ಧನಲಕ್ಷ್ಮಿ ಲಾಟರಿಯ 30 ಲಕ್ಷ ರೂ. ನ್ಯೂ ಲಕ್ಕಿ ಸೆಂಟರ್‌ನಲ್ಲಿ ಮಾರಾಟ ಮಾಡಿದ ಟಿಕೆಟ್‌ಗೆ

ಕಾಸರಗೋಡು: ಕೇರಳ ರಾಜ್ಯ ಲಾಟರಿಯ 10-12-2025ರಂದು ಡ್ರಾ ನಡೆಸಿದ ಧನಲಕ್ಷ್ಮಿ ಲಾಟರಿಯ ದ್ವಿತೀಯ ಬಹುಮಾನವಾದ 30 ಲಕ್ಷ ರೂ. ಕಾಸರಗೋಡು ನ್ಯೂ ಲಕ್ಕಿ ಸೆಂಟರ್‌ನಿಂದ ಮಾರಾಟ ಮಾಡಿದ DZ 678245 ನಂಬ್ರದ  ಟಿಕೆಟ್‌ಗೆ ಲಭಿಸಿದೆ. ಇಲ್ಲಿಂದ ಮಾರಾಟ ಮಾಡಿದ ಟಿಕೆಟ್‌ಗಳಿಗೆ ಈ ಮೊದಲೂ ಕೂಡಾ ಹಲವು ಬಹುಮಾನಗಳು ಲಭಿಸಿತ್ತು. ಕ್ರಿಸ್ಮಸ್ ನ್ಯೂ ಇಯರ್ ಟಿಕೆಟ್‌ಗಳು ಇಲ್ಲಿಂದ ಲಭ್ಯವಿದ್ದು, ಪ್ರಥಮ ಬಹುಮಾನ 20 ಕೋಟಿ ರೂ. ಆಗಿದೆ. ದ್ವಿತೀಯ ಬಹುಮಾನವಾಗಿ 1 ಕೋಟಿ ರೂ., ತೃತೀಯ ಬಹುಮಾನವಾಗಿ 10 …

ಜಿಲ್ಲೆಯಲ್ಲಿ 4 ಪಂಚಾಯತ್‌ಗಳಲ್ಲಿ ಬಹುಮತವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜಕೀಯ ತಜ್ಞರ ನಿರೀಕ್ಷೆ

ಕಾಸರಗೋಡು: ಅತ್ಯಂತ ತೀವ್ರ ಪೈಪೋಟಿ ಕಂಡು ಬಂದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲೆಯ 4 ಪಂಚಾಯತ್‌ಗಳಲ್ಲಿ ಸಮಾನ ವಾರ್ಡ್‌ಗಳಲ್ಲಿ ಗೆಲ್ಲಲು ಸಾಧ್ಯವಿದೆ ಎಂದು ಸೂಚನೆ ಲಭಿಸಿದೆ. ಜಿಲ್ಲೆಯ ಚುನಾವಣಾ ರಂಗವನ್ನು ಸೂಕ್ಷ್ಮವಾಗಿ ಅವಲೋಕಿಸುವ ಸ್ವತಂತ್ರ ರಾಜಕೀಯ ನಿರೀಕ್ಷಕರು ಈ ವಿಷಯ ತಿಳಿಸಿದ್ದಾರೆ. ರಾಜ್ಯದ ಗಡಿ ಪಂಚಾಯತ್‌ಗಳಾದ ಪೈವಳಿಕೆ, ವರ್ಕಾಡಿ, ಮೀಂಜ, ಮಂಜೇಶ್ವರ ಎಂಬೀ ಗ್ರಾಮ ಪಂಚಾಯತ್‌ಗಳಲ್ಲಿ  ಯಾರಿಗೂ ಬಹುಮತವಿಲ್ಲದ ಸ್ಥಿತಿ ಉಂಟಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು …

ಕೌತುಕ ತಂದ ತ್ರಿವಳಿ ಸಹೋದರಿಯರ ಮತದಾನ

ಮುಳಿಯಾರು: ಪಂಚಾಯತ್‌ನ  ಇರಿಯಣ್ಣಿ ಜಿವಿಎಚ್‌ಎಸ್‌ಎಸ್ ಬೂತ್‌ಗೆ ತಲುಪಿದ ಮೂವರು ಯುವತಿಯರನ್ನು ಕಂಡು ಮತದಾರರು ಹಾಗೂ ಅಧಿಕಾರಿಗಳಿಗೆ ಕೌತುಕ ಮೂಡಿತು. ತ್ರಿವಳಿ ಸಹೋದರಿಯರಾದ ಇವರು ಜೊತೆಯಾಗಿ ಬಂದು ಮತದಾನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದರು. ಇರಿಯಣ್ಣಿ ಬೇಪು ನಿವಾಸಿ ಗಂಗಾಧರನ್- ರೋಹಿಣಿ ದಂಪತಿಯ ಪುತ್ರಿಯರಾಗಿದ್ದಾರೆ. ರಂಜಿಶ, ರಂಜಿಮ, ರಂಜಿತ ಎಂಬ ಹೆಸರಿನ ಈ ಮೂವರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೂ, ಮತದಾನ ಮಾಡಲು ಏಕ ಸಮಯದಲ್ಲಿ ಬೂತ್‌ಗೆ ತಲುಪಿರುವುದು ನೋಡುಗರಿಗೆ ಆಶ್ಚರ್ಯ ಸೃಷ್ಟಿಸಿತು.

ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರ ವಾರ್ಷಿಕೋತ್ಸವ

ಬದಿಯಡ್ಕ: ನೀರ್ಚಾಲು ಕುಮಾರಸ್ವಾಮಿ ಭಜನಾ ಮಂದಿರದ 51ನೇ ವಾರ್ಷಿಕೋತ್ಸವ ನಿನ್ನೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಿತು. ಬೆಳಿಗ್ಗೆ 6.30ಕ್ಕೆ ಧ್ವಜಾರೋಹಣ, ಗಣಪತಿ ಹವನ, ಜರಗಿತು. ಮಂದಿರದ ಅಧ್ಯಕ್ಷ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ನೇತೃತ್ವ ವಹಿಸಿದರು. ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ 2ರಿಂದ ಭಜನೆ, ದೀಪ ಪ್ರತಿಷ್ಠೆ, ರಾತ್ರಿ ಮಹಾಪೂಜೆ ಜರಗಿತು.

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಯಶಸ್ವಿಗೆ ಮೊಗ್ರಾಲ್ ಶಾಲೆಯ ಪೂರ್ವ ವಿದ್ಯಾರ್ಥಿಗಳು ರಂಗಕ್ಕೆ

ಕಾಸರಗೋಡು: ಮೊಗ್ರಾಲ್‌ಗೆ ಇದೇ ಪ್ರಥಮವಾಗಿ ತಲುಪಿದ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವನ್ನು ಇತಿಹಾಸ ಪೂರ್ಣಗೊಳಿಸಲು ಪೂರ್ವ ವಿದ್ಯಾರ್ಥಿಗಳು ರಂಗಕ್ಕಿಳಿದಿ ದ್ದಾರೆ. ಹಲವಾರು ಕವಿಗಳಿಗೆ, ಕಲಾ ಪ್ರತಿಭೆಗಳಿಗೆ ಮೊಗ್ರಾಲ್ ಜನ್ಮ ನೀಡಿದ್ದು, ಇಶಲ್ ಗ್ರಾಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ತಿಂಗಳ 29, 30, 31ರಂದು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿದೆ. ಇದರ ಯಶಸ್ವಿಗಾಗಿ 1989-90 ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ಮೊದಲ ಹಂತದ ಸಹಾಯವಾಗಿ 55,555 ರೂ.ಗಳ ಚೆಕ್‌ನ್ನು ಪ್ರಧಾನ …

ಜಿಲ್ಲಾ ಕುಲಾಲ ಸಂಘದಿಂದ ಸಹಾಯಧನ ಹಸ್ತಾಂತರ

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪುಗೊಂಡ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಕಾರ್ಯಕ್ರಮದಂತೆ ಅಶಕ್ತ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಸಹಾಯಧನದ ಮೊತ್ತವನ್ನು ಹಸ್ತಾಂತರಿಸಲಾಯಿತು. ಕುಲಾಲ ಸಂಘ ಮೀಂಜ ಶಾಖೆಗೊಳ ಪಟ್ಟ ಕೋಳ್ಯೂರು ಚಕ್ರಕೋಡಿ ನಿವಾಸಿ ಶ್ರೀನಾಥ್‌ರಿಗೆ ತೂಮಿನಾಡು ಕುಲಾಲ ಸಮುದಾಯ ಭವನದಲ್ಲಿ ಜರಗಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಈ ಮೊತ್ತವನ್ನು ಹಸ್ತಾಂತರಿಸಲಾಯಿತು. ಗಣ್ಯರು ಉಪಸ್ಥಿತರಿದ್ದರು.