ನಾಯ್ಕಾಪಿನ ನ್ಯಾಯವಾದಿ ಮನೆಯಿಂದ ಕಳವುಗೈದ ಆರೋಪಿ ಬಂಧನ: ಸೆರೆಗೀಡಾದುದು ಅಡ್ಯನಡ್ಕ ಬ್ಯಾಂಕ್‌ನಿಂದ ಕಳವುಗೈದ ಪ್ರಕರಣದ ಆರೋಪಿ

ಕುಂಬಳೆ: ನಾಯ್ಕಾಪು ನಿವಾಸಿಯೂ ಕಾಸರಗೋಡು ಬಾರ್‌ನ ನ್ಯಾಯವಾದಿಯಾದ ಚೈತ್ರಾ ಎಂಬವರ ಮನೆಯಿಂದ 29 ಪವನ್ ಚಿನ್ನ, 25 ಸಾವಿರ ರೂ.ಗಳ ಬೆಳ್ಳಿ ಆಭರಣಗಳು, ೫ ಸಾವಿರ ರೂಪಾಯಿಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ  ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿಯೂ, ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆಯ ವಿವಿಧ ಸ್ಥಳಗಳ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂ ಎಂಬಾ ತನನ್ನು ಕರ್ನಾಟಕದಿಂದ ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್‌ಐ ಕೆ.ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ …

ಪೊಲೀಸರ ಮೇಲೆ ಹಲ್ಲೆ:ಇಬ್ಬರ ಬಂಧನ

ಕಾಸರಗೋಡು: ಕಾಸರಗೋಡು ಕೆಎಸ್‌ಆರ್‌ಟಿಸಿ ಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾ ಚರಿಸುವ ಮಲೆನಾಡ್ ಕಫೆ ಹೋಟೆಲ್‌ನಲ್ಲಿ  ಘರ್ಷಣೆ ನಡೆಯುತ್ತಿದೆಯೆಂಬ ಮಾಹಿತಿ ಯಂತೆ ಅಲ್ಲಿಗೆ ತಲುಪಿದ ಪೊಲೀಸರ ಮೇಲೆ ಹಲ್ಲೆಗೈದುದಾಗಿ ದೂರ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಅಶೋಕನಗರ ಮುನ್ಸಿಪಲ್ ಕ್ವಾರ್ಟರ್ಸ್‌ನ ಸುಧೀಶ್ (42), ಕಾಞಂಗಾಡ್ ಕುಶಾಲನಗರದ ದೇವಿಪ್ರಸಾದ್ (37) ಎಂಬಿವರನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊನ್ನೆ ಸಂಜೆ 6 ಗಂಟೆ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಸ್ ನಿಲ್ದಾಣದ ಹೋಟೆಲ್‌ನಲ್ಲಿ …

ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರದಲ್ಲಿ: ಹಲವು ಅಭಿವೃದ್ಧಿ ಯೋಜನೆಗಳ ಘೋಷಣೆ; ಶಿಲಾನ್ಯಾಸ, ಅಮೃತ್ ಭಾರತ್ ರೈಲು ಸೇವೆಗೆ ಹಸಿರು ನಿಶಾನೆ

ತಿರುವನಂತಪುರ: ಪ್ರಧಾನ ಮಂತ್ರಿ ನರೇಂದ್ರಮೋದಿ ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ತಿರುವನಂತಪುರಕ್ಕೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಕೇರಳ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ನೇತಾರರೂ ಸೇರಿದಂತೆ ಹಲವು ಗಣ್ಯರು  ಭಾವ್ಯ ಸ್ವಾಗತ ನೀಡಿದರು. ನಂತರ ಪ್ರಧಾನಮಂತ್ರಿ ಅಲ್ಲಿಂದ ಪ್ರಧಾನ ಕಾರ್ಯಕ್ರಮ ನಡೆಯುವ ತಿರುವನಂತಪುರ ಪುತ್ತರಿಕಂಡ ಮೈದಾನ ತನಕ ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯುದ್ದಕ್ಕೂ ಸಹಸ್ರಾರು ಮಂದಿ ಜಮಾಯಿಸಿ    ಪ್ರಧಾನಿಯವರಿಗೆ  ಹೂಮಳೆಗರೆದು ಮುಗಿಲುಮುಟ್ಟುವ ಜೈಕಾರಗಳನ್ನು ಮೊಳಗಿಸಿದರು. ನಂತರ ಪುತ್ತರಿಕಂಡ …

