ಅಂಗನವಾಡಿಯಿಂದ ಕಳವುಗೈದ ಆರೋಪಿ ಮಂಜೇಶ್ವರ ಪೊಲೀಸರಿಂದ ಬಂಧನ: ಇಂದು ನ್ಯಾಯಾಲಯಕ್ಕೆ

ಉಪ್ಪಳ: ಮಣ್ಣಂಗುಳಿ ಮೈದಾನ ಸಮೀಪದ ಅಂಗನವಾಡಿಗೆ ನುಗ್ಗಿ ಹಲವಾರು ಸಾಮಗ್ರಿಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ದೂರು ಲಭಿಸಿದ 24 ಗಂಟೆಗಳೊಳಗೆ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕರ್ನಾಟಕ ನೆಲ್ಯಾಡಿ ಕೊಕ್ಕಡ ನಿವಾಸಿ, ಪ್ರಸ್ತುತ ಮಣ್ಣಂಗುಳಿ ಪರಿಸರದಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಅಶ್ರಫ್ (55)ನನ್ನು ನಿನ್ನೆ ಸಂಜೆ ಉಪ್ಪಳದಿಂದ ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈತನ ವಿರುದ್ಧ ಮಂಜೇಶ್ವರ  ಠಾಣೆಯಲ್ಲಿ ೩ ಹಾಗೂ ಕುಂಬಳೆ ಠಾಣೆಯಲ್ಲಿ ಒಂದು ಕಳವುಕೇಸು ದಾಖಲಾಗಿದೆ. 2025 ಮೇ ತಿಂಗಳಲ್ಲಿ …

ಯುವ ನಟಿ ಅಂಜುಕೃಷ್ಣ  ಸಹಿತ ಎಂಟು ಮಂದಿ ಮಾದಕಪದಾರ್ಥದೊಂದಿಗೆ ಸೆರೆ

ಚೆನ್ನೈ: ಯುವ ನಟಿ ಅಂಜು ಕೃಷ್ಣ ಹಾಗೂ ಸಹಾಯಕ ನಿರ್ದೇಶಕ ವಿನ್ಸಿ ನಿವೇದ್ ಸಹಿತದ 8 ಮಂದಿ ಚೆನ್ನೈಯಲ್ಲಿ ಮಾದಕಪದಾರ್ಥ ದೊಂದಿಗೆ ಸೆರೆಯಾಗಿದ್ದಾರೆ. ಚೆನ್ನೈ ಪೊಲೀಸರ ಆಂಡ್ ನಾರ್ಕೋ ಟಿಕ್ ಇಂಟೆಲಿಜೆನ್ಸ್ ಘಟಕ ನಡೆಸಿದ  ಕಾರ್ಯಾಚರಣೆಂiiಲ್ಲಿ ತಂಡ ಸೆರೆಯಾಗಿದೆ. ಮೆಥಾಫೆಟಾ ಮಿನ್, ಎಲ್‌ಎಸ್‌ಡಿ ಸ್ಟ್ಯಾಂಪ್ ಗಳು, ಗಾಂಜಾ ಮೊದಲಾದ ಮಾದಕಪದಾ ರ್ಥಗಳು ಇವರ ಕೈವಶವಿತ್ತೆಂದು ಆಂಟಿ ನಾರ್ಕೋಟಿಕ್ ಇಂಟೆಲಿಜೆನ್ಸ್ ಘಟಕ ತಿಳಿಸಿದೆ. ನೆಶಪ್ಪಾಕಂ ನಿವಾಸಿ ವಿಘ್ನೇಶ್ವರನ್ ಎಂಬಾತನನ್ನು  ಮಾದಕಪದಾರ್ಥ ದೊಂದಿಗೆ ಪ್ರಥಮವಾಗಿ ಸೆರೆಹಿಡಿಯಲಾಗಿತ್ತು. ಈತನನ್ನು ಪ್ರಶ್ನಿಸಿದಾಗ ನಟಿ …

