ವಿಧಾನಸಭಾ ಚುನಾವಣೆ: ಗೋಡೆಬರಹಮೂಲಕ ಪ್ರಚಾರಕ್ಕೆ ಎನ್‌ಡಿಎ ಚಾಲನೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಪ್ರಚಾರದಂಗವಾಗಿ ಎನ್‌ಡಿಎ ನೇತೃತ್ವದಲ್ಲಿ ಗೋಡೆ ಬರಹ ಪ್ರಚಾರಕ್ಕೆ ಕಾಸರಗೋಡಿನಲ್ಲಿ ನಿನ್ನೆ ಚಾಲನೆ ನೀಡಲಾಯಿತು. ಬಿಜೆಪಿ  ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಗೋಡೆ ಬರಹ ಬರೆಯುವ ಮೂಲಕ ಪ್ರಚಾರದ ಉದ್ಘಾಟನೆ ನಿರ್ವಹಿಸಿದರು. ಪಕ್ಷದ ಕಲ್ಲಿಕೋಟೆ ವಲಯ ಅಧ್ಯಕ್ಷ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ,  ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಉಪಾಧ್ಯಕ್ಷ ಪಿ. ರಮೇಶ್, ಕಾರ್ಯದರ್ಶಿ ಪ್ರಮೀಳ ಮಜಲ್, ಸೆಲ್ ಕೋ-ಆರ್ಡಿನೇಟರ್ ಸುಕುಮಾರ  ಕುದ್ರೆಪ್ಪಾಡಿ, ಕೋಶಾಧಿ ಕಾರಿ ವೀಣಾ ಅರಣ್ ಶೆಟ್ಟಿ, ಬದಿಯಡ್ಕ ಮಂಡಲ ಅಧ್ಯಕ್ಷ ಎಂ. ಗೋಪಾಲ ಕೃಷ್ಣ,ಎನ್, ಸತೀಶ್, ವರಪ್ರಸಾದ್ ಕೋಟೆಕಣಿ, ಮಹಿಳಾ ಮೋರ್ಛಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಒಬಿಸಿ ಮೋರ್ಛಾ ಜಿಲ್ಲಾ ಕಾರ್ಯದರ್ಶಿ ಅಶೋಕನ್ ಚೆಟ್ಟಿಯಾರ್, ಕಿಶೋರ್, ಗಣೇಶ್ ಮೊದಲಾದವರು ಭಾಗವಹಿಸಿದರು.

RELATED NEWS

You cannot copy contents of this page