ಕಾಞಂಗಾಡ್ ಜಿಲ್ಲಾಸ್ಪತ್ರೆಯ ವ್ಹೀಲ್ ಚೆಯರ್‌ನಲ್ಲಿ ಹೆಬ್ಬಾವು

ಹೊಸದುರ್ಗ: ಇಲ್ಲಿನ ಜಿಲ್ಲಾಸ್ಪತ್ರೆಯ ವ್ಹೀಲ್‌ಚೆಯರ್‌ನಲ್ಲಿ ಹೆಬ್ಬಾವು ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಆರ್ದ್ರಂ ಮಿಷನ್ ಅಧೀನದಲ್ಲಿ ನಿರ್ಮಿಸಿದ ಕಟ್ಟಡದ ಒಳಗಿದ್ದ ವ್ಹೀಲ್ ಚೆಯರ್‌ನಲ್ಲಿ ಸುತ್ತಿಕೊಂಡಿರುವ ರೀತಿಯಲ್ಲಿ ಹೆಬ್ಬಾವು ಪತ್ತೆಯಾಗಿದೆ. ಕರ್ತವ್ಯದಲ್ಲಿದ್ದ ನರ್ಸ್ ಇದನ್ನು ಪ್ರಥಮವಾಗಿ ಕಂಡಿದ್ದಾರೆ. ಮಾಹಿತಿ ತಿಳಿದು ಆಸ್ಪತ್ರೆಯ ಶುಚೀಕರಣ ವಿಭಾಗ ನೌಕರ ಚೆಮ್ಮಟ್ಟಂವಯಲ್‌ನ ಎಚ್. ಅರುಣ್ ಕುಮಾರ್ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಕಟ್ಟಡದ ಸಮೀಪದ ಕಾಡಿನಿಂದ ಹೆಬ್ಬಾವು ಒಳಗೆ ಪ್ರವೇಶಿಸಿರಬೇಕೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಫೇಸ್‌ಕ್ರೀಂ ಬದಲಿಸಿಟ್ಟ ತಾಯಿಯ ಪಕ್ಕೆಲುಬು ಮುರಿದ ಪುತ್ರಿ

ಕೊಚ್ಚಿ: ಫೇಸ್‌ಕ್ರೀಂ ಬದಲಿಸಿಟ್ಟ ತಾಯಿಗೆ ಪುತ್ರಿ ಕಬ್ಬಿಣದ ಸಲಾಖೆಯಿಂದ ಹೊಡೆದು ಪಕ್ಕೆಲುಬು ಮುರಿದ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ರಮಿಯಾದ ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ಪನಂಗಾಡ್ ನಿವಾಸಿಯಾದ ನಿವಿಯ ಸೆರೆಯಾದ ಯುವತಿ. ಕಳೆದ ಸೋಮವಾರ ಘಟನೆ ನಡೆದಿದೆ. ನಿವಿಯಳ ಫೇಸ್‌ಕ್ರೀಂ ತಾಯಿ ಬದಲಿಸಿಟ್ಟಿರುವುದೇ ಆಕ್ರಮಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಈ ಬಗ್ಗೆ ತಾಯಿ ಹಾಗೂ ಪುತ್ರಿ ಮಧ್ಯೆ ವಾಗ್ವಾದವುಂಟಾಗಿ ಬಳಿಕ ಜಗಳದಲ್ಲಿ ಕೊನೆಗೊಂಡಿದೆ. ನಿವಿಯ ಈ ಮೊದಲು ಕೂಡಾ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ …

