ಮಾದಕಪದಾರ್ಥ ಸಾಗಾಟ: ಸೆರೆಯಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ಸಹಿತ ಇಬ್ಬರು ಉದುಮದ ವಸತಿಗೃಹದಲ್ಲಿ ಸೆರೆ

ಕಾಸರಗೋಡು: ಉದುಮ ಪಳ್ಳಂನ ವಸತಿಗೃಹದಲ್ಲಿ ಬೇಕಲ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರು ಸೆರೆಗೀಡಾಗಿದ್ದಾರೆ. ಪಳ್ಳಿಕ್ಕೆರೆ, ಪಳ್ಳಿಪುಳ ಸ್ನೇಹಾಲಯದ ಗೋಕುಲ್‌ರಾಜ್ (25), ಉದುಮ ಪಳ್ಳಂನ ಚಾಮತ್ತೋಟ್ಟಂ ಹೌಸ್ ನಿವಾಸಿ ಅನೀಶ್ ನಾರಾಯಣ (31) ಎಂಬಿವರನ್ನು ಬೇಕಲ ಎಸ್‌ಐ ಪಿ. ಅಖಿಲ್ ಹಾಗೂ ತಂಡ ಸೆರೆಹಿಡಿದಿದೆ.  ಸೋಮವಾರ ಸಂಜೆ ಎಸ್‌ಐಯವರ ನೇತೃತ್ವದಲ್ಲಿ ಪಳ್ಳಂನ ಕೋಡಂಗೈ ವಸತಿಗೃಹದಲ್ಲಿನ 101ನೇ ನಂಬ್ರ ಕೊಠಡಿಗೆ ದಾಳಿ ನಡೆಸಲಾಗಿತ್ತು. ಇಲ್ಲಿಂದ 3.87 ಗ್ರಾಂ ಎಂಡಿಎಂಎ  ಹಾಗೂ ಮಾದಕಪದಾರ್ಥ ಉಪ ಯೋಗಿಸುವುದಕ್ಕಿರುವ ಸಾಮಗ್ರಿಗಳನ್ನು ಪೊಲೀಸರು ವಶಪಡಿ ಸಿದ್ದರು. …

ನೇಣು ಬಿಗಿದು ಚಿಕಿತ್ಸೆಯಲ್ಲಿದ್ದ ಉದ್ಯೋಗ ಖಾತರಿ ಯೋಜನೆ ಕಾರ್ಮಿಕ ಮೃತ್ಯು

ಪೈವಳಿಕೆ: ಮನೆ ಬಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ಗಂಭೀರಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ  ಮೃತಪಟ್ಟ ಘಟನೆ ನಡೆದಿದೆ. ಮೂಲತಃ ಕೊಚ್ಚಿ ಆಲುವಾ ನಿವಾಸಿ, ಕಳೆದ 20 ವರ್ಷಗಳಿಂದ  ಪೈವಳಿಕೆಯ ಮರಿಕೆಯಲ್ಲಿ ವಾಸವಾಗಿರುವ  ಬಾಬು ಕೆ.ಯು (46) ಮೃತಪಟ್ಟಿದ್ದಾರೆ. ಇವರು ಈ ಹಿಂದೆ ಟೈಲ್ಸ್  ಹಾಸುವ ಕೆಲಸವನ್ನು ನಿರ್ವಹಿಸುತ್ತಿದ್ದು, ಬಳಿಕ ಪೈವಳಿಕೆ ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಾಗಿದ್ದರು. ಈ ತಿಂಗಳ ೧೯ರಂದು ಸಂಜೆ ಪತ್ನಿ ಸುಂದರಿ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಾಗ ಮನೆಯಲ್ಲಿ ಬಾಬು …

