ಶಬರಿಮಲೆ ಚಿನ್ನ ಕಳವು: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ಮಧ್ಯೆ ವಾಗ್ವಾದ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಕಾವು ಇಂದು ಬೆಳಿಗ್ಗೆ ವಿಧಾನಸಭೆಯಲ್ಲೂ ಭುಗಿಲೆದ್ದಿತು. ಇದರ ಹೆಸರಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಭಾರೀ ವಾಗ್ವಾದ ಹಾಗೂ ಸದ್ದುಗದ್ದಲದ ವಾತಾವರಣ ನಿರ್ಮಾಣಗೊಂಡಿದ್ದು, ಇದರಿಂದ  ಸದನದ ಇಂದಿನ ಕಾರ್ಯಕಲಾಪಗಳನ್ನು ನಡೆಸಲು ಸಾಧ್ಯವಾಗದೆ  ವಿಧಾನಸಭಾ ಅಧ್ಯಕ್ಷರು ಅಲ್ಲಿಗೇ ಕೊನೆಗೊಳಿಸಿದರು. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಾಗಲೇ ಫಲಕ ಗಳನ್ನು ಹಿಡಿದುಕೊಂಡು ಸದನಕ್ಕೆ ಆಗಮಿಸಿದ  ವಿಪಕ್ಷಗಳ ಶಾಸಕರು ಶಬರಿಮಲೆ ಚಿನ್ನ ಕಳವು ವಿಷಯಕ್ಕೆ ಸಂಬಂಧಿಸಿ ಪ್ರತಿಭಟನೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಮುಜರಾಯಿ …

ಶಬರಿಮಲೆ ಚಿನ್ನ ಕಳವು: ಪೋತ್ತಿಯ ಬೆನ್ನಲ್ಲೇ ಇತರ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಇ.ಡಿ ಕ್ರಮ

ಶಬರಿಮಲೆ: ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಒಂದನೇ ಆರೋಪಿ  ಪ್ರಾಯೋಜಕ ಉಣ್ಣಿಕೃಷ್ಣನ್ ಪೋತ್ತಿಯ 1.30 ಕೋಟಿ ರೂ.ಗಳ ಆಸ್ತಿಗಳನ್ನು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇ.ಡಿ) ಮುಟ್ಟುಗೋಲು ಹಾಕಿದ ಬೆನ್ನಲ್ಲೇ ಈ ಪ್ರಕರಣದ ಇತರ   ಆರೋಪಿಗಳ ಆಸ್ತಿಗಳನ್ನು ಮುಟ್ಟುಗೋಲು  ಹಾಕುವ ಅಗತ್ಯದ ಕ್ರಮದಲ್ಲೂ ಇ.ಡಿ ತೊಡಗಿದೆ. ಇದರಂತೆ ಈ ಪ್ರಕರಣದ ಇತರ ಆರೋಪಿಗಳ ಪೈಕಿ ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ವಾಸು, ಮಂಡಳಿಯ ಮಾಜಿ ಅಧಿಕಾರಿ ಮುರಾರಿಬಾಬುರ ಆಸ್ತಿಗಳ ಮುಟ್ಟುಗೋಲು ಕ್ರಮದಲ್ಲೂ ಇ.ಡಿ ತೊಡಗಿದೆ. ಇದಾದ …

ಹೊಳೆ ಹೊಯ್ಗೆ ಸಾಗಿಸುತ್ತಿದ್ದ ವಾಹನವನ್ನು ಬೆನ್ನಟ್ಟಿ ವಶಪಡಿಸಿದ ಪೊಲೀಸ್: ಆರೋಪಿಗಳು ಪರಾರಿ 

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆಯನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಬೆನ್ನಟ್ಟಿ ವಶಪಡಿಸಿಕೊಂಡಿದ್ದಾರೆ. ವಾಹನದಲ್ಲಿದ್ದವರು ಓಡಿ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಕೊಯಿಪ್ಪಾಡಿ ಬದ್ರಿಯಾ ನಗರದ  ಕೆ.ಬೆಡ್ ತಹ್‌ನೂನ್ ಹಾಗೂ ಜೊತೆಗಿದ್ದ ಜುನೈದ್ ಎಂಬಿ ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ 10.40ರ ವೇಳೆ ಘಟನೆ ನಡೆದಿದೆ. ಕುಂಬಳೆ ಎಸ್‌ಐ ಕೆ. ಶ್ರೀಜೇಶ್, ಎಎಸ್‌ಐ ಸುರೇಶ್, ಸಿಪಿಒ ಸಂದೀಪ್ ಎಂಬಿವರು ನಿನ್ನೆ ರಾತ್ರಿ ಪಟ್ರೋಲಿಂಗ್ ನಡೆಸುತ್ತಿದ್ದರು. ಈ ವೇಳೆ ಮೊಗ್ರಾಲ್ …

ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡುತ್ತಿದ್ದೇವೆ’ ಎಂಬ ಸಂದೇಶ ಕಳುಹಿಸಿದ ತಾಯಿ, ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತಿರುವನಂತಪುರ: ಇಲ್ಲಿಗೆ ಸಮೀಪದ ಕಮಲೇಶ್ವರ ಆರ್ಯನ್‌ಕುಳಿಯಲ್ಲಿ ತಾಯಿ ಹಾಗೂ ಪುತ್ರಿ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆರ್ಯನ್‌ಕುಳಿ ಶಾಂತಿಗಾರ್ಡನ್‌ನ ಸಜಿತ (54), ಪುತ್ರಿ ಗ್ರೀಮ (30) ಎಂಬಿವರನ್ನು ನಿನ್ನೆ ಸಂಜೆ ಮನೆಯ ಚಾವಡಿಯ ಸೋಫಾದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆ ಗೈಯ್ಯುವ ಬಗ್ಗೆ ಸಂದೇಶವನ್ನು ಕುಟುಂಬದ ವಾಟ್ಸಪ್ ಗ್ರೂಪ್‌ನಲ್ಲಿ ರವಾನಿಸಿದ ಬಳಿಕ ಇವರಿಬ್ಬರೂ ಆತ್ಮಹತ್ಯೆ ಗೈದಿರಬೇಕೆನ್ನಲಾಗಿದೆ. ‘ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡುತ್ತಿದ್ದೇವೆ’ ಎಂಬ ಸಂದೇಶ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದು, ಕೂಡಲೇ ಸಂಬಂಧಿಕರು ಹಾಗೂ ನೆರೆಮನೆ ನಿವಾಸಿಗಳು ಮನೆಗೆ ತಲುಪಿದ್ದಾರೆ. …

ಬೇಕರಿಗೆ ತಲುಪಿದ ಬಾಲಕಿ ಮುಂದೆ ನಗ್ನತೆ ಪ್ರದರ್ಶನ: ವೃದ್ದನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಬೇಕರಿಗೆ ಬಂದ ಎಂಟರ ಹರೆಯದ ಬಾಲಕಿ ಮುಂದೆ ವೃದ್ದನೋರ್ವ ನಗ್ನತೆ ಪ್ರದರ್ಶಿಸಿರುವುದಾಗಿ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಪಾಣತ್ತೂರು ಮಾಪಿಲಚ್ಚೇರಿಯ ಗಂಗಾಧರನ್ (68) ಎಂಬಾತನ ವಿರುದ್ಧ ರಾಜಪುರಂ ಪೊಲೀ ಸರು ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದಾರೆ. ಪಾಣತ್ತೂರಿನ ಬೇಕರಿಯೊಂ ದರಲ್ಲಿ ಇತ್ತೀಚೆಗೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಬಾಲಕಿ ಬೇಕರಿಯಿಂದ ಸಾಮಗ್ರಿ ಖರೀದಿಸಲು ತಲುಪಿದ್ದಳೆನ್ನಲಾಗಿದೆ. ಅಂಗಡಿ ಮಾಲಕ ಒಳಗೆ ಹೋಗಿ ಸಾಮಗ್ರಿ ತೆಗೆಯುತ್ತಿದ್ದಾಗ ಅಂಗಡಿಯಲ್ಲಿದ್ದ ವೃದ್ದ ಬಾಲಕಿಯ ಮುಂದೆ ನಗ್ನತೆ ಪ್ರದರ್ಶಿಸಿರುವುದಾಗಿ ದೂರಲಾಗಿದೆ.

ರಾಷ್ಟ್ರೀಯ ಹೆದ್ದಾರಿ : ಕುಂಬಳೆಯಲ್ಲಿ ಟೋಲ್ ಸಂಗ್ರಹರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವುದು ಹೇಗೆ-ಹೈಕೋರ್ಟ್ 

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕುಂಬಳೆ ಆರಿಕ್ಕಾಡಿಯಲ್ಲಿ ರಸ್ತೆ ನಿರ್ಮಾಣ ಪೂರ್ಣಗೊಳಿಸದೆ ಟೋಲ್ ಸಂಗ್ರಹಿಸುವುದು ಹೇಗೆಂದು ಹೈಕೋರ್ಟ್ ಪ್ರಶ್ನಿಸಿದೆ. ಕ್ರಿಯಾ ಸಮಿತಿ ಕನ್ವೀನರ್ ಅಶ್ರಫ್ ಕಾರ್ಳೆ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ನ ಏಕ ಸದಸ್ಯ ಪೀಠ ಈ ಪ್ರಶ್ನೆಯನ್ನು ಮುಂದಿರಿಸಿದೆ. ಇದೇ ವೇಳೆ  ಆಯೋಗವನ್ನು ನೇಮಿಸಬೇಕೆಂಬ ಅರ್ಜಿಯನ್ನು ಕ್ರಿಯಾಸಮಿತಿ ಮುಂದಿರಿಸಿದ್ದು ಅದನ್ನು ರಾಷ್ಟ್ರೀಯ ಹೆದ್ದಾರಿ ಅಥೋರಿಟಿಗಾಗಿ ಹಾಜರಾದ ನ್ಯಾಯವಾದಿ ವಿರೋಧಿಸಿದ್ದಾರೆ. ಜಸ್ಟೀಸ್ ಬಚ್ಚು ಕುರ್ಯನ್ ಥೋಮಸ್ ಅಧ್ಯಕ್ಷರಾಗಿರುವ ಏಕ ಸದಸ್ಯ ಪೀಠ ಈ ಪ್ರಕರಣವನ್ನು ಪರಿಗಣಿಸುತ್ತಿದೆ. ಅರ್ಜಿಯ ಮೇಲೆ …

ರೈಲಿನ ಶೌಚಾಲಯದೊಳಗೆ ಬಾಗಿಲು ಮುಚ್ಚಿ ಕುಳಿತುಕೊಂಡ ಯುವಕ-ಯುವತಿ: ಪ್ರಯಾಣಿಕರಿಂದ ತರಾಟೆ

ಕೊಚ್ಚಿ: ರೈಲಿನ ಶೌಚಾಲಯ ದೊಳಗೆ ಹೋದ ಯುವಕ ಹಾಗೂ ಯುವತಿ ಎರಡು ಗಂಟೆಗಳ ಕಾಲ ಬಾಗಿಲು ಮುಚ್ಚಿ ಒಳಗಿದ್ದುದಾಗಿ ದೂರಲಾಗಿದೆ. ಇದರಿಂದ ಇತರ ಪ್ರಯಾಣಿಕರಿಗೆ ಶೌಚಾಲಯವನ್ನು ಬಳಸಲು ಸಾಧ್ಯವಾಗದೇ ಇದ್ದುದರಿಂದ ಬಾಗಿಲು ಬಡಿದು ಬೊಬ್ಬೆ ಹಾಕಿದರೂ ಯುವಕ-ಯುವತಿ ಹೊರಗೆಬಂದಿಲ್ಲ. ಕೊನೆಗೆ  ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಶೌಚಾಲಯದ ಬಾಗಿಲು ತೆರೆದಿದ್ದು ಆದರೆ ಏನೂ ಸಂಭವಿಸಿಲ್ಲವೆಂಬ ರೀತಿಯಲ್ಲಿ ಯುವಕ-ಯುವತಿ ವರ್ತಿಸಿರುವುದಾಗಿ ದೂರಲಾಗಿದೆ. ಇದೇ ವೇಳೆ ಯುವಕ ಹಾಗೂ ಯುವತಿ ಶೌಚಾಲಯದೊಳಗೆ  ಅವಿತುಕೊಂಡು ಇತರ ಪ್ರಯಾಣಿಕರು ಬಾಗಿಲು ಬಡಿಯುವ …

ಅಧಿಕಾರಿಗಳ ಅನಾಸ್ಥೆಕುಂಬ್ಡಾಜೆ- ನೇರಪ್ಪಾಡಿ ತೂಗುಸೇತುವೆ ಅಪಾಯ ಭೀತಿಯಲ್ಲಿ

ಕುಂಬ್ಡಾಜೆ: ಶಾಲಾ ವಿದ್ಯಾರ್ಥಿಗಳು ಸಹಿತ ಸ್ಥಳೀಯರು ನಿರಂತರ ಆಶ್ರಯಿಸುವ ತೂಗುಸೇತುವೆಯೊಂದು ಜೀರ್ಣಾವಸ್ಥೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿ ಸೃಷ್ಟಿಯಾಗಿದೆ. ಕುಂಬ್ಡಾಜೆ ನೇರಪ್ಪಾಡಿಯನ್ನು ಸಂಪರ್ಕಿಸುವ ಈ ತೂಗುಸೇತುವೆ ಜೀರ್ಣಗೊಂಡು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಈ ಬಗ್ಗೆ ಹಲವಾರು ಬಾರಿ ಪಂಚಾಯತ್ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಉಂಟಾಗಿಲ್ಲ. ಅಧಿಕಾರಿಗಳು ಈ ಸೇತುವೆಯ ಬಗ್ಗೆ ನಿರಾಸಕ್ತಿ ವಹಿಸುತ್ತಿರುವುದಾಗಿಯೂ ದೂರಲಾಗಿದೆ. ದಿನಂಪ್ರತಿ ೧೦೦ಕ್ಕೂ ಅಧಿಕ ಪ್ರಯಾಣಿಕರು ಈ ಮೂಲಕ ಸಾಗುತ್ತಿದ್ದಾರೆ. ಹಲವಾರು ಶಾಲೆಗಳಿಗೆ ವಿದ್ಯಾರ್ಥಿಗಳು, ವಿವಿಧ …

ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಹೆಚ್ಚಳ ವಿರುದ್ಧ  ಕೇರಳ ಸಾರಿಗೆ ಸಚಿವರಿಗೆ ಶಾಸಕ ಎಕೆಎಂ ಅಶ್ರಫ್‌ರಿಂದ ಮನವಿ

ತಿರುವನಂತಪುರ:  ಕಾಸರಗೋಡು-ಮಂಗಳೂರು ಮಧ್ಯೆ ಸಂಚಾರ ನಡೆಸುವ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣ ದರವನ್ನು ದಿಢೀರ್ ಹೆಚ್ಚಿಸಿರುವ ಕರ್ನಾಟಕ ಸರಕಾರದ ಕ್ರಮದ ಬಗ್ಗೆ ರಾಜ್ಯ ಸರಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಕೇರಳ ರಾಜ್ಯ ಸಾರಿಗೆ  ಸಚಿವ ಗಣೇಶ್ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.  ಕರ್ನಾಟಕದ ಆರ್ಡಿನರಿ ಸಾರಿಗೆ  ಬಸ್‌ಗಳಲ್ಲಿ 7 ರೂಪಾಯಿ, ರಾಜಹಂಸ ಬಸ್‌ನಲ್ಲಿ 10 ರೂಪಾಯಿ ಹೆಚ್ಚಿಸಲಾಗಿದೆ. ಕರ್ನಾಟಕದ  42 ಬಸ್‌ಗಳು ಆರಿಕ್ಕಾಡಿ ಟೋಲ್ ಪ್ಲಾಸಾ ಮೂಲಕ ಸಂಚರಿಸುತ್ತಿವೆ. ಕಾಸರಗೋಡಿನಿಂದ ಮಂಗಳೂರಿಗೆ …

ದರ್ಸ್ ವಿದ್ಯಾರ್ಥಿ ನಾಪತ್ತೆ

ಉಪ್ಪಳ: ದರ್ಸ್ ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೊಸೋಟು ಸತ್ಯಡ್ಕ ಮುತ್ತುಕುಂಜ ಹೌಸ್‌ನ  ಅಬೂಬಕ್ಕರ್‌ರ ಪುತ್ರ ಯೂಸಫ್ ಖಲಂದರ್ ಬಾಬ (14) ನಾಪತ್ತೆ ಯಾದ ವಿದ್ಯಾರ್ಥಿಯಾಗಿದ್ದಾನೆ.  ನಿನ್ನೆ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೋದ ಬಳಿಕ ಪುತ್ರ ಮರಳಿ ಬಂದಿಲ್ಲವೆಂದು ತಿಳಿಸಿ ಅಬೂ ಬಕ್ಕರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂ ಭಿಸಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಫೋನ್  ಮನೆಯಲ್ಲೇ ಇದೆಯೆಂದೂ ದೂರಿನಲ್ಲಿ ತಿಳಿಸಲಾಗಿದೆ.