ನಾಯ್ಕಾಪು ನ್ಯಾಯವಾದಿಯ ಮನೆಯಿಂದ ಕಳವುಗೈದ ಆರೋಪಿ ಪೊಲೀಸ್ ಕಸ್ಟಡಿಗೆ

ಕುಂಬಳೆ: ನಾಯ್ಕಾಪು ನಿವಾಸಿ ನ್ಯಾಯವಾದಿ ಚೈತ್ರಾರ ಮನೆಯಿಂದ 29 ಪವನ್ ಚಿನ್ನ ಹಾಗೂ 25 ಸಾವಿರ ರೂ.  ಮೌಲ್ಯದ ಬೆಳ್ಳಿ ಹಾಗೂ ಐದು ಸಾವಿರ ರೂ. ಕಳವುಗೈದ ಪ್ರಕರಣದ ಆರೋಪಿ ಇಬ್ರಾಹಿಂ ಕಲಂದರ್‌ನನ್ನು ಕುಂಬಳೆ ಎಸ್‌ಐಯ ಕಸ್ಟಡಿಗೆ ಬಿಟ್ಟುಕೊಡಲಾಗಿದೆ. ಕಳವುಗೈದ ಚಿನ್ನ ಪತ್ತೆಹಚ್ಚಲು ಹಾಗೂ ಇದರಲ್ಲಿ ಇತರ ಆರೋಪಿಗಳಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲು ಆರೋಪಿಯನ್ನು ಕಸ್ಟಡಿಗೆ ನೀಡಬೇಕೆಂದು ಆಗ್ರಹಿಸಿ ಎಸ್‌ಐ  ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಇದರಂತೆ ಈತನನ್ನು ನಾಲ್ಕು ದಿನಕ್ಕೆ ಕಸ್ಟಡಿಗೆ ನೀಡಲಾಗಿದೆ. ಜನವರಿ 18ರಂದು …

ಚಿನ್ಮಯ ಅಮೃತ ಮಹೋತ್ಸವ: ವಿವಿಧ ಕಾರ್ಯಕ್ರಮ ನಾಳೆ

ಕಾಸರಗೋಡು:  ಚಿನ್ಮಯ ಮಿಷನ್‌ನ 25ನೇ ವಾರ್ಷಿಕವನ್ನು ಅಮೃತ ಮಹೋತ್ಸವವಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು. ನಾಳೆ ವಿದ್ಯಾನಗರ ಕ್ಯಾಂಪಸ್‌ನಲ್ಲಿ ಸಾಮೂಹಿಕ ಹನುಮಾನ್ ಚಾಲೀಸ ಹವನ, ಭಗವದ್ಗೀತೆ ಸಮೂಹ ಪಾರಾಯಣ, ಚಿನ್ಮಯ ಮಿಷನ್ ನಿರ್ಮಿಸಿ ನೀಡುವ ೯ನೇ ಮನೆಯ ಕೀಲಿ ಕೈ ಹಸ್ತಾಂತರ, ಚಿನ್ಮಯ ಅಮೃತಯಾತ್ರ ಸ್ವಾಗತ ಕಾರ್ಯಕ್ರಮ ಎಂಬಿವು ನಡೆಯಲಿದೆ. ಚಿನ್ಮಯ ಮಿಷನ್‌ನ ೭೫ನೇ ವಾರ್ಷಿಕವನ್ನು ವಿಶ್ವದಾದ್ಯಂತ ಆಚರಿಸುವುದರಂಗವಾಗಿ ಜಿಲ್ಲೆಯಲ್ಲಿ ಕಾಸರಗೋಡು, ಬದಿಯಡ್ಕ, ಪೊಯಿನಾಚಿ, ಕಾಞಂಗಾಡ್, ನೀಲೇಶ್ವರ ಕೇಂದ್ರಗಳು ಜಂಟಿಯಾಗಿ ನಾಳೆ ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ಕಾರ್ಯಕ್ರಮ …

