ನಿವೃತ್ತ ಪೋಸ್ಟ್ ಮಾಸ್ಟರ್ ನಿಧನ

ಬೆಳ್ಳೂರು: ಕರ್ಕಟಗೋಳಿ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಕೃಷ್ಣ ನಾಯ್ಕ (70) ನಿಧನ ಹೊಂದಿದರು. ಇವರು ಮುಳ್ಳೇರಿಯ, ನೆಟ್ಟಣಿಗೆ, ಕುಂಬಳೆ, ಪೈವಳಿಕೆ, ಉಪ್ಪಳ ಮೊದಲಾದ ಕಡೆಗಳಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಶಾರದ, ಮಕ್ಕಳಾದ ಮಹೇಶ್, ಮನೋಜ್, ಪ್ರದೀಪ್, ಸೊಸೆಯಂದಿರಾದ ಶಾರದ, ಸುಪ್ರೀತ, ಜಯಂತಿ, ಸಹೋದರರಾದ ದಿವಾಕರ, ಅಣ್ಣು ನಾಯ್ಕ್, ಗಂಗಾಧರ, ನಾರಾಯಣ, ಸಹೋದರಿ ಸರಸ್ವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬೇಕಲದಲ್ಲಿ ಗಡಿನಾಡ ಜಾನಪದ ಉತ್ಸವ, ಪುಸ್ತಕ ಬಿಡುಗಡೆ, ವಿಚಾರಸಂಕಿರಣ

ಕಾಸರಗೋಡು: ದೇಶದ ಉದ್ದಗಲ ಸಂಚರಿಸಿದಾಗ ಪ್ರತಿಯೊಂದೆಡೆಯೂ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಜನಜೀವನ ಗಮನ ಸೆಳೆಯುತ್ತದೆ. ಇಂತಹ ವಿವಿಧತೆಯ ಮಧ್ಯೆ ಒಂದನ್ನೊAದು ಕೂಡಿ ಕಲೆತಾಗ ಉತ್ತಮ ಸಮಾಜ ರೂಪುಗೊಳ್ಳುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ …