ದೀಪಕ್‌ ಆತ್ಮಹತ್ಯೆ: ಆರೋಪಿ ಶಿಂಜಿತ ಮುಸ್ತಫ ಸೆರೆ

ಕಲ್ಲಿಕೋಟೆ: ಬಸ್‌ನಲ್ಲಿ ಲೈಂಗಿಕ ಆಕ್ರಮಣ ನಡೆಸಿರುವುದಾಗಿ ಪ್ರಚಾರಗೊಂಡ ಬೆನ್ನಲ್ಲೇ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣದಲ್ಲಿ ಆರೋಪಿ ಶಿಂಜಿತ ಮುಸ್ತಫ ಸೆರೆಯಾಗಿದ್ದಾಳೆ. ವಡಗರದ ಸಂಬಂಧಿಕರ ಮನೆಯಿಂದ ಯುವತಿ ಸೆರೆಗೀಡಾಗಿದ್ದಾಳೆ. ಈಕೆಯನ್ನು ಕೂಡಲೇ ಮೆಡಿಕಲ್ ಕಾಲೇಜು ಪೊಲೀಸರು ಠಾಣೆಗೆ ಕೊಂಡೊಯ್ದರು. ದೇಶ ಬಿಟ್ಟು ಪರಾರಿಯಾಗದಿರಲು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಪೊಲೀಸರು ಶಿಂಜಿತಾಳ ವಿರುದ್ಧ ಲುಕೌಟ್ ನೋಟೀಸ್ ಹೊರಡಿಸಿದ್ದರು. ಇದರ ಬೆನ್ನಲ್ಲೇ ಶಿಂಜಿತ ಕಲ್ಲಿಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ನೀಡಿದ್ದಳು. ಜಾಮೀ ನುರಹಿತ ಕಾಯ್ದೆ ಹೇರಿ ಶಿಂಜಿತಳ …

ದೇಶೀಯ ಅಧ್ಯಾಪಕ ಪರಿಷತ್ತಿನ ರಾಜ್ಯ ಸಮ್ಮೇಳನಕ್ಕೆ ಇಂದು ಸಂಜೆ ಚಾಲನೆ

ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷತ್ತಿನ 47ನೇ ರಾಜ್ಯ ಸಮ್ಮೇಳನಕ್ಕೆ ಎನ್‌ಟಿಯು ಜಿಲ್ಲಾ ಕಾರ್ಯಾಲಯದಲ್ಲಿ  ಇಂದು ಸಂಜೆ ೫ ಗಂಟೆಗೆ ಸಂಘಟನೆಯ ಸಂಪೂರ್ಣ ರಾಜ್ಯ ಸಮಿತಿಯ ಸಭೆಯೊಂದಿಗೆ ಚಾಲನೆ ದೊರಕಲಿದೆ. ಈ ಸಭೆಯನ್ನು ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಸಹ ಕಾರ್ಯವಾಹಕ್ ಲೋಕೇಶ್ ಜೋಡುಕಲ್ಲು ಉದ್ಘಾಟಿಸುವರು. ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ಸ್ಮಿತ ಅಧ್ಯಕ್ಷತೆ ವಹಿಸುವರು. ನಾಳೆ ಬೆಳಿಗ್ಗೆ 9.30ಕ್ಕೆ  ಕಾಸರಗೋಡು ಟೌನ್ ಹಾಲ್ (ಜಯಕೃಷ್ಣನ್ ಮಾಸ್ತರ್ ನಗರ)ದಲ್ಲಿ ರಾಜ್ಯಾಧ್ಯಕ್ಷೆ ಕೆ. ಸ್ಮಿತ  ಧ್ವಜಾರೋಹಣ ಗೈಯ್ಯುವರು. ನಂತರ ನಡೆಯುವ ಪ್ರತಿನಿಧಿ ಸಭೆಯನ್ನು …