ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ನಿಧನ

ಬಾಯಾರು: ಇಲ್ಲಿನ ವಿಲ್ಲೇಜ್ ಕಚೇರಿ ಬಳಿ ವಾಸವಾಗಿರುವ ಆವಳ ಸಾಗು ನಿವಾಸಿ ದಿ| ಅಬ್ಬಾಸ್ ಹಾಜಿ- ದಿ| ಝುಲೈಕ ದಂಪತಿ ಪುತ್ರ ಈ ಹಿಂದೆ ಔಷಧಿ ಅಂಗಡಿ ಮಾಲಕರಾಗಿದ್ದ ಅಬ್ದುಲ್ ಅಜೀಜ್ ಸಾಗು (58) ನಿಧನ ಹೊಂದಿ ದರು. ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಮುಮ್ರಾಜ್, ಮಕ್ಕಳಾದ ಜುಲೈಕತ್ ನೂರ, ಮುನಾವರ, ತನ್ವೀರ, ಮರಿಯಮ್ಮ, ಮೊಹ ಮ್ಮದ್ ಅಯಾನ್, ಸಹೋದರರಾದ ಮುಹಮ್ಮದ್, ಅಬ್ದುಲ್ ರಜಾಕ್, …

4 ವರ್ಷದ ಹಿಂದೆ ಕೃಷಿಕರಿಗೆ ವಿದ್ಯುತ್ ಸಂಪರ್ಕ ನೀಡಿರುವುದಕ್ಕೆ ದಾಖಲೆಗಳಿಲ್ಲವೆಂದು ತಿಳಿಸಿ ಈಗ 7೦,೦೦೦ ರೂ. ಪಾವತಿಗೆ ನೋಟೀಸು

ಕುಂಬಳೆ: ನಾಲ್ಕು ವರ್ಷದ ಹಿಂದೆ ಕೃಷಿಯ ಅಗತ್ಯಕ್ಕಾಗಿ ಕೆಎಸ್‌ಇಬಿ ನೀಡಿದ ವಿದ್ಯುತ್ ಸಂಪರ್ಕಕ್ಕೆ ಸಾಕಷ್ಟು ದಾಖಲೆಗಳನ್ನು ನೀಡಲಾಗಿಲ್ಲವೆಂದು ಈಗ ಸೀತಾಂಗೋಳಿ ಕೆಎಸ್‌ಇಬಿ ಸೆಕ್ಷನ್ ನೌಕರರು ಪತ್ತೆಹಚ್ಚಿದ್ದಾರೆ..! ಆದರೆ ಅದಕ್ಕೆ ಯಾವುದೇ ಬೇಸರ ಮಾಡಬೇಕಾ ಗಿಲ್ಲವೆಂದು ಕೆಎಸ್‌ಇಬಿ ತಿಳಿಸಿದ್ದು, ಪುತ್ತಿಗೆ ಕೃಷಿಭವನ ವ್ಯಾಪ್ತಿಯಲ್ಲಿ ಈ ರೀತಿಯಲ್ಲಿ ಸಂಪರ್ಕ ನೀಡಿದ 2೦೦ರಷ್ಟು ಕೃಷಿಕರು 7೦,೦೦೦ ರೂ. ಮೊತ್ತವನ್ನು ಪಾವತಿಸಿ ದರೆ ಸಾಕು ಎಂದು ಉಪದೇಶಿಸಿದೆ. ಪುತ್ತಿಗೆ ಕೃಷಿಭವನ ವ್ಯಾಪ್ತಿಯ 2೦೦ರಷ್ಟು ಕೃಷಿಕರಿಗೆ ಇದಕ್ಕಿರುವ ಬಿಲ್ಲನ್ನು ಕಳುಹಿಸಿಕೊಡ ಲಾಗಿದೆ. ನಿಶ್ಚಿತ ದಿನಾಂಕದೊಳಗೆ …

ಕೋಟೆಕಣಿ ಕೂಡುರಸ್ತೆಯಲ್ಲಿ ಸಾರಿಗೆ ಅಡಚಣೆ ನಿತ್ಯ ಘಟನೆ: ಪ್ರಯಾಣಿಕರಲ್ಲಿ ಆತಂಕ

ಕಾಸರಗೋಡು: ಕರಂದಕ್ಕಾಡ್-ಮಧೂರು ರಸ್ತೆಯಲ್ಲಿ ಸೂರ್ಲು ಬಳಿ ಕೋಟೆಕಣಿಯ ಕೂಡು ರಸ್ತೆಯಲ್ಲಿ ಸಾರಿಗೆ ಅಡಚಣೆ ಎದುರಾಗುತ್ತಿದ್ದು, ಇದು ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಮೀಪುಗುರಿಯಿಂದ ಕಾಸರಗೋಡು ನಗರಕ್ಕೆ ಸಾಗುವ ವಾಹನಗಳಿಗೆ ಕೋಟೆಕಣಿ ಜಂಕ್ಷನ್‌ನ ಎತ್ತರವಾದ ಈ ಪ್ರದೇಶವು ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಕೂಡು ರಸ್ತೆಗೆ ತಲುಪುವಷ್ಟರಲ್ಲಿ ವಾಹನಗಳು ದಿಢೀರ್ ನಿಲುಗಡೆಗೊಳಿಸಬೇಕಾಗುತ್ತಿದ್ದು ಈ ವೇಳೆ ಮುಂದಿರುವ ವಾಹಕ್ಕೆ ಹಿಂದಿನಿಂದ ಬರುವ ವಾಹನವು ಢಿಕ್ಕಿಯಾಗುವ ಸಾಧ್ಯತೆ ಹೆಚ್ಚಿದೆ. ಹೊಸ ಬಸ್ ನಿಲ್ದಾಣಕ್ಕೆ ಸಾಗುವ ಈ ಕೋಟೆಕಣಿ ರಸ್ತೆಯ ಅಭಿವೃದ್ಧಿ ಜೊತೆಗೆ ಈ …

ಪೈವಳಿಕೆ ಪಂಚಾಯತ್ ವಸತಿ ಯೋಜನೆ: ಸಿಪಿಎಂ ನಡೆಸಿದ ಮಾರ್ಚ್ ಕಪಟ ನಾಟಕ-ಯುಡಿಎಫ್

ಪೈವಳಿಕೆ: ಪಂಚಾಯತ್‌ನ ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ಪಾವತಿಸಲಾಗಿಲ್ಲ ಎಂಬ ಕಾರಣಕ್ಕೆ ಸಿಪಿಎಂ ನಡೆಸಿದ ಮಾರ್ಚ್ ಹಾಗೂ ಧರಣಿ ಕಪಟ ನಾಟಕವೆಂದು ಪೈವಳಿಕೆ ಪಂಚಾಯತ್ ಯುಡಿಎಫ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಸಂಚಾಲಕ ಝಡ್.ಎ. ಕಯ್ಯಾರ್ ಆರೋಪಿಸಿದ್ದಾರೆ.  ತಮ್ಮದೇ ಸರಕಾರದ ವಿರುದ್ಧ ಸಿಪಿಎಂ ಮುಷ್ಕರ ನಡೆಸಿದಂತಾಗಿದೆ ಇದು ಎಂದು ಯುಡಿಎಫ್ ಮುಖಂಡರು ತಿಳಿಸಿದ್ದಾರೆ. ಲೈಫ್ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸಲು ಹಿಂದಿನ ಆಡಳಿತ ಸಮಿತಿಗೆ ಸಾಧ್ಯವಾಗದ ಕಾರಣ ರಾಜ್ಯ ಸರಕಾರ …

ಅನಾಥ ವೃದ್ಧೆಗೆ ನೆರಳಾದ ಪಿಂಕ್ ಪೊಲೀಸ್

ಕಾಸರಗೋಡು: ಅನಾಥರಂತಿದ್ದ ವೃದ್ದೆಗೆ ಕಾಸರಗೋಡು ಪಿಂಕ್ ಪೊಲೀಸರು ಆಶ್ರಯ ನೀಡಿದ್ದಾರೆ. ಪಾರೆಕಟ್ಟೆ ಭಾಗದಲ್ಲಿ ಸ್ಥಳೀಯರ ನೆರವಿನೊಂದಿಗೆ ಜೀವಿಸುತ್ತಿದ್ದ ೭೫ ವರ್ಷದ ವಾರಿಜ ಎಂಬ ವೃದ್ಧೆಯನ್ನು ಪಿಂಕ್ ಪೊಲೀಸರು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ. ವಾರಿಜರ ದಯನೀಯ ಸ್ಥಿತಿ ಗಮನಕ್ಕೆ ಬಂದ ಪಿಂಕ್ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಅವರಿಗೆ ಅಗತ್ಯದ ವೈದ್ಯ ಸಹಾಯ ಲಭ್ಯಗೊಳಿಸಿದ್ದಾರೆ. ಬಳಿಕ ಎಎಸ್‌ಐ ಶಾರದ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಗೀತ, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ರೇಷ್ಮ, ರಮ್ಯ ಎಂಬಿವರು ಅಧಿಕಾರಿಗಳೊಂದಿಗೆ ಮಾತನಾಡಿ ವಾರಿಜರನ್ನು …