ಮುಖ್ಯಮಂತ್ರಿಯ ವಿದೇಶ ಯಾತ್ರೆಗೆ ಎರಡು ವರ್ಷದಲ್ಲಿ ವಿಮಾನ ಖರ್ಚು 41.57 ಲಕ್ಷ ರೂ.

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2022-23ರಲ್ಲಿ ನಡೆಸಿದ ವಿಮಾನ ಯಾತ್ರೆಗಳ ಖರ್ಚಿನ ವತಿಯಿಂದ 41.57 ಲಕ್ಷ ರೂ. ಪಡೆದಿದ್ದಾರೆ. 2022 ಜನವರಿ 15ರಿಂದ ಕಳೆದ ವರ್ಷ ಡಿಸೆಂಬರ್ ತನಕದ ಅವಧಿಯಲ್ಲಿ ಮುಖ್ಯಮಂತ್ರಿ ಗಲ್ಫ್ ರಾಷ್ಟ್ರಗಳಿಗೆ ಯಾತ್ರೆ ಮಾತ್ರವಲ್ಲ, ಅಮೇರಿಕ, ಬ್ರಿಟನ್, ಕ್ಯೂಬಾ ಸೇರಿದಂತೆ ಒಟ್ಟು 16 ರಾಷ್ಟ್ರಗಳಿಗೆ ಯಾತ್ರೆ ನಡೆಸಿದ್ದಾರೆ.  ಹೀಗೆ ನಡೆಸಲಾದ ವಿದೇಶಯಾತ್ರೆಯ ವಿಮಾನ ಶುಲ್ಕದ ವತಿಯಿಂದ ಅವರು 2022 ಮತ್ತು 2023ರಲ್ಲಿ ಒಟ್ಟು 41.57 ಲಕ್ಷ ರೂ. ಪಡೆದಿದ್ದಾರೆಂದು ಮಾಹಿತಿ ಹಕ್ಕು ಕಾನೂನುಪ್ರಕಾರ ರಾಜ್ಯ …

ಕೇರಳದ ಅರ್ಜಿ ಪರಿಗಣಿಸಿ ಸುಪ್ರೀಂಕೋರ್ಟ್ ನಿರ್ದೇಶ: ಎಸ್‌ಐಆರ್ ಸಮಯ ವ್ಯಾಪ್ತಿ ಇನ್ನೂ ಎರಡು ವಾರಗಳ ತನಕ ವಿಸ್ತರಣೆ

ತಿರುವನಂತಪುರ: ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಗಾಗಿ ಕೇರಳದಲ್ಲಿ ನಿಗದಿಪಡಿಸಲಾಗಿರುವ ಸಮಯಾವ ಕಾಶವನ್ನು ಇನ್ನೂ ಎರಡು ವಾರಗಳ ತನಕ ವಿಸ್ತರಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿದೆ.  ಎಸ್‌ಐಆರ್ ವಿಷಯದಲ್ಲಿ  ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೇರಳ ಸೇರಿದಂತೆ ಇತರ ರಾಜ್ಯದಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಈ ನಿರ್ದೇಶ ನೀಡಿದೆ.  ಎಸ್‌ಐಆರ್ ಕ್ರಮಗಳನ್ನು ಈ ತಿಂಗಳ 22ರೊಳಗೆ ಪೂರ್ತೀಕರಿಸುವಂತೆ ಆಯೋಗ ಈ ಹಿಂದೆ ಅಂತಿಮ ಗಡು ನೀಡಿತ್ತು. ಈಗ ಸುಪ್ರೀಕೋರ್ಟ್ ನೀಡಿರುವ ನಿರ್ದೇಶ …

ರಾಜ್ಯದ ಕುಂಭಮೇಳಕ್ಕೆ ಔಪಚಾರಿಕ ಚಾಲನೆ ಇಂದು: 19ರಂದು ರಾಜ್ಯಪಾಲರಿಂದ ಉದ್ಘಾಟನೆ

ತಿರುನಾವಾಯ: ಕೇರಳದ ಕುಂಭಮೇಳವೆಂದು  ವಿಶೇಷಿಸಲ್ಪಡುವ ಮಹಾ ಮಾಘ ಮಹೋತ್ಸವಕ್ಕೆ ಭಾರತ ಹೊಳೆಯಲ್ಲಿ ವಿಶೇಷ ಪೂಜೆಗಳೊಂದಿಗೆ ಇಂದು ಚಾಲನೆ ದೊರೆಯಲಿದೆ. ಈತಿಂಗಳ 19ರಿಂದ ಫೆ. ೩ರವರೆಗೆ ಮಹಾ ಮಾಘ ಮಹೋತ್ಸವ ನಡೆಯಲಿದೆ. ೧೯ರಂದು ಬೆಳಿಗ್ಗೆ 11 ಗಂಟೆಗೆ  ನಾವಾ ಮುಕುಂದಕ್ಷೇತ್ರ ಪರಿಸರದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಕುಂಭಮೇಳ ಉದ್ಘಾಟಿಸುವರು. ಇದಕ್ಕಿರುವ ಸಿದ್ಧತೆಗಳು ಪೂರ್ತಿಗೊಂಡಿದೆಯೆಂದು  ಮಹಾಮಾಘ ಸಭಾಪತಿ  ಸ್ವಾಮಿ ಆನಂದವನಂ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರಯಾಗ್‌ನಲ್ಲಿ ಕುಂಭಮೇಳಕ್ಕೆ ನೇತೃತ್ವ ನೀಡುವ ನಾಗ ಸನ್ಯಾಸಿಗಳ ಸಮೂಹವಾದ ಜುನ ಅಘಾಢ ಇಲ್ಲಿ …