ಕಡಂಬಾರು ಬೆಜ್ಜದಲ್ಲಿ ಹಣವಿರಿಸಿ ಕೋಳಿ ಅಂಕ: ಮೂವರ ಸೆರೆ; 72,860 ರೂ. ವಶ

ಉಪ್ಪಳ: ಮಂಜೇಶ್ವರ ಕಡಂಬಾರುಬೆಜ್ಜ ಶ್ರೀ ಚೌಕಾರು ಮಂತ್ರವಾದಿ ಗುಳಿಗ ದೈವಸ್ಥಾನ ಸಮೀಪ ಹಿತ್ತಿಲಿನಲ್ಲಿ ಹಣವಿರಿಸಿ ಕೋಳಿ ಅಂಕ ನಡೆಸುತ್ತಿದ್ದ ಮೂರು ಮಂದಿಯನ್ನು ಮಂಜೇಶ್ವರ ಪೊಲೀ ರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ 72,860 ರೂಪಾಯಿ ಹಾಗೂ ಒಂದು ಕೋಳಿಯನ್ನು ವಶಪಡಿಸಲಾಗಿದೆ. ಅಂಗಡಿಮೊಗರಿನ ಚಂದ್ರಹಾಸ ರೈ (46), ಕಡಂಬಾರ್‌ನ ಬಾಲಕೃಷ್ಣ ಶೆಟ್ಟಿ (43), ಮಜೀರ್ಪಳ್ಳ ಸುಂಕದಕಟ್ಟೆಯ  ರೋಹಿತ್ ರೈ (30) ಎಂಬಿವರನ್ನು  ಮಂಜೇಶ್ವರ ಠಾಣೆ ಇನ್ ಸ್ಪೆಕ್ಟರ್ ಪಿ. ಅಜಿತ್ ಕುಮಾರ್‌ರ  ನಿರ್ದೇಶ ಪ್ರಕಾರ ಎಸ್‌ಐ ಕೆ.ಆರ್. ಉಮೇಶ್ ನೇತೃತ್ವದ …

ಮದ್ಯದಮಲಿನಲ್ಲಿ ಪತ್ನಿ, ಸಂಬಂಧಿಕನ ದೇಹಕ್ಕೆ ಆಸಿಡ್ ದಾಳಿ: ಆರೋಪಿ ಸೆರೆ

ಕಾಸರಗೋಡು: ಮದ್ಯದಮಲಿನಲ್ಲಿ ಪತ್ನಿ ಹಾಗೂ ಸಂಬಂಧಿಕನಾದ ಯುವಕನ ದೇಹಕ್ಕೆ  ಆಸಿಡ್ ಎರಚಿ ಗಾಯಗೊಳಿಸಿದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.   ಮುನ್ನಾಡ್ ಚಂಬಕ್ಕಾಡ್ ನಿವಾಸಿ  ಜಾನಕಿ (54), ಸಹೋದರಿಯ ಪುತ್ರ ಸುರೇಶ್ ಎಂಬಿವರ ದೇಹಕ್ಕೆ ಆಸಿಡ್ ಎರಚಲಾಗಿದೆ. ಗಾಯಗೊಂಡ ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಸಂಜೆ ಮುನ್ನಾಡ್ ಚಂಬಕ್ಕಾಡ್‌ನಲ್ಲಿ ಘಟನೆ ನಡೆದಿದೆ.  ಜಾನಕಿಯ ಪತಿ ರವೀಂದ್ರನ್ ಮದ್ಯಪಾನಿಯಾಗಿದ್ದು, ಮನೆಯಲ್ಲಿ ನಿತ್ಯ ಸಮಸ್ಯೆ ಸೃಷ್ಟಿಸುತ್ತಿರುವುದಾಗಿ ದೂರಲಾಗಿದೆ. ಇದರಿಂದ ಜಾನಕಿ ಹಾಗೂ ಮಕ್ಕಳು ಬೇರೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಕಳೆದೆರಡು …

ಶಬರಿಮಲೆ ಪ್ರಕರಣದಲ್ಲಿ ಹೊಸ ತಿರುವು: ರ್ಭಗುಡಿಯ ಚಿನ್ನ ಹೊದಿಸಿದ್ದ ಪ್ರಭಾವಳಿ ಸೇರಿ ಇನ್ನಷ್ಟು ಚಿನ್ನ ಕಳವು ;  ಮತ್ತೆ ಮಾಜಿ ಸಚಿವರ ವಿಚಾರಣೆ ಸಾಧ್ಯತೆ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಮಾತ್ರವಲ್ಲ ಚಿನ್ನ ಹೊದಿಸಲ್ಪಟ್ಟ ಪ್ರಭಾವಳಿ ಸೇರಿದಂತೆ ಇತರ ಹಲವು ಸಾಮಗ್ರಿಗಳನ್ನು ಕದ್ದು ಸಾಗಿಸಲಾಗಿದೆ ಎಂಬ ಮಾಹಿತಿ ವಿಶೇಷ ತನಿಖಾ ತಂಡಕ್ಕೆ ಲಭಿಸಿದೆ. ಈ ದೇಗುಲದ ಗರ್ಭಗುಡಿ ಯೊಳಗಿನ ಶಿವ ರೂಪ ಹಾಗೂ ಇತರ ಕೆತ್ತನೆಯ ರೂಪಗಳು ಒಳಗೊಂಡ ಚಿನ್ನ ಲೇಪಿತ ಪ್ರಭಾವಳಿಯನ್ನು  ಇರಿಸಲಾಗಿದೆ.  ಇದರ ಹೊರತಾಗಿ ದಶಾವತಾರ ರೂಪಗಳು ಒಳಗೊಂಡ ಎರಡು ತಾಮ್ರದ ಕವಚಗಳು, ರಾಶಿ ಚಿನ್ಹೆಗಳು ಒಳಗೊಂಡ ಇತರ ಎರಡು ಕವಚಗಳು ಹಾಗೂ  ಗರ್ಭಗುಡಿಯ …

ಕೋಟಿಚೆನ್ನಯ ಗರಡಿ ಕ್ಷೇತ್ರದ ಅರ್ಚಕ ನಿಧನ

ಕಾಸರಗೋಡು: ಅಡ್ಕತ್ತಬೈಲು ಕೋಟಿ ಚೆನ್ನಯ ಗರಡಿ ಕ್ಷೇತ್ರದ ಅರ್ಚಕ ರಮೇಶ್ (65 ನಿಧನಹೊಂದಿದರು. ಇಂದು ಬೆಳಿಗ್ಗೆ ಅಸೌಖ್ಯ ಕಾಣಿಸಿಕೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಇವರಿಗೆ  ಹೃದಯ ಸಂಬಂಧ ಅಸೌಖ್ಯ ವಿತ್ತೆನ್ನಲಾಗಿದೆ.   ಮೃತರು ಪತ್ನಿ ಸುಮತಿ, ಪುತ್ರ ನವೀನ, ಸಹೋದರರಾದ ಭಾಸ್ಕರ, ಪದ್ಮನಾಭ, ಸಹೋದರಿ ಪುಷ್ಪಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಸಂಜೆ ತರವಾಡು ಹಿತ್ತಿಲಿನಲ್ಲಿ ನಡೆಯಲಿದೆ.

ಶಾರ್ಟ್ ಸರ್ಕ್ಯೂಟ್ : ಮನೆಗೆ ಬೆಂಕಿ; ಭಾರೀ ನಷ್ಟ

ಕಾಸರಗೋಡು: ಉಳಿಯತ್ತಡ್ಕಕ್ಕೆ ಸಮೀಪದ ಭಗವತೀ ನಗರದ ಚಿತ್ರ ಕುಮಾರಿ ವೈದ್ಯರ್ ವಳಪ್ಪು ಎಂಬವರ  ಹೆಂಚು ಹಾಸಿದ ಮನೆಗೆ ನಿನ್ನೆ ರಾತ್ರಿ ಬೆಂಕಿ ತಗಲಿ ಭಾರೀ  ನಾಶನಷ್ಟ ಸಂಭವಿಸಿದೆ. ಮೊಬೈಲ್ ಫೋನ್ ಚಾರ್ಚಿಂಗ್ ನಡೆಸುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಆ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎನ್. ವೇಣುಗೋಪಾಲ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ ಸ್ಥಳಕ್ಕಾಗಮಿಸಿ ಸತತವಾಗಿ ನಡೆಸಿದ ಕಾರ್ಯಾ ಚರಣೆಯಲ್ಲಿ ಬೆಂಕಿ ನಂದಿಸಿದರು. ಬೆಂಕಿ ತಗಲಿದ  ಕೊಠಡಿ ಯೊಳಗಿದ್ದ …

ಮದ್ಯಪಾನಿ ಪ್ರಯಾಣಿಕರಿಂದ ರೈಲಿನಲ್ಲಿ ಸಮಸ್ಯೆ: ಬಿವರೇಜಸ್‌ನ ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸುವಂತೆ ಬೇಡಿಕೆ ಮುಂದಿರಿಸಿದ ರೈಲ್ವೇ

