಕಾಸರಗೋಡು: ರೇಶನ್ ವ್ಯಾಪಾರಿ ಗಳೊಂದಿಗೆ ಸರಕಾರ ತೋರಿಸುವ ಅವಗಣನೆ ನೀತಿಯನ್ನು ಕೊನೆಗೊಳಿಸ ಬೇಕೆಂದು ಒತ್ತಾಯಿಸಿ ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿ ಯೇಶನ್ (ಎಕೆಆರ್‌ಆರ್‌ಡಿಎ) ಕಾಸರ ಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಸಪ್ಲೈ ಆಫೀಸ್‌ಗೆ ರೇಶನ್ ವ್ಯಾಪಾರಿಗಳು ಮಾರ್ಚ್ ಹಾಗೂ ಧರಣಿ ನಡೆಸಿದರು. 2018ರಲ್ಲಿ ಜ್ಯಾರಿಗೆ ಬಂದ ವೇತನ ಪ್ಯಾಕೇಜ್ ಪರಿಷ್ಕರಿ ಸಬೇಕು, ಕೆಟಿಪಿಡಿಎಸ್ ಲೋಪದೋ ಷಗಳನ್ನು ಪರಿಹರಿಸಬೇಕು, ಸೀಮೆಎಣ್ಣೆ ನ್ಯಾಯಾಲಯದ ಆದೇಶ ಪ್ರಕಾರ  ವಿತರಣೆ ಮಾಡಬೇಕು, ರೇಶನ್ ಕ್ಷೇಮನಿಧಿ ಮೊತ್ತವನ್ನು ಸರಕಾರ ನೀಡಬೇಕು …

ಕಡು ಬಡತನಮುಕ್ತ ರಾಜ್ಯ ಘೋಷಣೆ ಚಿಗುರುಪಾದೆಯಲ್ಲಿ ಸಂಭ್ರಮಾಚರಣೆ

ಮಂಜೇಶ್ವರ: ದೇಶದಲ್ಲೇ ಪ್ರಥಮ ಬಾರಿಗೆ ಕೇರಳ ರಾಜ್ಯವನ್ನು ಕಡುಬಡತನ ಮುಕ್ತ ರಾಜ್ಯವಾಗಿ ರಾಜ್ಯ ಸರಕಾರ ಘೋಷಿಸಿದ ಸಂಭ್ರಮಾಚರಣೆಯ ಭಾಗವಾಗಿ ಮೀಂಜ ಚಿಗುರುಪಾದೆ ವಾರ್ಡ್ ಮಟ್ಟದ ಕಾರ್ಯಕ್ರಮ ನಡೆಯಿತು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಮೀಂಜ_ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ರಾಮಚಂದ್ರ ಟಿ. ಉಪಸ್ಥಿತರಿದ್ದರು. ಉದಯ ಸಿ.ಎಚ್. ಸ್ವಾಗತಿಸಿದರು.

ಭಾರತೀಯ ನ್ಯಾಯವಾದಿಗಳ ಪರಿಷತ್ ಕುಟುಂಬ ಸಂಗಮ

ಕಾಸರಗೋಡು: ಭಾರತೀಯ ನ್ಯಾಯವಾದಿಗಳ ಪರಿಷತ್ ಕಾಸರ ಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ನ್ಯಾಯವಾದಿಗಳ ಕುಟುಂಬ ಸಂಗಮ ನಡೆಸಲಾಯಿತು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ. ಶಂಕರನ್ ನಾಯರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್,  ನ್ಯಾ| ಕರುಣಾಕರನ್ ನಂಬ್ಯಾರ್ ಮಾತನಾಡಿದರು.   ನ್ಯಾಯ ವಾದಿಗಳಾದ ಅನಿಲ್ ಕೆ.ಜಿ.,  ಬೀನಾ ಕೆ.ಎಂ, ಸಚ್ಚಿನ್ ಶೆಣೈ ಶುಭಾಶಂಸನೆ ಗೈದರು. ಜಿಲ್ಲಾ ಕಾರ್ಯದರ್ಶಿ ನ್ಯಾ| ನವೀನ್‌ರಾಜ್ ಸ್ವಾಗತಿಸಿ, ಹೊಸದುರ್ಗ ಯೂನಿಟ್ ಅಧ್ಯಕ್ಷ ನ್ಯಾ| …