ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆ: ಆರು ಮಂದಿ ವಿರುದ್ಧ ಕೇಸು 

ಕಾಸರಗೋಡು:  ರೈಲ್ವೇ ನಿಲ್ದಾಣ ಸಮೀಪ ಖಾಸಗಿ ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಕಂಡರೆ ಪತ್ತೆಹಚ್ಚಬಹು ದಾದ ಆರು ಮಂದಿ ವಿರುದ್ಧ ಕಾಸರ ಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರ್ಕಳ ನಿವಾಸಿಯೂ ಶಾನು ಬಸ್‌ನ ಚಾಲಕನಾದ ಮುಹಮ್ಮದ್ ಶಿಹಾಬ್ (26)ರ ಮೇಲೆ ತಂಡ ಹಲ್ಲೆಗೈದಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ರೈಲ್ವೇ ನಿಲ್ದಾಣ ಸಮೀಪಕ್ಕೆ ಬಸ್ ತಲುಪಿದಾಗ  ಆಟೋ ನಿಲ್ದಾಣದ ಸಮೀಪದಲ್ಲಿದ್ದ  ತಂಡವೊಂದು ಬಸ್‌ಗೆ ಹತ್ತಿ ಹಲ್ಲೆಗೈದಿರುವುದಾಗಿ ಶಿಹಾಬ್ …

ಬೆದ್ರಂಪಳ್ಳ ಮಸೀದಿಯಿಂದ ಕಳವು: ತನಿಖೆ ಆರಂಭ

ಪೆರ್ಲ: ಬೆದ್ರಂಪಳ್ಳ ಬದರ್ ಜುಮಾ ಮಸೀದಿಯಿಂದ ಹಣ ಕಳವಿಗೀಡಾದ ಪ್ರಕರಣದಲ್ಲಿ   ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕೊಠಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 15 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ. ಗುರುವಾರ ರಾತ್ರಿ  9 ಗಂಟೆಯಿಂದ ಶುಕ್ರವಾರ ಮುಂಜಾನೆ 5 ಗಂಟೆ ಮಧ್ಯೆ ಕಳವು ನಡೆದಿದೆ ಯೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೆದ್ರಂಪಳ್ಳದ ಶಾಹುಲ್ ಹಮೀದ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ನಗರದಿಂದ ಯುವಕನನ್ನು ಅಪಹರಿಸಿದ ಪ್ರಕರಣ ಹಿಂದೆ ಅಂತಾರಾಜ್ಯ ಜಾಲ: ಆರೋಪಿಯ ಮನೆಯಿಂದ ಬೃಹತ್ ಪ್ರಮಾಣದ ಖೋಟಾನೋಟು, ನೋಟು ಎಣಿಕೆ ಯಂತ್ರ ಪತ್ತೆ

ಕಾಸರಗೋಡು: ಡಿ. 17ರಂದು ಕಾಸರಗೋಡು ನಗರದ ಅಶ್ವಿನಿನಗರದಿಂದ ಹಾಡಹಗಲೇ ಮೇಲ್ಪರಂಬ ನಿವಾಸಿ ಹಸೀಫಾ ಎಂಬವರನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಿಸಿದ ಪ್ರಕರಣದ ಆರೋಪಿಯೋರ್ವನ ಮನೆಯಲ್ಲಿ ಕಾಸರಗೋಡು ಪೊಲೀಸರು ನಡೆಸಿದ ತಪಾಸಣೆಯಲ್ಲಿ ಬೃಹತ್ ಪ್ರಮಾಣದ ಖೋಟಾನೋಟುಗಳು ಹಾಗೂ ನೋಟುಗಳನ್ನು ಎಣಿಸಲು ಉಪಯೋಗಿಸುವ ಯಂತ್ರವನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಯುವಕನನ್ನು ಅಪಹರಿಸಿದ ಪ್ರಕರಣದ ಆರೋಪಿ ಗಳಲ್ಲೋರ್ವನಾಗಿರುವ ಚಟ್ಟಂಚಾಲ್ ಬೆಂಡಿಚ್ಚಾಲ್‌ನ ಕೆ. ವಿಜಯನ್ (55) ಎಂಬಾತನ ಚೆರ್ಕಳ ಕೋಲಾಚಿ ಯಡ್ಕದಲ್ಲಿರುವ ಮನೆಯ ಶೆಡ್‌ನಲ್ಲಿ ಈ ಖೋಟಾ ನೋಟುಗಳನ್ನು ಪತ್ತೆಹಚ್ಚಲಾಗಿದೆ. ಅಮಾನ್ಯ ನೋಟು …

