ಅಮೈ ಶ್ರೀಕೃಷ್ಣ ಭಜನಾಮಂದಿರ ರಜತ ಮಹೋತ್ಸವ: ನಿಧಿಕೂಪನ್ ಬಿಡುಗಡೆ

ಕಾಸರಗೋಡು: ಅಮೈ ಶ್ರೀ ಕೃಷ್ಣ ಭಜನಾ ಮಂದಿರದ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ತೀರ್ಮಾನಿಸಿದು, ಧನ ಸಂಗ್ರಹಣೆಗೆ ಶ್ರೀ ಕೃಷ್ಣ ನಿಧಿ ಲಕ್ಕಿ ಕೂಪನ್ ಬಿಡುಗಡೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಸಮಿತಿಯ ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ನೀಡಿ ನೆರವೇರಿಸಿದರು. ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವ ಮಲ್ಯ, ಕೋಶಾಧಿಕಾರಿ ವೇಣುಗೋಪಾಲ್, ಎ.ಕೆ ವಿಜಯ ಕೋಕಿಲ, ರಾಮಕೃಷ್ಣ ಹೊಳ್ಳ, ಜಯರಾಮ್ ಶೆಟ್ಟಿ, ಕಿಶೋರ್ ಕುಮಾರ್, ಶ್ರೀಲತಾ ಟೀಚರ್, ಸೌದಾಮಿನಿ, ಸಮಿತಿಯ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಗುಣಪಾಲ ಅಮೈ ಸ್ವಾಗತಿಸಿ, ಸಾಂಸ್ಕ್ರತಿಕ ಕಾರ್ಯಕ್ರಮದ ಸಂಚಾಲಕ ರಾಜೇಶ್ ನಿರೂಪಿಸಿ, ಸುರೇಶ್ ಅಮೈ ವಂದಿಸಿದರು.

You cannot copy contents of this page