ಜಿಲ್ಲೆಯಲ್ಲಿ ಪೊಲೀಸ್, ಅಬಕಾರಿ ತಂಡದಿಂದ ಕಾರ್ಯಾಚರಣೆ: ಭಾರೀ ಪ್ರಮಾಣದ ಮಾದಕದ್ರವ್ಯ, ಗಾಂಜಾ ವಶ; ಮೂವರ ಸೆರೆ
ಕಾಸರಗೋಡು: ಜಿಲ್ಲೆಯಲ್ಲಿ ಪೊಲೀಸರು ಮತ್ತು ಅಬಕಾರಿ ತಂಡ ಪ್ರತ್ಯೇಕವಾಗಿ ನಡೆಸಿದ ಮೂರು ಕಾರ್ಯಾಚರಣೆಗಳಲ್ಲಾಗಿ ಭಾರೀ ಪ್ರಮಾಣದ ಮಾದಕದ್ರವ್ಯ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನಿರ್ದೇಶ ಪ್ರಕಾರ ಜಿಲ್ಲೆಯ ಮಾದಕದ್ರವ್ಯ ಪತ್ತೆ ಸ್ಕ್ವಾಡ್ ಮತ್ತು ಕುಂಬಳೆ ಪೊಲೀಸರು ಮಂಗಲ್ಪಾಡಿ ಸೋಂಕಾಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನವೊಂದರಲ್ಲಿ ಸಾಗಿಸುತ್ತಿದ್ದ 54 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಮಂಗಲ್ಪಾಡಿ ಅಂಬಾರ್‌ಪಳ್ಳಂ ನಿವಾಸಿ ಇದ್ದೀನ್ ಕುಂಞಿ ಯಾನೆ ಇರ್ಷಾದ್ (34) ಎಂಬಾತನನ್ನು ವಾಹನ ಸಹಿತ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. …