ಶಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆಯ ಬೇಡಿಕೆಯೊಂದಿಗೆ ಗ್ರಾಮ ವಿಕಸನ ಸಮಿತಿ ರಂಗಕ್ಕೆ

ಕುಂಬಳೆ: ಶಿರಿಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಬೇಕೆಂದು ಶಿರಿಯ ಗ್ರಾಮ  ವಿಕಸನ ಸಮಿತಿ ಆಗ್ರಹಿಸಿದೆ. ಕಳೆದ  ಜನವರಿ 9ರಂದು ಶಿರಿಯ ಬತ್ತೇರಿ ರಸ್ತೆಯ ಮೊಯ್ದೀನ್ ಕುಟ್ಟಿ ಸೀಮಾನ್ ಎಂಬವರ ಮನೆಗೆ  ಬೆಂಕಿ ತಗಲಿದಾಗ ದುರಂತ ಸ್ಥಳಕ್ಕೆ ತಲುಪಲು ಫಯರ್ ಫೋರ್ಸ್ ಅಧಿಕಾರಿಗಳಿಗೆ ದಾರಿಯಿಲ್ಲದೆ ಬಹಳಷ್ಟು ಸಂಕಷ್ಟ ಉಂಟಾಗಿರುವುದಾಗಿ ಶಿರಿಯ ವಿಕಸನ ಸಮಿತಿ ಪದಾಧಿಕಾರಿಗಳಾದ ಅಬ್ಬಾರ್ ಓನಂದ, ಮಶೂದ್, ಮುಹಮ್ಮದ್ ಎಂಬಿವರು  ಕುಂಬಳೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತುರ್ತು ರಕ್ಷಣಾ ಕಾರ್ಯಗಳಿಗೆ ತಡೆಯಾದ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ, ಸಂಸದ, ಶಾಸಕರಲ್ಲಿ, ಜಿಲ್ಲಾಧಿಕಾರಿಯ ವರಲ್ಲಿ ಸಮಿತಿ ಆಗ್ರಹಿಸಿದೆ.

ರಾಷ್ಟ್ರೀಯ ಹೆದ್ದಾರಿ ಷಟ್ಪಥವಾದ ಬಳಿಕ ಶಿರಿಯ ಗ್ರಾಮ ಎರಡಾಗಿ ವಿಭಜಿಸಲ್ಪಟ್ಟಿದೆ. ಶಿರಿಯ ತೀರಪ್ರದೇಶದ ಪಶ್ಚಿಮ ಭಾಗದ ಲ್ಲಿರುವವರಿಗೆಸಂಚರಿಸಲು ಬಹಳ ಸಮಸ್ಯೆ ಉಂಟಾಗುತ್ತಿದೆ. ಮಕ್ಕಳಿಗೆ ಶಾಲೆಗೆ ತಲುಪಲು ವ್ಯವಸ್ಥೆ ಇಲ್ಲ ದಾಗಿದೆಯೆಂದು ಇದಕ್ಕೆ ತುರ್ತು ಪರಿಹಾರವಾಗಿ ಮೇಲ್ಸೇತುವೆ ಬೇಕೆಂದು ಸಮಿತಿ ಆಗ್ರಹಿಸಿದೆ.

RELATED NEWS

You cannot copy contents of this page