ಡಾ| ಎ.ವಿ. ಸುರೇಶ್ ನಿಧನ

ಕಾಸರಗೋಡು: ಕಾಸರಗೋಡು ಗುಡ್ಡೆ ದೇವಸ್ಥಾನ ಬಳಿಯ ಡಾ| ಎ.ವಿ. ಸುರೇಶ್ (62) ನಿಧನ ಹೊಂದಿದರು. ವೈಕ್ಕಂ ಟಿ.ವಿ. ಪುರಂ ನಿವಾಸಿಯಾದ ಇವರು ನಿವೃತ್ತ ಡಿಎಂಒ (ಆಯುರ್ವೇದ) ಆಗಿದ್ದರು. ಮೃತರು ಪತ್ನಿ ನಿಶಾ (ಯೂನಿಟಿ ಹೆಡ್, ಕೆಲ್, ಕಾಸರಗೋಡು), ಮಕ್ಕಳಾದ ಡಾ| ಹರ್ಷ (ಅಸೋಸಿ ಯೇಟ್ ಪ್ರೊಫೆಸರ್, ಶಾರದಾಂಬಾ ಮೆಡಿಕಲ್ ಕಾಲೇಜು ತಲಪಾಡಿ), ಋಷಿಕೇಶ್ (ಐಟಿ ಹೈದರಾಬಾದ್), ಅಳಿಯ ಶಬರಿನಾಥ್ (ಇಂಜಿನಿ ಯರ್ ಬೆಂಗಳೂರು), ಸಹೋದರ- ಸಹೋದರಿಯರಾದ ಸುಭಾಷ್, ಡಾ| ಸುನಿಲ್, ಪೊನ್ನಮ್ಮ, ವತ್ಸಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು …

ಗುಂಡು ತಗಲಿ ಬಾಲಕ ಮೃತಪಟ್ಟ ಘಟನೆ: ಸೇರಾಜೆ, ಪರಿಸರ ಪ್ರದೇಶದಲ್ಲಿ ಶೋಕಸಾಗರ

ಪೆರ್ಲ: ದೇಹಕ್ಕೆ ಗುಂಡು ತಗಲಿ ಸೇರಾಜೆ ನಿವಾಸಿಯಾದ ಬಾಲಕ ಸಾವಿಗೀಡಾದ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಸೇರಾಜೆ ನಿವಾಸಿ ವಸಂತಪೂಜಾರಿಯ ಪುತ್ರ ಮೋಕ್ಷಿತ್ (17) ಕಳೆದ ಶನಿವಾರ ಸಂಜೆ ಉಪ್ಪಿನಂಗಡಿ ಬಳಿಯ ರಾಮಕುಂಜದಲ್ಲಿರುವ ಮನೆಯಲ್ಲಿ ಗುಂಡು ತಗಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಇದೇ ವೇಳೆ ತಂದೆ ವಸಂತ ಪೂಜಾರಿ ಇರಿತದಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ವಸಂತ ಪೂಜಾರಿಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಿದ್ದು, ಅವರಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ತಂದೆ ವಸಂತರಿಗೆ ಇರಿದು ಗಾಯಗೊಳಿಸಿದ ಬಳಿಕ …

ಪೆರ್ಮುದೆ ನಿವಾಸಿ ಗಲ್ಫ್‌ನಲ್ಲಿ ಕುಸಿದು ಬಿದ್ದು ಮೃತ್ಯು

ಕುಂಬಳೆ: ಮೂರು ವಾರಗಳ ಹಿಂದೆ ಗಲ್ಫ್‌ಗೆ ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟರು. ಬಂದ್ಯೋಡು ಪೆರ್ಮುದೆ ಪೆಟ್ರೋಲ್ ಬಂಕ್ ಸಮೀಪದ ಅಂದುಂಞಿ ಯವರ ಪುತ್ರ ಆದಂ ಕುಂಞಿ (49) ಮೃತ ವ್ಯಕ್ತಿ. ಇವರು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ವೇಳೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇವರ ತಾಯಿ ಬೀಫಾತಿಮ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಪತ್ನಿ ರಮ್ಲ, ಮಕ್ಕ ಳಾದ ತಸ್ನಿಂ, ಫಾತಿಮತ್ ರಿಫ, ಸಮೀಮ, ಸಹೋದರ- ಸಹೋ ದರಿಯರಾದ ಅಹಮ್ಮದಲಿ, …