ಜೀವಕ್ಕೆ ಕಾವಲು ನಿಂತ ನಾಡಿಗೆ ಕಣ್ಣೀರು ತರಿಸಿ ಇಹಲೋಕ ತ್ಯಜಿಸಿದ ರಿಷಾದ್

ಬದಿಯಡ್ಕ: ಜನ್ಮತಃ ಹೃದಯ ಸಮಸ್ಯೆಯಿದ್ದ ರಿಷಾದ್ (21) ನಿಧನ ಹೊಂದಿದರು. ಬದಿಯಡ್ಕ ಪಳ್ಳತ್ತಡ್ಕದ ಮುಹಮ್ಮದ್- ದೈನಾಬಿ ದಂಪತಿಯ ಪುತ್ರನಾಗಿದ್ದಾರೆ. ರಂಧ್ರವಿರುವ ಹೃದಯದೊಂದಿಗೆ ರಿಷಾದ್ ಜನಿಸಿದ್ದರು. 10 ವರ್ಷದವರೆಗೆ ಮಗುವಿನ ಶರೀರ ಪ್ರಕೃತಿ ರಿಷಾದ್‌ರಿಗಿತ್ತು. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆಯ ಬಳಿಕ ಆರೋಗ್ಯ ಸ್ಥಿತಿಯಲ್ಲಿ ಮತ್ತಷ್ಟು ಸಮಸ್ಯೆ ಕಂಡು ಬಂತು. ಎರಡೂವರೆ ಲಕ್ಷ ರೂ. ವೆಚ್ಚ ಮಾಡಿ ಶಸ್ತ್ರಚಿಕಿತ್ಸೆ ಮಾಡಿದರೆ ರಿಷಾದ್‌ರ ಜೀವ ಉಳಿಸಬಹುದೆಂದು ಕೊಚ್ಚಿ ಅಮೃತ ಆಸ್ಪತ್ರೆಯ ಡಾಕ್ಟರ್‌ಗಳು ತಿಳಿಸಿದ್ದರು. ಆದರೆ ಬದುಕಿನ …

ನವಯುಗ ಯಾತ್ರೆಗೆ ಸಿದ್ಧವಾದ ಕುಂಬಳೆ: ಯುಡಿಎಫ್ ಕಾರ್ಯಕರ್ತರಲ್ಲಿ ಉತ್ಸಾಹ

ಕುಂಬಳೆ:  ಐಕ್ಯರಂಗದ  ನವಯುಗ ಯಾತ್ರೆ ಚಾಲನೆಗೆ ಕುಂಬಳೆ ಸಿದ್ಧತೆಯಲ್ಲಿದೆ. ಸಂಜೆ 4 ಗಂಟೆಗೆ ವಿಪಕ್ಷ ಮುಖಂಡ ವಿ.ಡಿ. ಸತೀಶನ್‌ರ ನೇತೃತ್ವದಲ್ಲಿರುವ ಯಾತ್ರೆಯನ್ನು ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋ ಪಾಲ್ ಉದ್ಘಾಟಿಸುವರು. ವಿಧಾನಸಭಾ ಚುನಾವಣೆಯ ಮುಂಚಿತವಾಗಿ ನಡೆ ಯುವ ಈ ಯಾತ್ರೆ  ರಾಜ್ಯ  ಆಡಳಿತ ನಡೆಸುವ ಸರಕಾರದ ದುರಾಡಳಿತವನ್ನು ಜನತೆಗೆ ತಿಳಿಸಲು ಉದ್ದೇಶಿಸಿ ಆಗಿದೆ ಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜಾಥಾದ ಮುಂಚಿತವಾಗಿ ನಾಯಕ ವಿ.ಡಿ. ಸತೀಶನ್ ಕೊಲ್ಲೂರು ಕ್ಷೇತ್ರದಲ್ಲಿ …

ಶೋಭಿಕ ವೆಡ್ಡಿಂಗ್ ಮಾಲ್‌ನ ಕಾಸರಗೋಡು ಶೋರೂಂ ಉದ್ಘಾಟನೆ ನಾಳೆ

ಕಾಸರಗೋಡು: ಖ್ಯಾತ ಜವುಳಿ ವ್ಯಾಪಾರ ಸಂಸ್ಥೆಯಾದ ಶೋಭಿಕ ವೆಡ್ಡಿಂಗ್ ಮಾಲ್‌ನ  ಕಾಸರಗೋಡು ಶೋ ರೂಂನ  ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ 10.30ಕ್ಕೆ  ಸಯ್ಯಿದ್ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ನೆರವೇರಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಭಾಗೀರಥಿ ಮುರುಳ್ಯ, ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಕಾಸರಗೋಡು  ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಕೆ.ಎಂ. ಹನೀಫಾ, ವಾರ್ಡ್ ಕೌನ್ಸಿಲರ್ ರಾಜೇಶ್ ಅಮೈ, ಕೇರಳವ್ಯಾಪಾರಿ …

ಬಾಲಕನ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ ರೂಟ್ ಬಸ್‌ಗಳ ಕಾರುಣ್ಯ ಯಾತ್ರೆ