ತಿರುವನಂತಪುರ: ಪ್ರಯಾಣಿಕರು ಮದ್ಯ ಸೇವಿಸಿ ರೈಲಿನಲ್ಲಿ ಸಮಸ್ಯೆ ಸೃಷ್ಟಿಸುವುದು ನಿತ್ಯ ಘಟನೆಯಾಗುವು ದರೊಂದಿಗೆ ವಿಚಿತ್ರ ಬೇಡಿಕೆಯೊಂದಿಗೆ ರೈಲ್ವೇ ಇಲಾಖೆ ರಂಗಕ್ಕಿಳಿದಿದೆ. ರೈಲು ನಿಲ್ದಾಣ ಸಮೀಪದಲ್ಲಿರುವ ಬಿವರೇಜಸ್ ಕಾರ್ಪೋರೇಶನ್‌ನ ಔಟ್‌ಲೆಟ್ ಗಳನ್ನು ಮುಚ್ಚು ಗಡೆಗೊಳಿ ಸಬೇಕೆಂಬುದಾಗಿದೆ ರೈಲ್ವೇಯ ಬೇಡಿಕೆ. ರೈಲ್ವೇಯ ತಿರುವನಂತಪುರ ಡಿವಿಶನ್‌ನಿಂದ ಈ ಕುರಿತಾಗಿ ಬೆವ್‌ಕೋಗೆ ಮನವಿ ಸಲ್ಲಿಸಲಾಗಿದೆ.  ರೈಲ್ವೇ ನಿಲ್ದಾಣಗಳ ೫೦೦ ಮೀಟರ್ ನೊಳಗಿನ ವ್ಯಾಪ್ತಿಯಿಂದ ಬೆವ್‌ಕೋದ ಔಟ್‌ಲೆಟ್‌ಗಳನ್ನು ತೆರವುಗೊಳಿ ಬೇಕೆಂದು ರೈಲ್ವೇ ಒತ್ತಾಯಿಸಿದೆ. ನವಂಬರ್ ೨ರಂದು ವರ್ಕಲದಲ್ಲಿ ಕೇರಳ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಿಂದ ಯುವತಿಯನ್ನು  …

ಪೆಟ್ರೋಲ್ ಬಂಕ್ ಬಳಿ ಬೆಂಕಿ ಅನಾಹುತ: 20 ಎಕ್ರೆ ಜಮೀನು ಬೆಂಕಿಗಾಹುತಿ

ಸೀತಾಂಗೋಳಿ: ಪೆಟ್ರೋಲ್ ಬಂಕ್ ಬಳಿ ಬೆಂಕಿ ಅನಾಹುತ ಉಂಟಾಗಿ ಅಗ್ನಿ ಶಾಮಕದಳದ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಸಂಭಾವ್ಯ   ಭಾರೀ ದೊಡ್ಡ ಅನಾಹುತ ತಪ್ಪಿಹೋದ ಘಟನೆ ನಡೆದಿದೆ. ದರ್ಭೆತ್ತಡ್ಕ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಸಮೀಪ ನಿನ್ನೆ ಮಧ್ಯಾಹ್ನ ಈ ಬೆಂಕಿ ಅನಾಹುತ ಸಂಭವಿಸಿದೆ. ಕುಂಬಳೆ-ಬದಿಯಡ್ಕ ರಸ್ತೆಯ ಸೀತಾಂಗೋಳಿಯ ಮಾಲಿಕ್ ದೀನಾರ್ ಕಾಲೇಜು ಪರಿಸರದಲ್ಲಿ ಮೊದಲು  ಬೆಂಕಿ ಕಾಣಿಸಿಕೊಂಡಿತು. ನಂತರ ಅದು ಇನ್ನಷ್ಟು ಪ್ರದೇಶಗಳಿಗೆ ಪಸರಿಸಿ  ಅಲ್ಲೇ ಪಕ್ಕದಲ್ಲಿರುವ ಪೆಟ್ರೋಲ್  ಬಂಕ್‌ನತ್ತ ಸಾಗುತ್ತಿರುವುದನ್ನು ಗಮನಿಸಿ ಪೆಟ್ರೋಲ್ ಬಂಕ್ ನವರು ನೀಡಿದ ಮಾಹಿತಿಯಂತೆ …

