ರಸ್ತೆ ಬದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತ್ಯು: ಮಾಹಿತಿಯಿದ್ದವರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕರೆ

ಮಂಜೇಶ್ವರ: ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿ ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಪರಿಚಿತ ವ್ಯಕ್ತಿ  ಮೃತಪಟ್ಟಿದ್ದಾರೆ.  ಈ ತಿಂಗಳ 2ರಂದು ಸಂಜೆ 7.30ಕ್ಕೆ ಕುಂಜತ್ತೂರು ರಸ್ತೆ ಬದಿ ಸುಮಾರು  60ರ ಹರೆಯದ ಪುರುಷ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಅವರನ್ನು ಊರವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ  ದಾಖಲಿಸಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೆ 20ರಂದು ರಾತ್ರಿ ವ್ಯಕ್ತಿ ಮೃತಪಟ್ಟಿದ್ದಾರೆ.  ಮಂಜೇಶ್ವರ ಪೊಲೀಸರು ಆಸ್ಪತ್ರೆಗೆ ತೆರಳಿ ಮೃತದೇಹದ ಮಹಜರು ನಡೆಸಿದ್ದಾರೆ. ಇದೀಗ ಮೃತದೇ ಹವನ್ನು ಶವಾಗಾರದಲ್ಲಿರಿಸಲಾಗಿದೆ.  ಚಿಕಿತ್ಸೆ ಮಧ್ಯೆ  ವ್ಯಕ್ತಿಗೆ ಒಮ್ಮೆ …

ಸಾಲದ ಕೂಪದಿಂದ ಪಾರಾಗಲು 1500 ರೂ.ಗಳ ಕೂಪನ್‌ಗೆ ಬಹುಮಾನವಾಗಿ ಮನೆ, ಸ್ಥಳ ಘೋಷಣೆ: ವ್ಯಕ್ತಿ ಸೆರೆ

ಕಣ್ಣೂರು: ಸಾಲದ ಹೊರೆಯನ್ನು ತಪ್ಪಿಸಲು ಬಹುಮಾನ ಕೂಪನ್‌ಗಳನ್ನು ಮುದ್ರಿಸಿ ಮಾರಾಟ ನಡೆಸಿದ ಮಾಜಿ ಅನಿವಾಸಿ ಸೆರೆಯಾಗಿದ್ದಾರೆ. ಅಡೈಕಾತೋಡ್ ಕಾಟುಪಾಲ ಸಮೀಪದ ನಿವಾಸಿ ಬೆನ್ನಿ ಥೋಮಸ್ (67)ರನ್ನು ಲಾಟರಿ ಇಲಾಖೆಯ ದೂರಿನಂತೆ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಇವರಿಗೆ ರಿಮಾಂಡ್ ವಿಧಿಸಿದೆ. ೧೫೦೦ ರೂ. ಕೂಪನ್ ತೆಗೆದರೆ ಬಹುಮಾನವಾಗಿ ಮನೆ, ಸ್ಥಳ, ಕಾರು, ಬೈಕ್‌ಗಳೆಲ್ಲವನ್ನೂ ಭರವಸೆ ನೀಡಿ ಇವರು ಕೂಪನ್ ವಿತರಿಸಿದ್ದರು. ಮನೆಯ ಜಪ್ತಿಯನ್ನು ಹೊರತುಪಡಿಸಲು ಹಾಗೂ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಕಂಡುಕೊಳ್ಳಲು 3300 ಚದರ ಅಡಿ ವಿಸ್ತೀರ್ಣದ …

ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಭಸ್ಮಪಾತ್ರೆ ನೀಲೇಶ್ವರದಿಂದ ಸಮರ್ಪಣೆ

ಹೊಸದುರ್ಗ: ಶಬರಿಮಲೆಗೆ ಪಂದಳಂನಿಂದ ಹೊರಡುವ ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಪಂದಳಂ ಅರಮನೆಯ ಕುಟುಂಬ ಸದಸ್ಯರು ಭಕ್ತರಿಗೆ ನೇರವಾಗಿ ಭಸ್ಮ ನೀಡುವ ಕ್ರಮವಿದೆ. ಇದಕ್ಕಿರುವ ಭಸ್ಮವನ್ನು ಹಾಕಿಡುವ ಪಾತ್ರೆಯನ್ನು ನೀಲೇಶ್ವರ ಕಕ್ಕಾಡ್ ನಿವಾಸಿಗಳಾದ ಪಿ.ಕೆ. ಸಭಾಷ್, ಸಹೋದರ ಎ.ಸಿ. ಸಂತೋಷ್ ಕುಮಾರ್ ಪಂದಳಂಗೆ ತೆರಳಿ ಈ ತಿಂಗಳ 28ರಂದು ಅರಮನೆಗೆ ಸಮರ್ಪಿಸುವರು. ಪ್ರತೀ ವರ್ಷ ಜನವರಿ 12ರಂದು ಪಂದಳಂ ಅರಮನೆಯಿಂದ ಹೊರಡುವ ಚಿನ್ನಾಭರಣ ಶೋಭಾಯಾತ್ರೆಯಲ್ಲಿ ಇವರು ಹಲವು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಪಯ್ಯನ್ನೂರು ಕಂಡೋತ್ ಕೆ. ಶಶಿ ಕುಮಾರ್ ಮುಂಡವಳಪ್ಪಿಲ್ ಈ …

ನಿವೃತ್ತ ಬ್ಯಾಂಕ್ ಮೆನೇಜರ್ ನಿಧನ

ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್ ಮೆನೇಜರ್ ಆಗಿದ್ದ  ಬದಿಯಡ್ಕ ಚೇರ್ಕೂಡ್ಲುವಿನ ಶಿವರಾಮ ಮಣಿಯಾಣಿ (67) ನಿಧನ ಹೊಂದಿದರು. ಇವರ ಪತ್ನಿ ನಳಿನಾಕ್ಷಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಡಾ. ಶೈನಾ ರಾಜೇಶ್, ಡಾ. ಅನುರಾಧ, ಇಂಜಿನಿಯರ್ ಸೂರ್ಯನಾರಾಯಣ, ಅಳಿಯಂದಿರಾದ ರಾಜೇಶ್ ಅಗಲ್ಪಾಡಿ (ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ), ಅಶ್ವತ್ಥ್ ಆಲಟ್ಟಿ (ಇಂಜಿನಿಯರ್), ಸಹೋದರರಾದ ಕೇಳು ಮಣಿಯಾಣಿ, ಕುಂಞಂಬು, ಸಹೋದರಿಯರಾದ ಶ್ರೀದೇವಿ, ಗೋಪಿ, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರಿಯರಾದ ಬೆಳ್ತಮ್ಮ, …

ಔಷಧಿ ಅಂಗಡಿ ನೌಕರ ನಿಧನ

ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ನಿವಾಸಿ ಜಯರಾಮ (62) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇವರು ಸುಮಾರು 35 ವರ್ಷಗಳಿಂದ ಉಪ್ಪಳ ಡಿಲೈಟ್ ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿದ್ದರು. ಮೃತರು ಪತ್ನಿ ನಯನ, ಮಕ್ಕಳಾದ ನಿಖಿತ, ನಿಹಾ, ಅಳಿಯ ನಿತಿನ್, ಸಹೋದರ ಶಿವ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಸುಂದರ, ಭಾಸ್ಕರ ಈ ಹಿಂದೆ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ನಿನ್ನೆ ರಾತ್ರಿ ನಡೆಯಿತು.