ಸರಿಯಾದ ದಾಖಲು ಪತ್ರಗಳಿಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ

ಮಂಜೇಶ್ವರ: ಮಂಜೇಶ್ವರ ಅಬಕಾರಿ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಕೆಎಸ್ ಆರ್‌ಟಿಸಿ ಬಸ್‌ನಲ್ಲಿ ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ 30 ಲಕ್ಷ ರೂ. ನಗದನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಮಲಪ್ಪುರಂ ಪೆರಿಂದಲ್‌ಮಣ್ ವಡಕಾಂಕರ ಎರಂಬತ್ ವೀಟಿಲ್ ಹಂಸ (64) ಎಂಬಾತನ ಕೈಯಿಂದ  ಈ ಹಣ ಪತ್ತೆಹಚ್ಚಿ ವಶಪಡಿಸಲಾಗಿದೆ. ಅದಕ್ಕೆ ಸಂಬಂಧಿಸಿ ಆತನನ್ನು ಕಸ್ಟಡಿಗೆ ತೆಗೆದುಕೊಂಡು ಬಳಿಕ ಅಬಕಾರಿ ಅಧಿಕಾರಿಗಳು ಆತನನ್ನು ವಶಪಡಿಸಲಾದ ಹಣದೊಂದಿಗೆ ಮಂಜೇಶ್ವರ ಪೊಲೀಸರಿಗೆ  ಹಸ್ತಾಂತರಿಸಿದರು. ಅಬಕಾರಿ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ …

ಎನ್‌ಟಿಯು ರಾಜ್ಯ ಸಮ್ಮೇಳನಕ್ಕೆ ಚಾಲನೆ

ಕಾಸರಗೋಡು: ರಾಷ್ಟ್ರೀಯ ಅಧ್ಯಾಪಕ ಪರಿಷತ್ 47ನೇ ರಾಜ್ಯ ಸಮ್ಮೇಳನದಂಗವಾಗಿ ಎನ್‌ಟಿಯು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಂಪೂರ್ಣ ರಾಜ್ಯ ಸಮಿತಿ ಸಭೆಯನ್ನು ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯವಾಹ್ ಲೋಕೇಶ್ ಜೋಡುಕಲ್ಲು ಉದ್ಘಾಟಿಸಿದರು. ಎನ್‌ಟಿಯು ರಾಜ್ಯಾಧ್ಯಕ್ಷೆ ಕೆ. ಸ್ಮಿತ ಅಧ್ಯಕ್ಷತೆ ವಹಿಸಿದರು. ಆರ್‌ಎಸ್‌ಎಸ್ ದಕ್ಷಿಣ ಕೇರಳ ಬೌದ್ದಿಕ್ ಪ್ರಮುಖ್ ಪಿ. ಉಣ್ಣಿಕೃಷ್ಣನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್, ಎಬಿಆರ್‌ಎಸ್‌ಎಂ ದಕ್ಷಿಣ ಕ್ಷೇತ್ರೀಯ ಪ್ರಮುಖ್ ಎಸ್. ಗೋಪ ಕುಮಾರ್ ಮಾತನಾಡಿದರು.

ದಿನನಿತ್ಯ ಹಲವಾರು ಲಾರಿಗಳಲ್ಲಿ ಕೆಂಪುಕಲ್ಲು ಸಾಗಾಟ: ರಸ್ತೆಯ ಸ್ಥಿತಿ ಶೋಚನೀಯವಾಗಿ ಸಂಚಾರ ಸಮಸ್ಯೆ

ಪೈವಳಿಕೆ: ಪಂಚಾಯತ್‌ನ ೧ನೇ ವಾರ್ಡ್ ವ್ಯಾಪ್ತಿಯ ಕುರುಡಪದವು-ಕೊಮ್ಮಂಗಳ ರಸ್ತೆಯಲ್ಲಿ ಸಂಚಾರವೇ ಅಸಾಧ್ಯ ವಾದ ಸ್ಥಿತಿಗೆ ತಲುಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯಗೆ ಕಳೆದ ಮಾರ್ಚ್‌ನಲ್ಲಿ ಡಾಮರೀಕರಣ ನಡೆಸಲಾಗಿತ್ತು. ಆದರೆ ಈ ರಸ್ತೆ ಮೂಲಕ ದಿನಂಪ್ರತಿ ಕೆಂಪುಕಲ್ಲು ಸಾಗಾಟದ ಲಾರಿಗಳು ಅವ್ಯಾಹತ ವಾಗಿ ಸಂಚರಿಸಿರುವುದು ರಸ್ತೆಯ ದುರಸ್ತಿಗೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ರಸ್ತೆಯ ದುರಸ್ತಿಗೆ ಈಗ ಮತ್ತೆ ಹಣ ಮಂಜೂರಾಗಿದ್ದು, ಆದರೆ ಈ ಮೂಲಕ ಸಾಗುವ ಲಾರಿಗಳಿಗೆ  ನಿಯಂತ್ರಣ ಹೇರದಿದ್ದಲ್ಲಿ ದುರಸ್ತಿ ಬಳಿಕವೂ ರಸ್ತೆ ಇದೇ ಸ್ಥಿತಿಗೆ ತಲುಪಬಹುದೆಂದು …

ಎಸ್.ಎನ್. ಭಟ್‌ರಿಗೆ ಶ್ರೀ ಸಂತಡ್ಕ ಮಾಡ ಪ್ರಶಸ್ತಿ ಪ್ರದಾನ

ಉಪ್ಪಳ: ಸಂತಡ್ಕ ಶ್ರೀ ಅರಸು ಸಂಕಲ ಮಾಡದ ಜಾತ್ರಾ ಮಹೋತ್ಸವದ ಸಂದರ್ಭ ಅರಸು ಸಂಕಲ ಸೇವಾ ಬಳಗದ ವತಿಯಿಂದ ವೈದ್ಯ ಎಸ್.ಎನ್. ಭಟ್ ಮೀಯಪದವುರಿಗೆ ಶ್ರೀ ಸಂತಡ್ಕ ಮಾಡ ಪ್ರಶಸ್ತಿ ಪ್ರಧಾನ ಕ್ಷೇತ್ರ ಅಧ್ಯಕ್ಷ ಶ್ರೀಧರ ಭಟ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಮೂರ್ತಿ ಬೋಳಂತಕೋಡಿ ರಾಮ್ ಭಟ್ ಉಪಸ್ಥಿತರಿದ್ದರು. ಚಿಗುರುಪಾದೆಯ  ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಮೀಂಜ ಪಂಚಾಯತ್ ಉಪಾಧ್ಯಕ್ಷೆ ಉಷಾ ಪೂಂಜ ಮಾನೂರು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ …

ಜಾಗತಿಕ ಸೇವಾರಂಗದಲ್ಲಿ ಲಯನ್ಸ್ ಕಾರ್ಯಕರ್ತರು 15 ಲಕ್ಷಕ್ಕೇರುವ ನಿರೀಕ್ಷೆ

ಕಾಸರಗೋಡು: ಲಯನ್ಸ್ ಡಿಸ್ಟ್ರಿಕ್ಟ್ 318 ಇ ಇದರ ಆಶ್ರಯದಲ್ಲಿ ರಿವ್ಯೂ ಆಂಡ್ ರೈಸ್ ಎಂಬ ಕಾರ್ಯಕ್ರಮ ಕಣ್ಣೂರು ಹೋಟೆಲ್ ಗ್ರಾಂಡ್ ಬಿನಾಲೆಯಲ್ಲಿ ಜರಗಿತು. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್, ಮಾಹಿ ಎಂಬೀ ಜಿಲ್ಲೆಗಳಿಂದಿರುವ 170 ಕ್ಲಬ್‌ಗಳ ಪದಾಧಿಕಾರಿಗಳು ಭಾಗವಹಿ ಸಿದರು. ಕೇರಳ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಕಾರ್ಯದರ್ಶಿ ಜೇಮ್ಸ್ ವಳಪ್ಪಿಲ್ ಪ್ರಧಾನ ಭಾಷಣ ಮಾಡಿ 2027ರಲ್ಲಿ ಮಿಷನ್ 1.5 ಮಿಲಿಯನ್ ಮೂಲಕ ಲಯನ್ಸ್ ಇಂಟರ್ ನ್ಯಾಶನಲ್‌ನ ಸೇವಾ ಕರಗಳನ್ನು 15 ಲಕ್ಷಕ್ಕೆ ತಲುಪಿಸಲಾಗುವುದೆಂದು ತಿಳಿಸಿದರು. ಲಯನ್ಸ್ ಡಿಸ್ಟ್ರಿಕ್ಟ್ …