ಶಬರಿಮಲೆ ಚಿನ್ನ ಕಳವಿನ ಹಿಂದೆ ಭಾರೀ ದೊಡ್ಡ ದರೋಡೆ ತಂಡ:  ದೇವಸ್ವಂ ಮಂಡಳಿಯ ಸದಸ್ಯರತ್ತ ತನಿಖೆ

ಶಬರಿಮಲೆ: ಶಬರಿಮಲೆ ದೇಗುಲ ದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ಹಿಂದೆ ಭಾರೀ ದೊಡ್ಡ ದರೋಡೆ ತಂಡದ ಕೈವಾಡವಿದೆ ಎಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿ ಈಗ ನ್ಯಾಯಾಂಗ ಬಂಧನದಲ್ಲಿ ಕಳೆಯುತ್ತಿರುವ  ಚೆನ್ನೈಯ ಸ್ಮಾರ್ಟ್  ಕ್ರಿಯೇಷನ್ಸ್‌ನ ಸಿಇಒ ಪಂಕಜ್ ಭಂಡಾರಿ ಮತ್ತು ಕರ್ನಾಟಕ ಬಳ್ಳಾರಿಯ ಚಿನ್ನದಂಗಡಿ ಮಾಲಕ ಗೋವರ್ಧನ್ ಹಾಗೂ ದೇವಸ್ವಂ ಮಂಡಳಿಯ ಸಿಬ್ಬಂದಿಗಳು ಸೇರಿ ಭಾರೀ ಒಳಸಂಚು ಹೂಡಿದ್ದರೆಂಬುದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದೂ ನ್ಯಾಯಾಲಯಕ್ಕೆ ಸಲ್ಲಿಸಿದ …

ಇರಿಯಣ್ಣಿಯಲ್ಲಿ ಮತ್ತೆ ನಾಯಿ ಮೇಲೆ ದಾಳಿ ನಡೆಸಿದ ಚಿರತೆ

ಬೋವಿಕ್ಕಾನ: ಅಲ್ಪ ಬಿಡುವಿನ ಬಳಿಕ ಇರಿಯಣ್ಣಿಯಲ್ಲಿ ಚಿರತೆಯ ಭೀತಿ ಹುಟ್ಟಿಕೊಂಡಿದೆ. ಶನಿವಾರ ರಾತ್ರಿ ಇರಿಯಣ್ಣಿ ಕುಣಿಯೇರಿ ಎಂಬಲ್ಲಿ ಸಾಕು ನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ದಿರುವುದಾಗಿ ದೂರಲಾಗಿದೆ. ವೆಳ್ಳಾಟ್‌ನ  ನಾರಾಯಣನ್ ಎಂಬವರ ಮನೆಯ ಸಾಕು ನಾಯಿಯನ್ನು ಚಿರತೆ ಕೊಂಡೊ ಯ್ದಿದ್ದು, ನಾಯಿಯ ಮೇಲೆ ಚಿರತೆ ದಾಳಿ ನಡೆಸುವ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.  ಸಮೀಪದ ಕಾಡಿನತ್ತ ನಾಯಿಯನ್ನು ಚಿರತೆ ಕೊಂಡೊ ಯ್ದಿದೆ ಎಂದು ತಿಳಿದುಬಂ ದಿದೆ. ಇತ್ತೀಚೆಗೆ ಮುಳಿಯಾರು ಪಂಚಾ ಯತ್‌ನ ಇರಿಯಣ್ಣಿ ಯಲ್ಲಿ ಹಲವು ನಾಯಿಗಳನ್ನು …

