ರೈಲ್ವೇಯ ಸ್ಥಳದಿಂದ ಮರ ಕಡಿದು ಸಾಗಾಟ: ನಾಲ್ಕು ಮಂದಿ ಸೆರೆ
ಉಪ್ಪಳ: ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ ಸ್ಥಳದಿಂದ ತೇಗು ಸಹಿತ 11 ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಉಪ್ಪಳ ನಿವಾಸಿಗಳಾದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ರೋಶನ್ ಸಮೀರ್, ದಾದಪೀರ್, ಅಬ್ದುಲ್ಲ ಕುಂಞಿ, ರಾಜೇಶ್ ಎಂಬಿವರನ್ನು ಆರ್‌ಪಿಎಫ್‌ನ ಮಂಗಳೂರು ಇನ್‌ಸ್ಪೆಕ್ಟರ್ ಮನೋಜ್ ಕುಮಾರ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಡಿದ ಮರಗಳನ್ನು, ಅವುಗಳನ್ನು ಸಾಗಿಸಲು ಉಪಯೋಗಿಸಿದ ವಾಹನ ಹಾಗೂ ಮರ ಕತ್ತರಿಸಲು ಬಳಸಿದ ಯಂತ್ರಗಳನ್ನು ಆರ್‌ಪಿಎಫ್ ವಶಪಡಿಸಿಕೊಂಡಿದೆ. ಉಪ್ಪಳ ರೈಲ್ವೇ ನಿಲ್ದಾಣದ ಅಧೀನತೆಯಲ್ಲಿರುವ ಮರಗಳನ್ನು ಕಡಿದು ಸಾಗಿಸಲಾಗಿತ್ತು. ರೈಲ್ವೇಯ ಸ್ಥಳಕ್ಕೆ ಹೊಂದಿಕೊಂಡಿರುವ ಆರೋಪಿಗಳ …
Read more “ರೈಲ್ವೇಯ ಸ್ಥಳದಿಂದ ಮರ ಕಡಿದು ಸಾಗಾಟ: ನಾಲ್ಕು ಮಂದಿ ಸೆರೆ”