ಯುವತಿ ಬಾವಿಗೆ ಹಾರಿ ಆತ್ಮಹತ್ಯೆ: ರಕ್ಷಿಸಲು ಹಾರಿದ ಸಹೋದರ ಗಂಭೀರ

ತಿರುವನಂತಪುರ: ವಿಳಿಂಞದಲ್ಲಿ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಗೈದಿದ್ದಾರೆ. ಪಾರುಮಾಡಲು ಹಾರಿದ ಸಹೋದರ ಬಾವಿಯೊಳಗೆ ಸಿಲುಕಿಕೊಂಡರು. ಅರ್ಚನಚಂದ್ರ (27) ಮೃತಪಟ್ಟರೆ, ರಕ್ಷಿಸಲೆಂದು ಬಾವಿಗೆ ಹಾರಿದ ಸಹೋದರ  ಭವನಚಂದ್ರನನ್ನು ಮೇಲೆತ್ತಿ   ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ೬ ಗಂಟೆಗೆ ವಿಳಿಞಂ ಕರಿಚ್ಚಲ್ ಕೊಚ್ಚುಪಳ್ಳಿಯಿಲ್‌ನಲ್ಲಿ ಘಟನೆ ನಡೆದಿದೆ.

ಕುಟುಂಬ ಕಲಹ ಮಧ್ಯೆ ಯುವತಿ ಬಾವಿಗೆ ಹಾರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಸಹೋದರ ಕೂಡಾ ಹಾರಿದ್ದಾನೆ. ಭಾರೀ ಆಳದ ಬಾವಿಗೆ ಇವರಿಬ್ಬರು ಹಾರಿದ್ದು, ಸ್ಥಳೀಯರು ನೀಡಿದ ಮಾಹಿತಿಯಂತೆ ವಿಳಿಞಂ ಹಾಗೂ ಪೂವಾರ್‌ನಿಂದ ಅಗ್ನಿಶಾಮಕ ದಳ ತಲುಪಿ ಇವರಿಬ್ಬರನ್ನು ಮೇಲೆತ್ತಿದೆ. ಅರ್ಚನಾರ ಮೃತದೇಹ ತಿರುವನಂತಪುರ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತಳು  ಪತಿ ಅಸೀಂ ಶೇಖ್, ಮಕ್ಕಳಾದ ಅಬಿ ಶೇಖ್, ಬರ್ನಾಶ ಶೇಖ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page