ಉಪ್ಪಳ, ಕನ್ಯಪ್ಪಾಡಿಯಲ್ಲಿ ಮನೆಗಳಿಗೆ ಕಳ್ಳರ ದಾಳಿ: ಚಿನ್ನಾಭರಣ, ನಗದು ಕಳವು

ಉಪ್ಪಳ:  ಕುಂಬಳೆಯಲ್ಲಿ ಮನೆ ಯಿಂದ ನಗ-ನಗದು ಕಳವಿಗೀಡಾದ ಪ್ರಕರಣದಲ್ಲಿ ತನಿಖೆ ಮುಂದು ವರಿಯುತ್ತಿರುವಂತೆಯೇ ಉಪ್ಪಳ ಹಾಗೂ ಬದಿಯಡ್ಕದಲ್ಲಿ ಮನೆಗಳಿಂದ ಕಳವು ನಡೆದಿದೆ. ಉಪ್ಪಳ ಬಪ್ಪಾಯಿತೊಟ್ಟಿಯ ಅಹಮ್ಮದ್ ಮಂಜಿಲ್‌ನ ರುಕ್ಸಾನ ಎಂಬವರ ಮನೆಯಿಂದ 23.5 ಪವನ್ ಚಿನ್ನಾಭರಣಗಳು ಕಳವಿಗೀಡಾಗಿದೆ. ಈ ಬಗ್ಗೆ ರುಕ್ಸಾನ  ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿ ದ್ದಾರೆ.  ಮನೆಯ ಕಪಾಟಿನಲ್ಲಿರಿಸಿದ್ದ  ಚಿನ್ನಾಭರಣಗಳು ಕಳವಿಗೀಡಾಗಿದೆ. ದೂರುದಾತೆಯ ಮಗಳ ಮದುವೆ ಜನವರಿ 23ರಂದು ನಡೆದಿತ್ತು. ಇದರ ಪೂರ್ವಭಾವಿಯಾಗಿ ಮನೆಯಲ್ಲಿ ವಿವಿಧ ರೀತಿಯ ಕೆಲಸಗಳನ್ನು …

ಬೀದಿನಾಯಿ, ವನ್ಯಜೀವಿಗಳ ಉಪಟಳದ ಬೆನ್ನಲ್ಲೇ ಹಾವುಗಳ ಕಾಟ: 5 ಹೆಬ್ಬಾವುಗಳು ಸೆರೆ

ಮೊಗ್ರಾಲ್ : ಬೀದಿನಾಯಿಗಳ ಹಾಗೂ ವನ್ಯಜೀವಿಗಳ ಉಪಟಳ ಎದುರಿಸು ತ್ತಿರುವ ಮೊಗ್ರಾಲ್ ಮತ್ತು ಪೇರಾಲ್ ಪ್ರದೇಶಗಳಲ್ಲಿ ಈಗ ಹೆಬ್ಬಾವುಗಳ ಕಾಟವೂ ತಲೆಯೆತ್ತತೊಡಗಿದೆ. ಇದು ಪ್ರದೇಶದವರನ್ನು ಇನ್ನಷ್ಟು ಭಯಭೀತರನ್ನಾಗಿ ಸತೊಡಗಿದೆ. ಪೇರಾಲ್ ನಿವಾಸಿ ಮೊಹಮ್ಮದ್  ಪೇರಾಲ್ ಎಂಬವರ ಹಿತ್ತಿಲಲ್ಲಿ ಕಾಡು ಬಳ್ಳಿಗಳಿಂದ ಆವೃತ್ತಗೊಂಡಿದ್ದ ಪೊದೆಯಲ್ಲಿ ಐದು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಅರಣ್ಯ ಇಲಾಖೆಯಿಂದ ಹಾವು ಹಿಡಿಯುವ ಬಗ್ಗೆ ನುರಿತ ತರಬೇತಿ ಪಡೆದ ಸರ್ಪ ವಲಂಟಿಯರ್ ಕಾಸರಗೋಡು ಅಡ್ಕತ್ತಬೈಲು ನಿವಾಸಿ ಅಮೀನ್ ಅಡ್ಕತ್ತಬೈಲು ಸ್ಥಳಕ್ಕೆ …