ಪೆರ್ಮುದೆ: ಅಪೂರ್ವ ರೋಗ ತಗಲಿ ಚಿಕಿತ್ಸೆ ಪಡೆಯುತ್ತಿರುವ ಪೆರ್ಮುದೆ ಸಮೀಪದ ಕೆಣಿಮೂಲೆ ನಿವಾಸಿ ರೌಫ್ ಎಂಬವರ ಎರಡರ ಹರೆಯದ ಪುತ್ರ ಮುಹಮ್ಮದ್ ರಹೀಫ್‌ನ ಶಸ್ತ್ರ ಚಿಕಿತ್ಸೆಗೆ  ಭಾರಿ ವೆಚ್ಚ ತಗಲಿದೆಯೆಂದು ಕುಟುಂಬ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ-ಬಂದ್ಯೋಡು-ಕುಂಬಳೆ-ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಜಿಸ್ತಿಯ ಹಾಗೂ ಗಝಲ್ ಬಸ್‌ಗಳು ಕಾರುಣ್ಯ ಯಾತ್ರೆ ನಡೆಸಿವೆ. ಪೆರ್ಮುದೆಯಲ್ಲಿ  ಬಸ್‌ಗಳ ಕಾರುಣ್ಯ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಪೈವಳಿಕೆ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ, ಮಾಜಿ ಸದಸ್ಯ ಅಮೀರ್ …

ಕಾರಿಗೆ ಪೆಟ್ರೋಲ್ ಸುರಿದು ಯುವಕ ಸಾವು: ಪತ್ನಿ, ಮೂವರು ಮಕ್ಕಳು ಗಂಭೀರ

ಮಾನಂತವಾಡಿ: ಕಾರಿಗೆ ಪೆಟ್ರೋಲ್ ಸುರಿದು ಕಿಚ್ಚಿರಿಸಿ ಪತಿ ಸಾವನ್ನಪ್ಪಿ ಪತ್ನಿ ಮತ್ತು ಮೂವರು ಇಬ್ಬರು ಮಕ್ಕಳು ಗಂಭೀರ ಸುಟ್ಟು ಗಾಯಗೊಂಡ ಘಟನೆ ವಯನಾಡಿ ನಲ್ಲಿ  ನಿನ್ನೆ ತಡರಾತ್ರಿ  ನಡೆದಿದೆ. ಕಣ್ಣೂರು ಇರಿಟ್ಟಿ ವಳ್ಳಿತ್ತೋಡ್ ನಿವಾಸಿ ಹಾಗೂ ಕರ್ನಾಟಕದಲ್ಲಿ ದೀರ್ಘಕಾಲ ವ್ಯಾಪಾರ ನಡೆಸುತ್ತಿದ್ದ ಸಜೀರ್ (೪೪) ಸಾವನ್ನಪ್ಪಿದ ವ್ಯಕ್ತಿ.  ಗಂಭೀರ ಗಾಯಗೊಂಡ ಇವರ ಪತ್ನಿ  ನಜ್ಮುನ್ನೀಸ (30), ಮಕ್ಕಳಾದ ನಿಬ್ರಾನ್ (14), ನಿಸಾನ್ (9) ಮತ್ತು ಆಯಿಷಾ (2) ರನ್ನು  ವಯನಾಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ …

ಶಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆಯ ಬೇಡಿಕೆಯೊಂದಿಗೆ ಗ್ರಾಮ ವಿಕಸನ ಸಮಿತಿ ರಂಗಕ್ಕೆ

ಕುಂಬಳೆ: ಶಿರಿಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಬೇಕೆಂದು ಶಿರಿಯ ಗ್ರಾಮ  ವಿಕಸನ ಸಮಿತಿ ಆಗ್ರಹಿಸಿದೆ. ಕಳೆದ  ಜನವರಿ 9ರಂದು ಶಿರಿಯ ಬತ್ತೇರಿ ರಸ್ತೆಯ ಮೊಯ್ದೀನ್ ಕುಟ್ಟಿ ಸೀಮಾನ್ ಎಂಬವರ ಮನೆಗೆ  ಬೆಂಕಿ ತಗಲಿದಾಗ ದುರಂತ ಸ್ಥಳಕ್ಕೆ ತಲುಪಲು ಫಯರ್ ಫೋರ್ಸ್ ಅಧಿಕಾರಿಗಳಿಗೆ ದಾರಿಯಿಲ್ಲದೆ ಬಹಳಷ್ಟು ಸಂಕಷ್ಟ ಉಂಟಾಗಿರುವುದಾಗಿ ಶಿರಿಯ ವಿಕಸನ ಸಮಿತಿ ಪದಾಧಿಕಾರಿಗಳಾದ ಅಬ್ಬಾರ್ ಓನಂದ, ಮಶೂದ್, ಮುಹಮ್ಮದ್ ಎಂಬಿವರು  ಕುಂಬಳೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತುರ್ತು ರಕ್ಷಣಾ ಕಾರ್ಯಗಳಿಗೆ ತಡೆಯಾದ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ, ಸಂಸದ, …