ಕುಂಬ್ಡಾಜೆ: ವೃದ್ದೆ ಸಾವಿಗೀಡಾಗಿರುವುದು ಉಸಿರುಗಟ್ಟಿ ಎಂಬ ಸೂಚನೆ; ಕೃತ್ಯ ನಡೆಸಿದವರು ಯಾರು? ತನಿಖೆ ತೀವ್ರಗೊಳಿಸಿದ ಬದಿಯಡ್ಕ ಪೊಲೀಸ್
ಬದಿಯಡ್ಕ: ಕುಂಬ್ಡಾಜೆ ಮವ್ವಾರು ಅಜಿಲ ಎಂಬಲ್ಲಿನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವೃದ್ದೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಇದು ಕೊಲೆ ಕೃತ್ಯವಾಗಿದೆ ಎಂಬ ಅನುಮಾನದ ಮೇರೆಗೆ ಪೊಲೀಸ್ ತನಿಖೆ ಮುಂದುವರಿಯುತ್ತಿದೆ. ಇಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಇದರ ವರದಿ ಲಭಿಸಿದ ಬಳಿಕವೇ ಸಾವಿಗೆ ಕಾರಣವೇನೆಂಬ ಬಗ್ಗೆ ಮಾಹಿತಿ ಲಭಿಸಬಹುದೆಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ. ಮವ್ವಾರು ಅಜಿಲದ ದಿ| ವೆಂಕಪ್ಪ ಶೆಟ್ಟಿಯವರ ಪತ್ನಿ ಪುಷ್ಪಲತಾ ವಿ. ಶೆಟ್ಟಿ (72) …