ಕರ್ತವ್ಯ ಮಧ್ಯೆ ಕಾರಿನಲ್ಲಿ ಕುಳಿತು ಪೊಲೀಸರ ಬಹಿರಂಗ ಮದ್ಯಪಾನ: ಆರು ಮಂದಿ ಅಮಾನತು

ತಿರುವನಂತಪುರ: ಕೆಲಸ ಸಮಯದಲ್ಲಿ ಕಾರಿನಲ್ಲಿ ಕುಳಿತುಕೊಂಡು ಬಹಿರಂಗವಾಗಿ ಮದ್ಯಪಾನ ನಡೆಸುವ ಪೊಲೀಸರ ದೃಶ್ಯ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ತಪ್ಪಿತಸ್ಥರಾದ 6 ಮಂದಿ ಪೊಲೀಸರನ್ನು ಅಮಾನತ ಗೊಳಿಸಲಾಗಿದೆ. ತಿರುವನಂತಪುರ ಕಳಕೂಟಂ ಪೊಲೀಸ್  ಠಾಣೆಯ 6 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಇವರನ್ನು ಉತ್ತಮ ನಡತೆ ತರಬೇತಿಗಾಗಿ ಕಳುಹಿಸಲಾಗುವುದು. ಇತ್ತೀಚೆಗೆ ಕಾರಿನೊಳಗೆ ಕುಳಿತುಕೊಂಡು ಈ ಪೊಲೀಸರು ಮದ್ಯಪಾನಗೈಯ್ಯುತ್ತರುವ ದೃಶ್ಯ ಬಹಿರಂಗಗೊಂಡಿತ್ತು. ಇದರ ವಿರುದ್ಧ ವ್ಯಾಪಕ ಟೀಕೆಗಳುಂಟಾಗಿತ್ತು. ಅದರ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿತ್ತು. ಪೊಲೀಸರ ಕ್ರಮ ಗಂಭೀರ ಲೋಪವೆಂದು …

ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತೀಯಾ ಸಮಾಜ ಬೇಡಿಕೆ: ಹಕ್ಕುಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಆರಂಭ

ಕುಂಬಳೆ: ಮಲಬಾರಿನ ಮೂರು ವಿಧಾನಸಭಾ ಕ್ಷೇತ್ರಗಳನ್ನು ತೀಯಾ ಸಮುದಾಯಕ್ಕೆ ಮೀಸಲಿರಿಸಬೇಕು,  ಈಳವರಿಂದ ಪ್ರತ್ಯೇಕಿಸಿ ತೀಯಾ ಸಮಾಜವನ್ನು ಪ್ರತ್ಯೇಕ ಜಾತಿಯಾಗಿ ನೋಂದಾಯಿಸಬೇಕು ಮೊದಲಾದ ಬೇಡಿಕೆ ಮುಂದಿರಿಸಿ ತೀಯಾ ಕ್ಷೇಮ ಸಭಾ ಆಂದೋಲನ ಆರಂಭಿಸಿದೆ.  ಹೋರಾಟದಂಗವಾಗಿ ಹಕ್ಕು ಘೋಷಣಾ ಉತ್ತರ ವಲಯ ವಾಹನ ಪ್ರಚಾರ ಯಾತ್ರೆ ಕುಂಬಳೆಯಿಂದ ಮೊನ್ನೆ ಆರಂಭಗೊಂಡಿತು. ಸದ್ಗುರು ನಿತ್ಯಾನಂದ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಆರಂಭಗೊಂಡ ಪ್ರಚಾರ ಯಾತ್ರೆಯನ್ನು ತೀಯಾ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಪಾವೂರು ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ತೀಯಾ ಕ್ಷೇಮ ಸಭಾ ರಾಜ್ಯಾಧ್ಯಕ್ಷ …

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಈಸ್ಟ್ ಘಟಕ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಮಧೂರು: ಗಣರಾಜ್ಯೋತ್ಸ ದಂಗವಾಗಿ ಉಳಿಯ ಪರಕ್ಕಿಲ ಅಂಗನವಾಡಿ ಮಕ್ಕಳಿಗೆ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಶನ್ ಈಸ್ಟ್ ಘಟಕದ ನೇತೃತ್ವದಲ್ಲಿ ಕುರ್ಚಿ ವಿತರಿಸಲಾಯಿತು. ವಾರ್ಡ್ ಪ್ರತಿನಿಧಿ ಶಮೀಮ ಶರೀಫ್ ಧ್ವಜಾರೋಹಣಗೈದರು. ಅಂಗನವಾಡಿ ಶಿಕ್ಷಕಿ ವಿಮಲ ಯು ಸ್ವಾಗತಿಸಿದರು. ಈಸ್ಟ್ ಯೂನಿಟ್ ಅಧ್ಯಕ್ಷ ರಾಜಶೇಖರನ್, ಕೋಶಾಧಿಕಾರಿ ಶ್ರೀಕಾಂತ್ ಶುಭ ಕೋರಿದರು. ಮನೀಶ್,ಅಜಿತ್ ಕುಮಾರ್ ಉಪಸ್ಥಿತರಿದ್ದರು. ಸಿಹಿ ತಿಂಡಿ  ಹಂಚಲಾಯಿತು.