ಗೆಳೆಯನ ಜೊತೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಲ್ಲಿಕೋಟೆ: ಕೈದಪ್ಪೊಳದಲ್ಲಿ ಬಾಡಿಗೆಗೆ ವಾಸಿಸುವ ಫ್ಲ್ಯಾಟ್‌ನಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಕೂರು ನಿವಾಸಿ ಹಸ್ನ (34) ಮೃತಪಟ್ಟ ಯುವತಿ. ವಿವಾಹ ವಿಚ್ಛೇಧನಗೈದ ಹಸ್ನ ಕಳೆದ ೮ ತಿಂಗಳಿಂದ ಪುದುಪ್ಪಾಡಿ ನಿವಾಸಿಯಾದ ಆದಿಲ್ ಎಂಬ ಯುವಕನ ಜೊತೆ ವಾಸಿಸುತ್ತಿದ್ದರು. ಕಾನೂನು ಪರವಾಗಿ ಇವರಿಬ್ಬರು ವಿವಾಹ ಮಾಡಿಕೊಂಡಿಲ್ಲ. ಮಂಗಳವಾರ ಬೆಳಿಗ್ಗೆ ಕೊಠಡಿ ತೆರೆಯದ ಹಿನ್ನೆಲೆಯಲ್ಲಿ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಹಸ್ನ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ ಎಂದು ಯುವಕ ಹೇಳಿಕೆ ನೀಡಿದ್ದಾನೆ. ಮಹಜರು …

ಜಿದ್ದಾಜಿದ್ದಿನ ಹೋರಾಟ ನೀಡಿ ಶರಣಾದ ಕಾಸರಗೋಡು ಉಪಜಿಲ್ಲೆ ಶಾಲಾ ಕಲೋತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆಗೆ ಕಿರೀಟ

ಮೊಗ್ರಾಲ್: ಮೂರು ದಿನಗಳಿಂದ ಜರಗುತ್ತಿದ್ದ ಜಿಲ್ಲಾ ಶಾಲಾ ಕಲೋ ತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆ ಚಾಂಪ್ಯನ್ ಪಟ್ಟ ಗಳಿಸಿದೆ. ಮೊದಲ ದಿನದಿಂದಲೇ ಕಾಸರಗೋಡು ಉಪಜಿಲ್ಲೆ ಹಾಗೂ ಹೊಸದುರ್ಗ ಉಪಜಿಲ್ಲೆ ಜಿದ್ದಾಜಿದ್ದಿನ ಹೋರಾಟದೊಂದಿಗೆ ಮುಂದುವರಿದಿದ್ದು, ನಿನ್ನೆ ರಾತ್ರಿ 7 ಗಂಟೆಯಾಗುವಾಗ ಎರಡು ಉಪ ಜಿಲ್ಲೆಗಳಿಗೂ 935 ಅಂಕ ಲಭಿಸಿತ್ತು. ಉಳಿದಿದ್ದ 4 ಸ್ಪರ್ಧೆಗಳಲ್ಲಿ 2ರ ಫಲಿತಾಂಶ ಬಂದಾಗ ಕಾಸರಗೋಡು ಉಪಜಿಲ್ಲೆಗೆ 945, ಹೊಸದುರ್ಗ ಉಪಜಿಲ್ಲೆಗೆ 943 ಅಂಕ ಲಭಿಸಿತ್ತು. ಕೊನೆಯ ಎರಡು ಸ್ಪರ್ಧೆಗಳಲ್ಲಿ 10 ಅಂಕ ಗಳಿಸಿ ಹೊಸದುಗ ಚಾಂಪ್ಯನ್ …

ಕಲೋತ್ಸವ: ಹೈಯರ್ ಸೆಕೆಂಡರಿ ನಾಟಕ ಸ್ಪರ್ಧೆಯಲ್ಲಿ ಇರಿಯಣ್ಣಿ ಶಾಲೆ ತಂಡ ರಾಜ್ಯಮಟ್ಟಕ್ಕೆ

ಕಾಸರಗೋಡು: ನಾಟಕ ಸ್ಪರ್ಧೆ ಯಲ್ಲಿ ಸತತ ನಾಲ್ಕನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಇರಿಯಣ್ಣಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಗಮನ ಸೆಳೆದಿದೆ. ಈ ವರ್ಷದ  ಮ‘ಅರಣ’ ಪಾಚಿಲ್ ಎಂಬ ನಾಟಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಸಮಾಜದಲ್ಲಿನ ಮೂಢನಂಬಿಕೆ ಹಾಗೂ ತಪ್ಪು ಧೋರಣೆಗಳ ಆಧಾರದಲ್ಲಿ ಸಾಯುಜ್ ರಚಿಸಿದ ನಾಟಕವನ್ನು ಮನುಪ್ರೀತ್, ಸಾಯುಜ್, ಅಭಿನವ್ ಎಂಬಿವರು ಸೇರಿ ನಿರ್ದೇಶಿಸಿದ್ದರು. ಇದು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಶಾಲೆಯ ತಂಡ ರಾಜ್ಯಮಟ್ಟಕ್ಕೆ …