ಮುಳಿಯಾರು ನಿವಾಸಿ ಯುವಕ ಬೆಹ್ರೈನ್‌ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬೋವಿಕ್ಕಾನ: ಮುಳಿಯಾರು ಅಮ್ಮಂಗೋಡು ನಿವಾಸಿಯಾಗಿರುವ ಯುವಕ ಬೆಹ್ರೈನ್‌ನ ವಾಸಸ್ಥಳದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಅಮ್ಮಂಗೋಡಿನ ದಿ| ಎ.ಬಿ.  ಕುಂಞಾಮು-ಬೀಫಾತಿಮ ಬಾವಿಕ್ಕೆರೆ ದಂಪತಿ ಪುತ್ರ ಎ.ಬಿ. ಇಕ್ಭಾಲ್ (44) ಸಾವನ್ನಪ್ಪಿದ ಯುವಕ. ಕಳೆದ 25 ವರ್ಷಗಳಿಂದ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಇಕ್ಭಾಲ್ ಮೂರೂವರೆ ತಿಂಗಳ ಹಿಂದೆ ಕೆಲಸಕ್ಕೆಂದು ಬೆಹ್ರೈನ್‌ಗೆ ಹೋಗಿ ದ್ದರು. ಅಲ್ಲಿರುವ ವಾಸಸ್ಥಳದಲ್ಲಿ ನಿನ್ನೆ ಸಂಜೆ ಅವರು ಮಂಚದ ಕೆಳಗೆ ಬಿದ್ದ ಸ್ಥಿತಿಯಲ್ಲಿ  ಸ್ನೇಹಿತರು ಪತ್ತೆಹಚ್ಚಿದ್ದರು. ನಂತರ ಆಸ್ಪತ್ರೆಗೆ ಸಾಗಿಸಿದ್ದು ಅಷ್ಟರೊಳಗೆ  ಸಾವನ್ನಪ್ಪಿದರೆಂದು  ಜತೆಗಿದ್ದ ಸ್ನೇಹಿತರು ತಿಳಿಸಿದ್ದಾರೆ. ಮೃತರು …

ಅಮೈ ಶ್ರೀಕೃಷ್ಣ ಭಜನಾಮಂದಿರ ರಜತ ಮಹೋತ್ಸವ: ನಿಧಿಕೂಪನ್ ಬಿಡುಗಡೆ

ಕಾಸರಗೋಡು: ಅಮೈ ಶ್ರೀ ಕೃಷ್ಣ ಭಜನಾ ಮಂದಿರದ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ತೀರ್ಮಾನಿಸಿದು, ಧನ ಸಂಗ್ರಹಣೆಗೆ ಶ್ರೀ ಕೃಷ್ಣ ನಿಧಿ ಲಕ್ಕಿ ಕೂಪನ್ ಬಿಡುಗಡೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಸಮಿತಿಯ ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ನೀಡಿ ನೆರವೇರಿಸಿದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವ ಮಲ್ಯ, ಕೋಶಾಧಿಕಾರಿ ವೇಣುಗೋಪಾಲ್, ಎ.ಕೆ ವಿಜಯ ಕೋಕಿಲ, ರಾಮಕೃಷ್ಣ ಹೊಳ್ಳ, ಜಯರಾಮ್ ಶೆಟ್ಟಿ, ಕಿಶೋರ್ ಕುಮಾರ್, ಶ್ರೀಲತಾ ಟೀಚರ್, ಸೌದಾಮಿನಿ, ಸಮಿತಿಯ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ …

ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನೃತ್ಯ ವೈಭವ

ಕುಂಬಳೆ: ಶೇಡಿಕಾವು ಶ್ರೀ ಅಯ್ಯಪ್ಪ ದೇವಸ್ಥಾನದ ಅಯ್ಯಪ್ಪ ದೀಪೋತ್ಸವ ಸಂದರ್ಭದಲ್ಲಿ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ಜರಗಿತು. ವಿಶ್ವನಾಥ ಪುತ್ತಿಗೆ, ಮುರಳಿ ನೀರ್ಚಾಲ್, ಕೃಪಾಕಿರಣ, ದಿವಾಕರ ಕಾಸರಗೋಡು, ಈಶ್ವರ ಸೂರಂಬೈಲು, ಸುರೇಶ್ ಪೈಕ ಸಮೂಹಗಾನ ನೀಡಿದರು. ಸಮಿತ, ತೇಜಸ್ವಿನಿ, ಹೃತ್ವಿಕ ಸಹಿತ ವಿವಿಧ ಕಲಾವಿದರು ನೃತ್ಯ ಪ್ರದರ್ಶನಗೈದರು. ಹರಿಕಾಂತ್ ಅವರಿಂದ ರಿಂಗ್ ಡ್ಯಾನ್ಸ್, ತನುಷ ಬಲ್ಲಾಳ್‌ರಿಂದ ಯೋಗ ನೃತ್ಯ, ಪ್ರೀತಿಕಾ ಪ್ರಸಾದ್‌ರಿಂದ ರಿಂಗ್ ನೃತ್ಯ …

ಕುಂಬಳೆಯ ಹಿರಿಯ ಲಾರಿ ಚಾಲಕ ನಿಧನ

ಕುಂಬಳೆ: ಕುಂಬಳೆಯ ಹಿರಿಯ ಲಾರಿ ಚಾಲಕ ಅಬ್ದುಲ್ಲ (75) ಎಂಬವರು ನಿಧನಹೊಂದಿದರು.  ಕುಂಬಳೆ ನಿವಾಸಿಯಾದ ಇವರು ಪ್ರಸ್ತುತ ಬಂಬ್ರಾಣದಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಫಾತಿಮ, ಮಕ್ಕಳಾದ ಕಬೀರ್, ನೌಶಾದ್, ನೌಫಲ್, ರಶೀದ, ಸೈನಾಸ್, ಬಲ್ಕೀಸ್,  ರಾಬಿಯ, ನೌಶೀನ, ಅಳಿಯ-ಸೊಸೆಯಂದಿರಾದ ರಿಯಾನ, ಇಶಾನ, ಇಬ್ರಾಹಿಂ, ಖಮರುದ್ದೀನ್, ಜಲೀಲ್, ಅಬು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಕುಂಬಳೆ ಬದರ್ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.

ಕೆಎಸ್‌ಟಿಎ ಮಂಜೇಶ್ವರ ಯೂನಿಟ್ ಸಮ್ಮೇಳನ, ನೂತನ ಪದಾಧಿಕಾರಿಗಳ ಆಯ್ಕೆ

ಮಂಜೇಶ್ವರ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ಕೆ.ಎಸ್.ಟಿ.ಎ) ಮಂಜೇಶ್ವರ ಯೂನಿಟ್ ಸಮ್ಮೇಳನ ನಿನ್ನೆ ಹೊಸಂಗಡಿ ವ್ಯಾಪಾರಿ ಭವನದಲ್ಲಿ ನಡೆಯಿತು. ಕೆ.ಎಸ್.ಟಿ.ಎ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ. ಎಸ್. ಉದ್ಘಾಟಿಸಿದರು. ಮಂಜೇಶ್ವರ ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಬಶೀರ್, ತಾಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ, ವಿಶ್ವನಾಥ್ ಶೆಟ್ಟಿ ಕುತ್ತಾನಾಡಿ ಮಾತಾಡಿದರು. ಜೊತೆ ಕಾರ್ಯದರ್ಶಿ ಪ್ರೇಮಲತಾ ವರದಿ ಮಂಡಿಸಿದರು. ಪುರುಷೋತ್ತಮ ಆಚಾರ್ಯ ಲೆಕ್ಕ ಪತ್ರ ಮಂಡಿಸಿದರು. ಕೃಷ್ಣ ಕೆದುಂಬಾಡಿ, ಕಲಾವತಿ ಹೊಸಂಗಡಿ. ತಾಲೂಕು …