ಭಾರತೀಯ ಸಂವಿಧಾನ ಸಮಾನ ನೀತಿ ಹಾಗೂ ಸಂತ್ರಸ್ತ ಜನತೆಯ ಪ್ರಣಾಳಿಕೆ -ಸಚಿವ ಎ.ಕೆ. ಶಶೀಂದ್ರನ್

ಕಾಸರಗೋಡು: ಭಾರತದ ಸಂವಿಧಾನವು ಸಂತ್ರಸ್ತ ಜನತೆಯ ಹಾಗೂ ಸಮಾನ ನೀತಿಯ ಒಂದು ಪ್ರಣಾಳಿಕೆ ಯಾಗಿದೆ ಎಂದು ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ಹೇಳಿದ್ದಾರೆ. ವಿದ್ಯಾನಗರದ ಸ್ಟೇಡಿಯಂನಲ್ಲಿ ಭಾರತದ ೭೭ನೇ ಗಣರಾಜ್ಯೋತ್ಸವದಂಗವಾಗಿ ನಿನ್ನೆ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದುವಂದನೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು. ಫೆಡರಲಿಸಂ ಎನ್ನುವುದು ನಮ್ಮ ಸಂವಿಧಾನದ ಮೂಲ ಘಟಕವಾಗಿದೆ. ಅಧಿಕಾರ ವಿಭಜನೆ ಹಾಗೂ ಪರಸ್ಪರ ಗೌರವ ಇದರ ಪ್ರಧಾನ ಅಂಶವಾಗಿದೆ. ಭಾರತೀಯ ಫೆಡರಲಿಸಂ ನಮ್ಮ ವೈವಿಧ್ಯತೆಯನ್ನು ಸಂಘಟಿತವಾಗಿ ನಿಲ್ಲಿಸುವ ಒಂದು ರಾಷ್ಟ್ರೀಯ ಸಾಮೂಹಿಕ ಒಡಂಬಡಿಕೆಯೂ …

ವಾಹನಗಳಿಂದ ಟೋಲ್ ಸಂಗ್ರಹ: ಕುಂಬಳೆ ಟೋಲ್‌ಬೂತ್‌ಗೆ ಮುತ್ತಿಗೆ ಹಾಕಿ ಮಹಿಳೆಯರಿಂದ ಬೃಹತ್ ಪ್ರತಿಭಟನೆ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿ ತೀವ್ರಗೊಂಡಿದೆ. ಇದರ ಅಂಗವಾಗಿ ನಿನ್ನೆ ಮಹಿಳೆಯರು ನಡೆಸಿದ ಟೋಲ್ ಬೂತ್ ಮಾರ್ಚ್‌ನಿಂದ ಅಲ್ಪ ಹೊತ್ತು ಸಂಘರ್ಷಾವಸ್ಥೆ ಸೃಷ್ಟಿಸಿತು. ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ಟೋಲ್ ಬೂತ್‌ಗೆ ನುಗ್ಗಲು ಯತ್ನಿಸಿದರು. ಬಳಿಕ ಶಾಸಕರ ನೇತೃತ್ವದಲ್ಲಿ ಮುಷ್ಕರ ಸಮಿತಿ ಪದಾಧಿಕಾರಿಗಳು ಮಾತುಕತೆ ನಡೆಸಿದುದರಿಂದ ಚಳವಳಿನಿರತರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ಇದರಿಂದ ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅನಂತರ …

ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೊಳೆಯಲ್ಲಿ ಪತ್ತೆ

ಕಾಸರಗೋಡು: ಚಟ್ಟಂಚಾಲ್ ಸಮೀಪದ ಬೆಂಡಿಚ್ಚಾಲ್‌ನಿಂದ ನಾಪತ್ತೆಯಾದ ಯುವಕನ ಮೃತದೇಹ ಚಂದ್ರಗಿರಿ ಹೊಳೆಯಲ್ಲಿ ತಳಂಗರೆ ಸೇತುವೆ ಸಮೀಪ ಪತ್ತೆಯಾಗಿದೆ. ಎಯ್ಯಳದ ದಿ| ಅಬ್ದುಲ್ಲ ಕುಂಞಿಯವರ ಪುತ್ರ  ನಿಸಾರ್ (47) ಮೃತಪಟ್ಟ ವ್ಯಕ್ತಿ. ಕಳೆದ ಶನಿವಾರ ಮಧ್ಯಾಹ್ನ ಆಹಾರ ಸೇವಿಸಿ ಮನೆಯಿಂದ ಹೊರಗೆ ಹೋದ ನಿಸಾರ್ ಮರಳಿ ಬಂದಿರಲಿಲ್ಲ. ಈ ಬಗ್ಗೆ ಸಹೋದರಿಯ ಪತಿ ಅಬ್ದುಲ್ ಖಾದರ್ ಎಂಬವರು ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಂತೆ ಆದಿತ್ಯವಾರ ರಾತ್ರಿ ೧೦ ಗಂಟೆ ವೇಳೆ ಮೃತದೇಹ …