ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರು-ಮುಖ್ಯಮಂತ್ರಿ

ಕಾಸರಗೋಡು: ಕಳೆದ 10 ವರ್ಷದೊಳಗೆ ನಾಲ್ಕೂವರೆ ಲಕ್ಷದಷ್ಟು ಕುಟುಂಬಗಳು ಭೂಮಿಯ ಹಕ್ಕುದಾರರಾಗಿ ಬದಲಾದರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನುಡಿದರು. ರಾಜ್ಯ ಮಟ್ಟದ ಪಟ್ಟಾ ಮೇಳದಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಪಟ್ಟೆ ಮೇಳವನ್ನು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್‌ನಲ್ಲಿ ಆನ್‌ಲೈನ್ ಆಗಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಒಂದು ಕುಟುಂಬದ ನಾಲ್ಕು ಮಂದಿ ಎಂಬ ಲೆಕ್ಕದಂತೆ 40 ಲಕ್ಷ ವ್ಯಕ್ತಿಗಳು, ನಾಲ್ಕೂವರೆ ಲಕ್ಷ ಪಟ್ಟೆಗಳ ಫಲಾನುಭವಿಗಳಾದರು. ಕಳೆದ ಸರಕಾರದ ಕಾಲದಲ್ಲಿ ಪ್ರಳಯ, ಅತಿವೃಷ್ಠಿ, ಕೊರೊನಾ, ನಿಫಾ ಮೊದಲಾದ ವಿಕೋಪಗಳು ಉಂಟಾದಾಗಲೂ, …

ವಿಧಾನಸಭಾ ಚುನಾವಣೆ: ಗೋಡೆಬರಹಮೂಲಕ ಪ್ರಚಾರಕ್ಕೆ ಎನ್‌ಡಿಎ ಚಾಲನೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಪ್ರಚಾರದಂಗವಾಗಿ ಎನ್‌ಡಿಎ ನೇತೃತ್ವದಲ್ಲಿ ಗೋಡೆ ಬರಹ ಪ್ರಚಾರಕ್ಕೆ ಕಾಸರಗೋಡಿನಲ್ಲಿ ನಿನ್ನೆ ಚಾಲನೆ ನೀಡಲಾಯಿತು. ಬಿಜೆಪಿ  ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಗೋಡೆ ಬರಹ ಬರೆಯುವ ಮೂಲಕ ಪ್ರಚಾರದ ಉದ್ಘಾಟನೆ ನಿರ್ವಹಿಸಿದರು. ಪಕ್ಷದ ಕಲ್ಲಿಕೋಟೆ ವಲಯ ಅಧ್ಯಕ್ಷ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ,  ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಉಪಾಧ್ಯಕ್ಷ ಪಿ. ರಮೇಶ್, ಕಾರ್ಯದರ್ಶಿ ಪ್ರಮೀಳ ಮಜಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರ  ಕುದ್ರೆಪ್ಪಾಡಿ, ಕೋಶಾಧಿ ಕಾರಿ ವೀಣಾ ಅರಣ್ …

ಸೋಂಕಾಲಿನ ಮನೆ ಅಂಗಳದಲ್ಲಿ ಸತ್ತು ಬಿದ್ದ ನಾಯಿ ಮರಿ: ಸ್ಥಳೀಯರಿಗೆ ದುರ್ನಾತ ಸಮಸ್ಯೆ

ಉಪ್ಪಳ: ನೂತನ ಮನೆಯ ಅಂಗಳದಲ್ಲಿ ಬೀದಿ ನಾಯಿಯ ಐದು ಮರಿಗಳು ನಿಗೂಢವಾಗಿ ಸತ್ತು ಬಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುರ್ವಾಸನೆಯಿಂದ ಪರಿಸರ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಮಂಗಲ್ಪಾಡಿ ಪಂಚಾಯತ್‌ನ 20ನೇ ವಾರ್ಡ್ ಪ್ರತಾಪನಗರ ರಸ್ತೆಯ ಸೋಂಕಾಲಿನಲ್ಲಿ ಈ ಘಟನೆ ನಡೆದಿದೆ. ಬಾಯಾರು ನಿವಾಸಿ ಯೋರ್ವರು ನೂತನವಾಗಿ ನಿರ್ಮಿಸಿ ಕೆಲಸ ಪೂರ್ತಿಗೊಂಡ ಮನೆಯ ಅಂಗಳದ ಹಾಗೂ ಸಿಟ್‌ಔಟ್‌ನಲ್ಲಿ ಒಟ್ಟು ಐದು ನಾಯಿ ಮರಿಗಳು ಎರಡು ದಿನಗಳ ಹಿಂದೆ ಸತ್ತು ಹೋಗಿ ಕೊಳೆತ ಸ್ಥಿತಿಯಲ್ಲಿ ಸ್ಥಳೀಯರ ಗಮನಕ್ಕೆ ಬಂದಿದೆ. ಇದು …

ಕಾಸರಗೋಡು ನಗರದಲ್ಲಿ ಆರೋಗ್ಯ ಸಚಿವೆಯ ಪ್ರತಿಕೃತಿ ದಹಿಸಿ ಕೆಎಸ್‌ಯು ಪ್ರತಿಭಟನೆ

ಕಾಸರಗೋಡು: ನಿರಂತರ ಲೋಪಗಳು ಮಾತ್ರ ಸಂಭವಿಸುತ್ತಿರುವ ಆರೋಗ್ಯ ಇಲಾಖೆಯ ಆಡಳಿತ ಪರಾಜಯವನ್ನು ಮರೆಮಾಚಿ ಸುಳ್ಳು ಕತೆಗಳನ್ನು ಹಬ್ಬಿಸುತ್ತಿರುವ ಎಸ್‌ಎಫ್‌ಐ, ಡಿವೈಎಫ್‌ಐ ಕಾರ್ಯಕರ್ತರು ಕೇರಳವನ್ನು ಕಲಾಪಭೂಮಿಯನ್ನಾಗಿ ಮಾಡಲು ಸಚಿವೆ ವೀಣಾ ಜೋರ್ಜ್ ಯತ್ನಿಸುತ್ತಿರುವುದಾಗಿ ಕೆಎಸ್‌ಯು ಜಿಲ್ಲಾಧ್ಯಕ್ಷ ಜವಾದ್ ಪುತ್ತೂರು ಆರೋಪಿಸಿದರು. ಕಾಸರಗೋಡು ನಗರದಲ್ಲಿ ಕೆಎಸ್‌ಯು ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಚಿವೆ ವೀಣಾ ಜೋರ್ಜ್‌ರ ಪ್ರತಿಕೃತಿಯನ್ನು ದಹಿಸಲಾಯಿತು. ಪೊಲೀಸರ ಸಹಾಯದೊಂದಿಗೆ ಕೆಎಸ್‌ಯು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಆಕ್ರಮಿಸಿ ಪಕ್ಷದ ಧ್ವಜ ಪತಾಕೆಗಳನ್ನು …