ಅಂತಾರಾಷ್ಟ್ರೀಯ ಸೈಬರ್ ವಂಚನಾ ಜಾಲದ ಏಜೆಂಟರು ಜಿಲ್ಲೆಯಲ್ಲಿರುವ ಬಗ್ಗೆ ಮಾಹಿತಿ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಸಿ ವೈದ್ಯರ 1.10 ಕೋಟಿ ರೂ.ಕಬಳಿಕೆ

ಕಾಸರಗೋಡು: ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ವೈದ್ಯರೋರ್ವರಿಗೆ ಬೆದರಿಕೆಯೊಡ್ಡಿ ಅವರಿಂದ ಸೈಬರ್ ವಂಚಕರು 1.10 ಕೋಟಿ ರೂ. ಕಬಳಿಸಿದ ಬಗ್ಗೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನೀಲೇಶ್ವರದ ವೈದ್ಯರು ಈ ಬಗ್ಗೆ ದೂರು ನೀಡಿದ್ದು ಅದರಂತೆ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡಿಜಿಟಲ್ ಅರೆಸ್ಟ್‌ನ ಹೆಸರಲ್ಲಿ ಈ ತಿಂಗಳ 4ರಿಂದ 15ರ ಅವಧಿಯಲ್ಲಿ ಮೂರು ಬಾರಿಯಾಗಿ ವೈದ್ಯರ ಬ್ಯಾಂಕ್ ಖಾತೆಯಿಂದ ಸೈಬರ್   ವಂಚಕರು ಹಣ ಎಗರಿಸಿದ್ದಾರೆ. ಪೊಲೀಸರೆಂಬ ನಕಲಿ ಹೆಸರಲ್ಲಿ ಸೈಬರ್ ವಂಚಕರು ಈ ವೈದ್ಯರನ್ನು …

ರೈಲ್ವೇ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆ ಪ್ರಕರಣ: ತನಿಖೆ ತೀವ್ರ

ಕಾಸರಗೋಡು: ಪಾಲಕುನ್ನು ರೈಲ್ವೇ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಇರಿಸಿ ಅಪಾಯ ಸೃಷ್ಟಿಸಲೆತ್ನಿಸಿದ  ಪ್ರಕರಣದಲ್ಲಿ ಬೇಕಲ ಪೊಲೀಸರು ಹಾಗೂ ಆರ್‌ಪಿಎಫ್ ತನಿಖೆ ತೀವ್ರಗೊಳಿಸಿದೆ.  ಶನಿವಾರ ರಾತ್ರಿ 8.30ರ ವೇಳೆ ಕೋಟಿಕುಳಂ ರೈಲ್ವೇ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್‌ನ ದಕ್ಷಿಣ ಭಾಗದಲ್ಲಿರುವ ಹಳಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಪತ್ತೆಯಾಗಿದೆ. ರೈಲ್ವೇಯ ಅಗತ್ಯಕ್ಕಾಗಿ ಹಳಿಯ ಸಮೀಪ ಇರಿಸಲಾಗಿದ್ದ ಕಾಂಕ್ರೀಟ್ ಸ್ಲ್ಯಾಬ್‌ನ್ನು ಹಳಿಯ ಮೇಲಿರಿಸಿರುವುದು ಕಂಡುಬಂದಿದೆ.  ರೈಲ್ವೇ ನಿಲ್ದಾಣ ಸಮೀಪ ಕ್ವಾರ್ಟರ್ಸ್‌ನಲ್ಲಿ ವಾಸಿಸುವವರ  ಗಮನಕ್ಕೆ ಇದು  ಬಂದ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ …

ಕುಂಬಳೆಯಲ್ಲಿ ಬಹುಮತ ಗಳಿಸಿದ ಮುಸ್ಲಿಂ ಲೀಗ್: ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಟಿ

ಕುಂಬಳೆ:  ಪಂಚಾಯತ್ ಚುನಾ ವಣೆಯಲ್ಲಿ ಕುಂಬಳೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ  ಮುಸ್ಲಿಂ ಲೀಗ್ ಪಂಚಾಯತ್ ಅಧ್ಯಕ್ಷರಾಗಿ ಯಾರನ್ನು ಆರಿಸಬೇಕೆಂಬ ವಿಷಯ ಗೊಂದಲಕ್ಕೀ ಡಾಗಿದೆ. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿಯೂ, ಎರಡುಬಾರಿ ಪಂಚಾಯತ್ ಸದಸ್ಯ, ಒಂದು ಬಾರಿ ಬ್ಲೋಕ್ ಪಂಚಾಯತ್ ಸದಸ್ಯನಾಗಿದ್ದ ಎ.ಕೆ. ಆರಿಫ್ ಈ ಬಾರಿಯೂ ಪಂಚಾಯತ್ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲರ್, ಜಿಲ್ಲಾ ಸಮಿತಿ ಸದಸ್ಯ ಎಂಬೀ ನೆಲೆಗಳಲ್ಲಿ ಕಾರ್ಯಾಚರಿಸುವ ವಿ.ಪಿ. ಅಬ್ದುಲ್ ಖಾದರ್ ಹಾಜಿ  ಎರಡು ಬಾರಿ ಪಂಚಾಯತ್ …

ಹಿರಿಯ ಕೃಷಿಕ ನಿಧನ

ಮಂಜೇಶ್ವರ: ಬೆಜ್ಜ ಕೊಳಂಜ ನಿವಾಸಿ ಅರಿಯಾಳ ಮಲರಾಯ ಬಂಟ ತರವಾಡಿನ ಗುರಿಕಾರ ಹಿರಿಯ ಕೃಷಿಕ ಬಂಟಪ್ಪ ಪೂಜಾರಿ (70) ನಿಧನ ಹೊಂ ದಿದರು. ನಿನ್ನೆ ಮುಂಜಾನೆ ಹೃದಯಾ ಘಾತ ಉಂಟಾಗಿದ್ದು, ಉಪ್ಪಳದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಸಂಭವಿಸಿದೆ. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಚರಣ್‌ರಾಜ್, ಶರತ್, ಹರ್ಷಿತ, ಭರತ್, ಅಳಿಯ ವಿನಯ ಕುಮಾರ್, ಸೊಸೆಯಂದಿರಾದ ಜಯಶ್ರೀ, ಸುಪ್ರೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಿಲ್ಲಾ ಪಂಚಾಯತ್: ತುಳು, ಕನ್ನಡ, ಮಲಯಾಳ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ ಸದಸ್ಯರು

ಕಾಸರಗೋಡು: ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಸದಸ್ಯರು ಕಲೆಕ್ಟ್ರೇಟ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಭಾಷಾ ವೈವಿಧ್ಯಮಯ ಕಂಪು ಮೆರೆಯಿತು. ಜಿಲ್ಲಾ ಪಂಚಾಯತ್‌ಗೆ ಆರಿಸಲ್ಪಟ್ಟ ಸದಸ್ಯರು ತಮ್ಮ ಮಾತೃಭಾಷೆಯಲ್ಲೇ ಪ್ರಮಾಣವಚನ  ಸ್ವೀಕರಿಸಿದರೆ, ಕೆಲವರು ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೆಲವರು ಕನ್ನಡ, ತುಳು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕಾಸರಗೋಡಿನ ಸಪ್ತಭಾಷಾ ಸಂಗಮ ಭೂಮಿಯ ವೈವಿದ್ಯತೆಯನ್ನು ಸಾರಿದರು. ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಷನ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ …